ಕೇಂದ್ರ-ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು: ಶಾಸಕ ರಮೇಶ್ ಕುಮಾರ್
9 ವರ್ಷದಿಂದಲೂ ಮೋದಿ ಸರ್ಕಾರವು ಸುಳ್ಳು ಭರವಸೆಗಳಿಂದ ದೇಶದ ಜನತೆಗೆ ಮೋಸ ಮಾಡುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಕೋಲಾರ (ಏ.03): 9 ವರ್ಷದಿಂದಲೂ ಮೋದಿ ಸರ್ಕಾರವು ಸುಳ್ಳು ಭರವಸೆಗಳಿಂದ ದೇಶದ ಜನತೆಗೆ ಮೋಸ ಮಾಡುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು. ಶ್ರೀನಿವಾಸಪುರ ಪಟ್ಟಣದ ಮಾವಿನ ಮಂಡಿಯಲ್ಲಿ ಭಾನುವಾರ ಅಲ್ಪಸಂಖ್ಯಾತ ಸಮುದಾಯದ ಸಮಾವೇಶ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಮೋದಿ ಸರ್ಕಾರವು ದೇಶದಲ್ಲಿ ಹಣದುಬ್ಬರ ಹೆಚ್ಚಾಗುವಂತೆ ಮಾಡುತ್ತಿದೆ. ಇದನ್ನು ಪ್ರಶ್ನಿಸಿದ ಕಾರಣಕ್ಕಾಗಿ ರಾಹುಲ್ ಗಾಂಧಿ ಸಂಸದ ಸ್ಥಾನವನ್ನೆ ಕಳೆದುಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ. ಇದು ಕೇಂದ್ರ ಸರ್ಕಾರದ ದುರಾಡಳಿತವನ್ನು ಎತ್ತಿ ತೋರಿಸುತ್ತದೆ ಎಂದರು.
ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತಕ್ಕೆ ಬರಬೇಕು. ಈಗಾಗಲೇ ಕ್ಷೇತ್ರದಲ್ಲಿ ಅಲ್ಪಸಂಖ್ಯಾಂತರಿಗೆ ಸರ್ಕಾರದ ಬಹುತೇಕ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಿಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಸರ್ಕಾರದ ಯೋಜನೆಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಎಂಎಲ್‌ಸಿ ನಸೀರ್ ಅಹಮ್ಮದ್ ಮಾತನಾಡಿ, 2013ರಲ್ಲಿ ವಕ್ಪಬೋರ್ಡ್‌ನಿಂದ ಮಸೀದಿಯ ಮೌಲಿಗಳಿಗೆ ಸಂಬಳ ನೀಡಲಾಗುತ್ತಿದೆ.
ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯ ಮಾಡಿಲ್ಲ: ಬಾಲಚಂದ್ರ ಜಾರಕಿಹೊಳಿ
ಬಿಜೆಪಿ ಸರ್ಕಾರವು ನಮ್ಮ ಸಮುದಾಯದ 2ಬಿ ಮೀಸಲಾತಿ ತೆಗೆದಿದ್ದು, ಮುಂದಿನ ದಿನಗಳಲ್ಲಿ ಮೀಸಲಾತಿ ವಿಚಾರವಾಗಿ ಕೋರ್ಚ್ ಮೆಟ್ಟಿಲು ಏರುವುದಾಗಿ ತಿಳಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಜಿ.ಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಶರೀಫ್, ಪುರಸಭೆ ಸದಸ್ಯರಾದ ಕೆ.ಅನೀಸ್ ಅಹಮ್ಮದ್, ಮುನಿರಾಜು, ಮುಖಂಡರಾದ ಸಂಜಯ್‌ರೆಡ್ಡಿ, ಕೆ.ಕೆ.ಮಂಜು, ಬಿ.ಎಲ್.ಸೂರ್ಯನಾರಾಯಣ ಮತ್ತಿತರರು ಇದ್ದರು.
ಸಿದ್ದು ಮೂಲೆಗುಂಪಾದ್ರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪು ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಇರುವುದಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ಕುರುಬರ ಬೆಂಬಲ ಕೋರಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುನಿಸಿಕೊಂಡು ಹೊರಹೋದರೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬಂದಿರುವ ಗತಿಯೇ ಕರ್ನಾಟಕದಲ್ಲೂ ಬರಬಹುದು ಎಂದು ಎಚ್ಚರಿಸಿದರು. ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವುದು ನಿಶ್ಚಿತ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಎಂ.ಬಿ.ಪಾಟೀಲ್ ವಿಶ್ವಾಸ
ಕಳೆದ ಬಾರಿ ಕೆಲವರು ಸಿದ್ದರಾಮಯ್ಯ ಅವರ ಬೆನ್ನ ಮೇಲೆ ಕೈಹಾಕಿಕೊಂಡು ಚಾಮುಂಡೇಶ್ವರಿಗೆ ಕರೆದುಕೊಂಡು ಹೋಗಿ ಸೋಲಿಸುವ ಮೂಲಕ ಬೆನ್ನಿಗೆ ಚೂರಿ ಹಾಕಿದರು. ಆದರೆ ಕೋಲಾರದಲ್ಲಿ ಸ್ಪರ್ಧಿಸಿದರೆ ಅವರಿಗೆ ಪರಿಶಿಷ್ಟರು, ಕುರುಬರು, ಅಲ್ಪಸಂಖ್ಯಾತರು ಎಲ್ಲಾ ಹಿಂದುಳಿದ ಸಮಾಜದವರು ಮತ ಹಾಕಿ ಅವರನ್ನು ಗೆಲ್ಲಿಸಲಿದ್ದಾರೆ. ಈಗಾಗಲೇ ಕೆಲವರಿಗೆ ಮತ್ತೆ ಕುರುಬನೊಬ್ಬ ಮುಖ್ಯಮಂತ್ರಿ ಆಗುತ್ತಾನೆಂದು ಹೊಟ್ಟೆಕಿಚ್ಚು ಪ್ರಾರಂಭವಾಗಿದೆ ಎಂದರು. ಸಿದ್ದರಾಮಯ್ಯ ಕೋಲಾರಕ್ಕೆ ಬಾರದೆ ಹೋದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಳುಗಿ ಹೋಗುತ್ತದೆ ಎಂದು ಇದೇ ವೇಳೆ ರಮೇಶ್ ಕುಮಾರ್ ಹೇಳಿದರು.