ನವದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆಗೆ ನಡೆದ ಸಭೆಯಲ್ಲಿ ಟ್ರ್ಯಾಕ್ಟರ್ ಯಾತ್ರೆಗೆ ಅನುಮತಿ ಸಿಕ್ಕಿದೆ. ಸಿದ್ದರಾಮಯ್ಯ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ಹೈಕಮಾಂಡ್

ನವದೆಹಲಿ(ಅ.27): ರಾಜ್ಯದಲ್ಲಿ ಮತ್ತೊಂದು ಯಾತ್ರೆಗೆ ಕಾಂಗ್ರೆಸ್‌ ನಾಯಕರು ತಯಾರಿ ನಡೆಸುತ್ತಿದ್ದಾರೆ. ಯಾತ್ರೆಗೆ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಹೌದು, ನವದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆಗೆ ನಡೆದ ಸಭೆಯಲ್ಲಿ ಟ್ರ್ಯಾಕ್ಟರ್ ಯಾತ್ರೆಗೆ ಅನುಮತಿ ಸಿಕ್ಕಿದೆ. ಸಿದ್ದರಾಮಯ್ಯ ಪ್ರಸ್ತಾವನೆಗೆ ಹೈಕಮಾಂಡ್ ಒಪ್ಪಿದೆ ಅಂತ ತಿಳಿದು ಬಂದಿದೆ. 

ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರು, ವಿಷಯಧಾರಿಯ ಯಾತ್ರೆ ಮಾಡಬೇಕು ಅನ್ಕೊಂಡಿದ್ದೇವೆ. ಮಹದಾಯಿ, ಕೃಷ್ಣ ಮೇಲ್ದಂಡೆ, 371ಜೆ,‌ ಮೇಕೆದಾಟು ವಿಚಾರಗಳು ಮತ್ತು ಸ್ಥಳೀಯ ಸಮಸ್ಯೆಗಳನ್ನು ಇಟ್ಟುಕೊಂಡು ಯಾತ್ರೆ ಮಾಡಲಿದ್ದೇವೆ. ಟ್ರ್ಯಾಕ್ಟರ್‌ನಲ್ಲಿ ಯಾತ್ರೆ ಮಾಡಬೇಕು ಅಂದುಕೊಂಡಿದ್ದೇವೆ. ಜತೆಗೆ ವಿಧಾನಸಭೆ ಚುನಾವಣೆಗೆ ನವೆಂಬರ್ ಅಂತ್ಯದಲ್ಲಿ ಮೊದಲ ಪಟ್ಟಿ ಬಿಡುಗಡೆಗೆ ಹೈಕಮಾಂಡ್‌ಗೆ ಮನವಿ ಮಾಡಲಾಗಿದೆ ಅಂತ ತಿಳಿಸಿದ್ದಾರೆ. 

Yadgiri Congress: ಕಾಂಗ್ರೆಸ್‌ ಟಿಕೆಟ್ ವಿಚಾರ 2 ಕಡೆ ಕ್ಲಿಯರ್‌, 2 ಕಡೆ ಟೆನ್ಷನ್..!

ಏಕಕಾಲದಲ್ಲಿ ಎರಡು ಕಡೆಯಿಂದ ಯಾತ್ರೆ

ರಾಜ್ಯಾದ್ಯಂತ ಏಕಕಾಲದಲ್ಲಿ ಎರಡು ಕಡೆಯಿಂದ ಯಾತ್ರೆ ನಡೆಯಲಿದೆ. ಯಾವ ಯಾತ್ರೆಗೆ ಯಾವ ನಾಯಕರ ನೇತೃತ್ವದಲ್ಲಿ ಎಂಬುದನ್ನು ಕೆಪಿಸಿಸಿ ಅಧ್ಯಕ್ಷರ ನಿರ್ಧಾರ ಬಿಟ್ಟಿದೆ ಹೈಕಮಾಂಡ್. ಸಿದ್ದರಾಮಯ್ಯ ಎಲ್ಲಿ ಯಾತ್ರೆ ಮಾಡಬೇಕು ಎಂಬುದನ್ನು ಡಿ.ಕೆ. ಶಿವಕುಮಾರ್‌ ನಿರ್ಧರಿಸಲಿದ್ದಾರೆ. ಬಹುತೇಕ ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಯಾತ್ರೆ ನಡೆಯಲಿದೆ. ಡಿ.ಕೆ ಶಿವಕುಮಾರ್ ಮತ್ತೊಂದು ಭಾಗದ ಯಾತ್ರೆ ಮಾಡಲು ತಯಾರಿ ನಡೆಸಿದ್ದಾರೆ ಅಂತ ತಿಳಿದು ಬಂದಿದೆ. 

