Asianet Suvarna News Asianet Suvarna News

ಸಿದ್ದರಾಮಯ್ಯ ಪ್ರಕಾರ ನಳಿನ್ ಕುಮಾರ್ ಕಟೀಲ್_____!?

ಟ್ವಿಟರ್ ನಲ್ಲಿ ನಳಿನ್ ಕುಮಾರ್ ಕಟೀಲ್ ಗೆ____ [ಡ್ಯಾಶ್] ಎಂದ ಸಿದ್ದರಾಮಯ್ಯ/ ಬಿಎಸ್ ವೈ ಆಡಿಯೋ ವಿಚಾರದ ಮುಂದುವರಿದ ಚರ್ಚೆ/ ಹುಬ್ಬಳ್ಳಿಯ ಬಿಜೆಪಿ ಸಭೆಯಲ್ಲಿ ಬಿಎಸ್ ವೈ ಮಾತನಾಡಿದ್ದಾರೆ ಎನ್ನಲಾದ ಆಡಿಯೋ/ ಬಿಜೆಪಿ ಕೋರ್ ಕಮಿಟಿ ಸಭೆಗೆ ವಿರೋಧ ಪಕ್ಷದ ನಾಯಕನನ್ನು ಆಹ್ವಾನಿಸಿದ್ದೀರಾ? ಎಂದು ಸಿದ್ದು ಪ್ರಶ್ನೆ

congress senior Leader Siddaramaiah slams BJP Karnataka President Nalin kumar kateel
Author
Bengaluru, First Published Nov 3, 2019, 11:18 PM IST

ಬೆಂಗಳೂರು[ನ. 03]  ಒಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ಮತ್ತೆ ದೋಸ್ತಿ ಮಾತುಗಳನ್ನು ಆಡುತ್ತಿದ್ದರೆ ಇನ್ನೊಂದು ಕಡೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವೆ ಟ್ವಿಟರ್ ವಾರ್ ಆರಂಭವಾಗಿದೆ.

ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವಿಚಾರ ರಾಜಕಾರಣದ ವಲಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕು ಸದ್ಯದ ಬಹುರ್ಚಿತ ವಿಷಯ ವಸ್ತು.

ಉಪಚುನಾವಣೆ ನಂತರ ರಾಜ್ಯದಲ್ಲಿ ಮಧ್ಯಂತರ   ಚುನಾವಣೆ ಫಿಕ್ಸ್!

ಆಡಿಯೋ ನನ್ನಿಂದ ರಿಲೀಸ್ ಆಗಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಜೋಕ್ ಮಾಡಿದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆಗೆ ವಿರೋಧ ಪಕ್ಷದ ನಾಯಕನನ್ನು ಆಹ್ವಾನಿಸಿದ್ದೀರಾ? ಜೋಕ್ ಮಾಡೋರನ್ನ '......' ಎನ್ನುತ್ತಾರೆ ಗೊತ್ತಾ? ಎಂದು ಸಿದ್ದರಾಮಯ್ಯ ಕಟೀಲ್ ಅವರನ್ನು ಕುಟುಕಿದ್ದಾರೆ.

ಇದಕ್ಕೆ ಇನ್ನೊಂದು ಬದಿಯಲ್ಲಿ ಉತ್ತರ ನೀಡಿದ ಕಟೀಲ್ ‘ಕಳೆದ ಹಲವು ವರ್ಷಗಳಲ್ಲಿ ನಿಮ್ಮ ಅನುಮತಿ ಇಲ್ಲದೆ ನಿಮ್ಮ ಪಕ್ಷದಲ್ಲಿ ಏನಾದರೂ ನಡೆದಿದೆಯೇ?  ಅವರೇ? ಪ್ರತಿ ವಿಷಯದಲ್ಲೂ ಸುಳ್ಳು ಹೇಳುವ ನಿಮ್ಮನ್ನು ಜನ ಏನೆಂದು ಕರೆಯುತ್ತಾರೆ ಗೊತ್ತಾ? ಎಲ್ಲಾ ಕಮಿಟಿಗಳಲ್ಲಿದ್ದು ಕಾಂಗ್ರೆಸ್ ಅನ್ನು ನಿರ್ನಾಮ ಮಾಡುತ್ತಿರುವ ನಿಮ್ಮನ್ನು ಬಿಜೆಪಿ ಕೋರ್ ಕಮಿಟಿ ಸಭೆಗೆ ಆಹ್ವಾನಿಸುವುದು ಉಂಟೇ?’ ಎಂದು ಮರು ಪ್ರಶ್ನೆ ಮಾಡುತ್ತ ಟಾಂಗ್ ನೀಡಿದ್ದಾರೆ.

ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ  ಅವರದ್ದು ಒಂಥರಾ ನರಿ ಕತೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ಮಾಡಿದ್ದರು. ಯಾವುದೋ ಆಡಿಯೋ ಕ್ಲಿಪಿಂಗ್ ಇಟ್ಟುಕೊಂಡು ರಾಜ್ಯಪಾಲರ ಬಳಿ ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕಟೀಲ್ ಸಿದ್ದರಾಮಯ್ಯ ಅವರ ಮೇಲೆ ವಾಕ್ ಪ್ರಹಾರ ಮಾಡಿದ್ದರು. ಇದಾದ ಮೇಲೆ ಮತ್ತೆ ರಾಜಕಾರಣದ ಬೆಂಕಿ ಹೊತ್ತುಕೊಂಡಿದೆ.
 

congress senior Leader Siddaramaiah slams BJP Karnataka President Nalin kumar kateel

 

congress senior Leader Siddaramaiah slams BJP Karnataka President Nalin kumar kateel

 

Follow Us:
Download App:
  • android
  • ios