ಧ್ರುವನಾರಾಯಣ ಅಂತ್ಯಕ್ರಿಯೆ ಮುನ್ನ ಪುತ್ರನಿಗೆ ಕೈ ಟಿಕೆಟ್ ಘೋಷಿಸಿ: ಕಾಂಗ್ರೆಸ್‌ಗೆ ಪೀಕಲಾಟ
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ ಅವರ ಅಂತ್ಯಕ್ರಿಯೆಗೂ ಮೊದಲೇ ಅವರ ಪುತ್ರ ದರ್ಶನ್‌ಗೆ ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ಘೋಷಣೆ ಮಾಡಬೇಕು.
ಚಾಮರಾಜನಗರ (ಮಾ.12): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ ಅವರ ಅಂತ್ಯಕ್ರಿಯೆಗೂ ಮೊದಲೇ ಅವರ ಪುತ್ರ ದರ್ಶನ್‌ಗೆ ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ಘೋಷಣೆ ಮಾಡಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಆದರೆ, ಈ ಒತ್ತಡದಿಂದ ಕಾಂಗ್ರೆಸ್ ನಾಯಕರಿಗೆ ಪೀಕಲಾಟ ಶುರುವಾಗಿದೆ.
ಮಾ.11ರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ಮೃತಪಟ್ಟ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ ಅವರಿಂದ ಕಾಂಗ್ರೆಸ್ ಬಡವಾಗಿದೆ. ಧೀಮಂತ ನಾಯಕನನ್ನು ಕಳೆದುಕೊಮಡಿದೆ ಎಂದು ಕಾಂಗ್ರೆಸ್‌ನ ಅಧ್ಯಕ್ಷರ ಹಾದಿಯಾಗಿ ಎಲ್ಲರೂ ಕಂಬನಿ ಮಿಡಿದಿದ್ದಾರೆ. ಆದರೆ, ಅವರು ಪಕ್ಷಕ್ಕಾಗಿ ದುಡಿದ ಸೇವೆಯನ್ನು ಪರಿಗಣಿಸಿ ಅವರ ಪುತ್ರ ದರ್ಶನ್‌ಗೆ ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪರ್ಧೆ ಮಾಡಲು ಟಿಕೆಟ್ ನೀಡಿ ಧೃವನಾರಾಯಣ ಅವರ ಪಕ್ಷನಿಷ್ಠ ಹಾಗೂ ಹಲವು ದಶಕಗಳ ಸೇವೆಗೆ ಗೌರವ ಸಲ್ಲಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ನಂಜನಗೂಡಿಂದ ಸ್ಪರ್ಧಿಸುವ ಆಸೆ ಹೊಂದಿದ್ದ ಧ್ರುವ ನಾರಾಯಣ್
ಡಿಕೆಶಿ- ಸಿದ್ದರಾಮಯ್ಯ ವಿರುದ್ಧ ಘೋಷಣೆ: ಇನ್ನು ಧೃವನಾರಾಯಣ ಅವರ ಅಂತ್ಯಕ್ರಿಯೆ ನೇರವೇರಿಸಲು ಕಾಂಗ್ರೆಸ್‌ನ ಘಟಾನುಘಟಿ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸೇರಿ ಅನೇಕ ಮುಖಂಡರು ಹಾಜರಾಗಿದ್ದರು. ಈ ವೇಳೆ ಧೃವನಾರಾಯಣ್ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಧೃವನಾರಾಯಣ ಅಭಿಮಾನಿಗಳು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೆಸರನ್ನು ಹೇಳಿ ಟಿಕೆಟ್ ನೀಡುವಂತೆ ಘೋಷಣೆ ಕೂಗಿದರು. ಧೃವನಾರಾಯಣ ಅವರ ಪುತ್ರ ದರ್ಶನ್‌ಗೆ ಸ್ಥಳದಲ್ಲೇ ಟಿಕೇಟ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಟಿಕೆಟ್ ಹಂಚಿಕೆ ಗೊಂದಲದಿಂದ ಧೃವನಾರಾಯಣ ಸಾವು: ಇನ್ನು ಈಗಾಗಲೇ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಧೃವನಾರಾಯಣ ಹಾಗೂ ಎಚ್.