Asianet Suvarna News Asianet Suvarna News

ಕರ್ನಾಟಕದಿಂದ ಕಾಂಗ್ರೆಸ್‌ ಬ್ಯಾನ್‌ ಆಗಲಿದೆ: ಬಿ.ವೈ. ವಿಜಯೇಂದ್ರ ಟೀಕೆ

ಬಿಜೆಪಿ ಸುನಾಮಿಯಿಂದ ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ, ಅವರಿಗೆಲ್ಲ ಸೋಲಿನ ಭೀತಿ ಕಾಡಲಾರಂಭಿಸಿದೆ. ಶೀಘ್ರವಾಗಿ ಕರ್ನಾಟಕದಿಂದ ಕಾಂಗ್ರೆಸ್‌ ಬ್ಯಾನ್‌ ಆಗಲಿದೆ.

Congress will be banned from Karnataka criticism by Vijayendra sat
Author
First Published May 4, 2023, 11:31 PM IST

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಮೇ 04): ರಾಜ್ಯದಲ್ಲಿ ಬಿಜೆಪಿ ಸುನಾಮಿಯಿಂದ ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ, ಅವರಿಗೆಲ್ಲ ಸೋಲಿನ ಭೀತಿ ಕಾಡಲಾರಂಭಿಸಿದೆ. ಶೀಘ್ರವಾಗಿ ಕರ್ನಾಟಕದಿಂದ ಕಾಂಗ್ರೆಸ್‌ ಬ್ಯಾನ್‌ ಆಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಗೆದ್ದೆ ಬಿಟ್ಟಿದ್ದೀವಿ ಅಂತ ಬೀಗುತ್ತಿದ್ದ ಕಾಂಗ್ರೆಸ್ಸಿಗರು  ಪ್ರಧಾನಿ ನರೇಂದ್ರ ಮೋದಿಯವರ ಬಿರುಗಾಳಿಯಿಂದ ಹರಾಶರಾಗಿದ್ದಾರೆ ಎಂದರು.

ಮೋದಿ & ಅಮಿತ್ ಶಾ ಪ್ರಚಾರದಿಂದ ಬಿಜೆಪಿ ಸುನಾಮಿ ಅಲೆಯಿದೆ. ಮೋದಿ ಮತ್ತು ಅಮಿತ್ ಶಾ ಪ್ರವಾಸ ಹೆಚ್ಚಾದಂತೆಲ್ಲಾ ಕಾಂಗ್ರೆಸ್ಸಿಗರು ಹತಾಶರಾಗಿದ್ದಲ್ಲದೆ, ಸೋಲು ಅವರ ಎದುರಿಗೆ ಕಾಣಲಾರಂಭಿಸಿದೆ ಎಂದರು. ಬಿಜೆಪಿ ಪಕ್ಷಕ್ಕೆ ರಾಜ್ಯದ ಜನ ಆಶೀರ್ವಾದ ಮಾಡುತ್ತಿದ್ದಾರೆ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸೋಲಿನ ಭೀತಿ ಕಾಂಗ್ರೆಸ್ಸಿಗರ ಬೆನ್ನು ಹತ್ತಿದೆ ಎಂದರು. ಕರ್ನಾಟಕದಿಂದಲೇ ಕಾಂಗ್ರೆಸ್ ಬ್ಯಾನ್ ಆಗಲಿದೆ. ಇನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ವಿಷಯ ಕುರಿತು ಮಾತನಾಡಿದ ಅವರು ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಸೋಲಿನ ಭಯದಿಂದ, ಗಲ್ಲಿ ಗಲ್ಲಿ ಸುತ್ತಾಡ್ತಿದಾರೆ! ಎಚ್. ವಿಶ್ವನಾಥ್ ಟೀಕೆ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ಮಾಡಿದ್ದು,,ದೇಶದಲ್ಲಿಯೇ ಕಾಂಗ್ರೆಸ್ ಬ್ಯಾನ್ ಆಗುತ್ತದೆ. ಕರ್ನಾಟಕದಿಂದಲೂ ಕಾಂಗ್ರೆಸ್ ಬ್ಯಾನ್ ಆಗುತ್ತದೆ. ದೇಶ ಭಕ್ತ ಸಂಘಟನೆಯನ್ನು ಪಿಎಫ್ ಐಗೆ  ಹೋಲಿಸಿದ್ದು ಸರಿಯಲ್ಲ ಎಂದರು.  ಕಾಂಗ್ರೆಸ್ ಗೆ ವಿನಾಶಕಾಲೇ ವಿಪರೀತ ಬುದ್ದಿ ಎಂಬಂತಾಗಿದೆ. ಅದು ಮನಸಿನಲ್ಲಿರುವ ವಿಷವನ್ನು ಕಕ್ಕುತ್ತಿರೋದು ಒಳ್ಳೆಯದು. ಜನತೆಗೆ ಕಾಂಗ್ರೆಸ್ ಬುದ್ದಿ ಮನವರಿಕೆ ಆಗುತ್ತಿದೆ. ರಾಜ್ಯದ ಜನ ಕಾಂಗ್ರೆಸ್ ಗೆ ಅವಕಾಶ ಕೊಡೋದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾನೇ ಇದೆಲ್ಲ ಆಗೋದು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರೋಲ್ಲ  ಎಂದರು.

ಮುಧೋಳ ಮತಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಭರ್ಜರಿ ರೋಡ್ ಶೋ ನಡೆಯಿತು. ಬಿಜೆಪಿ ಅಭ್ಯರ್ಥಿ ಸಚಿವ ಗೋವಿಂದ ಕಾರಜೋಳ ಪರ ವಿಜಯೇಂದ್ರ ಪ್ರಚಾರ ಕೈಗೊಂಡರು. ಮುಧೋಳ ಪಟ್ಟಣದಲ್ಲಿ ಶಿವಾಜಿ ಸರ್ಕಲ್ ನಿಂದ ಆರಂಭವಾದ ರೋಡ್ ಶೋ ಅಂಬೇಡ್ಕರ್ ಸರ್ಕಲ್, ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣ ಮೂಲಕ ಗಾಂಧಿ ಸರ್ಕಲ್ ವರೆಗೆ ನಡೆಯಿತು.

ಕಡ್ಡಾಯ ಮತದಾನ ಮಾಡುವಂತೆ ಮನವಿ ಮಾಡಿದ ನವ ವಧು-ವರರು: ಕೋಲಾರ (ಮೇ 04):  ಕೋಲಾರ ಜಿಲ್ಲೆಯ ಮುಳಬಾಗಲಿನಲ್ಲಿ ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಮೇ 10ರಂದು ತಪ್ಪದೇ ಮತದಾನ ಮಾಡುವಂತೆ ಮದುವೆಗೆ ಬಂದ ಸಂಬಂಧಿಕರಿಗೆ,ಅತಿಥಿಗಳಿಗೆ ವಿಭಿನ್ನವಾಗಿ ಕರೆ ನೀಡಿದರು.

ಉಡುಪಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ: ಭಾರಿ ಕೊಡುಗೆ

ನೂತನ ದಂಪತಿ ಚರಣ್ ರಾಜ್ ಮತ್ತು ಪ್ರಮೀಳಾ ಮತ್ತು ಅವರ ಸಂಬಂಧಿಕರು ಸುಮಾರು 600 ಮಂದಿ ಆಹ್ವಾನಿತರಿಗೆ ಮತ ಹಾಕುವಂತೆ ಫಲಕಗಳನ್ನು ಹಿಡಿದು ಅರಿವು ಮೂಡಿಸುವ ಮೂಲಕ ಗಮನಸೆಳೆದಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುತ್ಯಾಲಪೇಟೆಯಲ್ಲಿರುವ ಶ್ರೀ ಉದ್ಭವ ಶಿವಲಿಂಗೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು,ಮುಳಬಾಗಲು ಕ್ಷೇತ್ರದ ಚುನಾವಣಾ ಸ್ವೀಪ್ ಅಧಿಕಾರಿಗಳ ಆಲೋಚನೆಯಿಂದ ಈ ರೀತಿ ವಿಭಿನ್ನವಾಗಿ ಜಾಗೃತಿ ಮೂಡಿಸಲಾಗಿದ್ದು,ಆರೋಗ್ಯ ನಿರೀಕ್ಷಕಿ ಪ್ರತಿಭಾ ಇದೇ ವೇಳೆ ಭಾಗಿಯಾಗಿದ್ದರು.

Follow Us:
Download App:
  • android
  • ios