ಸಿ. ಮಹದೇವಪ್ಪ ಅವರು ಪ್ರಭಲ ಆಕಾಂಕ್ಷಿ ಆಗಿದ್ದರು. ಎಚ್.ಸಿ ಮಹದೇವಪ್ಪ ಹಾಗೂ ಧೃವನಾರಾಯಣ ನಡುವೆ ನಡೆದಿದ್ದ ಪೈಪೋಟಿ ನಡೆದಿತ್ತು. ಈ ಗೊಂದಲದ ಹಿನ್ನೆಲೆಯಲ್ಲಿ ಇಬ್ಬರ ಹೆಸರನ್ನೂ ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ರವಾನಿಸಿದ್ದರು. ಆದರೆ, ಮಹದೇವಪ್ಪಗೆ ಟಿಕೆಟ್ ನೀಡಬಾರದು ಎಂದು ಧೃವನಾರಾಯಣ ಹೇಳುತ್ತಿದ್ದರು. ಆದರೆ, ಕಾಂಗ್ರೆಸ್‌ನ ಟಿಕೆಟ್ ಹಂಚಕೆಯ ಒತ್ತಡದಿಂದಲೇ ಧೃವನಾರಾಯಣ ಅವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಧೃವನಾರಾಯಣ ಅವರ ಮಗ ದರ್ಶನ್‌ಗೆ ನಂಜನಗೂಡು ವಿಧಾನಸಭಾ ಟಿಕೆಟ್ ಅನ್ನು ಈಗಲೇ ಘೋಷಣೆ ಮಾಡಬೇಕು. ಮಣ್ಣು ಮಾಡುವ ಮೊದಲೇ ಧೃವನಾರಾಯಣ ಮಗನಿಗೆ ಟಿಕೆಟ್ ಘೋಷಣೆ ಮಾಡುವಂತೆ ಕೈ ನಾಯಕರ ಎದುರು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಎನ್. ಮಹೇಶ್‌ಗೆ ಎದೆನೋವು: ಇನ್ನು ನಿನ್ನೆ ಶನಿವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ ಅವರು ಸಾವನ್ನಪ್ಪಿದ ಬೆನ್ನಲ್ಲೇ ಶಾಸಕ ಎನ್. ಮಹೇಶ್ ಅವರು ಮೈಸೂರಿನ ನಿವಾಸಕ್ಕೆ ಹೋಗಿ ಅಂತಿಮ ದರ್ಶನ ಪಡೆದಿದ್ದರು. ಧೃವನಾರಾಯಣ ಅವರ ಮೃತದೇಹದ ಅಂತಿಮ ದರ್ಶನ ಪಡೆದಿದ್ದ ವೇಳೆ ಶಾಸಕ ಎನ್. ಮಹೇಶ್ ಕಂಬನಿ ಮಿಡಿದಿದ್ದರು. ಭಾರವಾದ ಮನಸ್ಸಿನಿಂದಲೇ ಮನೆಗೆ ತೆರಳಿದ್ದರು. ಆದರೆ, ಮನೆಗೆ ತೆರಳಿದ ಶಾಸಕ ಎನ್. ಮಹೇಶ್ ಅವರಿಗೆ ಎದೆಯ ನೋವು ಕಾಣಿಸಿಕೊಂಡಿದೆ.
ಮಂಡ್ಯದಲ್ಲಿ ನಾಳೆ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದು: ಮೋದಿ ಕಾರ್ಯಕ್ರಮಕ್ಕೆ ಟಾಂಗ್ ಕೊಡುವ ಯತ್ನ ವಿಫಲ
ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ: ನಿನ್ನೆ ರಾತ್ರಿ ಮನೆಯಲ್ಲಿ ಊಟವನ್ನು ಮುಗಿಸಿ ಮಲಗಲು ಹೋದ ವೇಳೆ ತೀವ್ರವಾಗಿ ಎದೆ ನೋವು ಉಲ್ಬಣಿಸಿದೆ. ಇನ್ನು ನೋವು ತಾಳಲಾರದೇ ರಾತ್ರಿ 12.30ರಲ್ಲಿ ಶಾಸಕ ಎನ್. ಮಹೇಶ್ ಮೈಸೂರಿನ ಅಪೋಲೋ ಅಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಆರೋಗ್ಯದಲ್ಲಿ ಯಾವುದೇ ಗಂಭೀರ ಪ್ರಮಾಣದ ತೊಂದರೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.