ದಿನಕ್ಕೆ ಎರಡು ಕ್ಷೇತ್ರಗಳು ತಲುಪೋ ಪ್ಲಾನ್ ಕಾಂಗ್ರೆಸ್‌ನದ್ದಾಗಿದೆ. ರಾಜ್ಯದಲ್ಲಿ ಮೀಟಿಂಗ್ ಮಾಡಿ ಯಾತ್ರೆಗೆ ದಿನಾಂಕ ನಿಗದಿಯಾಗಲಿದೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣದಿಂದ ಸಿದ್ದರಾಮಯ್ಯ 371 ಜೆ ಯಾತ್ರೆ ಆರಂಭಿಸುವ ಸಾಧ್ಯತೆ ಇದೆ. ಇನ್ನು ಮಹಾದಾಯಿ ಹೋರಾಟದ ಮುಂದಾಳತ್ವ ಡಿಕೆಶಿ ವಹಿಸುವ ಸಾಧ್ಯತೆ ಇದೆ. 

AICC ಗಾದಿ ಏರಿ ಭಾವುಕರಾದ ಖರ್ಗೆ: ರಾಜೀನಾಮೆ ಸಲ್ಲಿಸಿದ ಪದಾಧಿಕಾರಿಗಳು

ವರದಿ ಬರಲಿ ಬಳಿಕ ನೋಡೋಣ

ಇನ್ನು ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನ್ಯಾ.ಅಡಿ ನೇತೃತ್ವದಲ್ಲಿ ಕಮಿಟಿ‌ ಮಾಡಿದ್ದಾರೆ. ಅವರ ವರದಿ ಬರಲಿ ಬಳಿಕ ನೋಡೋಣ. ಕಾಂಗ್ರೆಸ್‌ನಿಂದ ಹೊಸ ಸ್ಟೇರಿಂಗ್ ಕಮಿಟಿ ರಚನೆ ಮಾಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ರಚನೆ ಮಾಡಲಾಗಿದೆ. ಸಿಡಬ್ಯೂಸಿ ಸ್ಥಾನದಲ್ಲಿ ಸ್ಟೇರಿಂಗ್ ಕಮಿಟಿ ಕಾರ್ಯನಿರ್ವಹಣೆ ಮಾಡಲಿದೆ. ಕರ್ನಾಟಕದಿಂದ ಕಮಿಟಿಯಲ್ಲಿ ಮೂವರಿಗೆ ಸ್ಥಾನ ಲಭಿಸಿದೆ. ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ ಹಾಗೂ ದಿನೇಶ್ ಗುಂಡೂರಾವ್‌ ಅವರಿಗೆ ಸ್ಥಾನ ಸಿಕ್ಕಿದೆ. 47 ಮಂದಿಯ ಸ್ಟೇರಿಂಗ್ ಕಮಿಟಿ ರಚನೆ ಮಾಡಲಗಿದ್ದು ನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗು ಮನಮೋಹನ್ ಸಿಂಗ್‌ ಅವರಿಗೂ ಸ್ಥಾನ ಸಿಕ್ಕಿದೆ ಅಂತ ತಿಳಿಸಿದ್ದಾರೆ. 

ಸಭೆಯಲ್ಲಿ ಕೆ.ಸಿ ವೇಣುಗೋಪಾಲ, ಸಿದ್ದರಾಮಯ್ಯ ಮತ್ತು ಡಿಕೆಶಿ ಭಾಗಿಯಾಗಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಲಾಗಿದೆ. 

ಮೂರು ಭಾಗವಾಗಿ ವರದಿ ವಿಂಗಡಣೆ

ವರದಿಯಲ್ಲಿ ಮೂರು ಭಾಗವಾಗಿ ವಿಂಗಡಿಸಲಾಗಿದೆ. ಎ, ಬಿ, ಸಿ ಎಂದು ಮೂರು ಭಾಗವಾಗಿ ವರದಿ ಸಲ್ಲಿಕೆಯಾಗಿದೆ. ಎ ವಿಭಾಗದಲ್ಲಿ ಗೆಲ್ಲುವ ಕ್ಷೇತ್ರಗಳ ಬಗ್ಗೆ ಮಾಹಿತಿ, ಬಿ ವಿಭಾಗದಲ್ಲಿ ಗೆಲ್ಲಲು ಸಾಧ್ಯವಿರುವ ಕ್ಷೇತ್ರಗಳ ಬಗ್ಗೆ ಮಾಹಿತಿ ಇನ್ನು ಸಿ ವಿಭಾಗದಲ್ಲಿ ಸೋಲುವ ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಯಾವ‌ ಕ್ಷೇತ್ರಗಳ ಮೇಲೆ ಹೆಚ್ಚಿನ ಒತ್ತು ನೀಡಬೇಕು ಅಂತ ತಿಳಿಸಲಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಭಾಗ, ಮೈಸೂರು ಭಾಗ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಸೇರಿ ಎಲ್ಲಾ ಭಾಗದ ಪ್ರತ್ಯೇಕ ವರದಿ ನೀಡಲಾಗಿದೆ. ವರದಿಯ ಬಗ್ಗೆ ಹಲವು ಹೊತ್ತು ನಾಯಕರು ಚರ್ಚೆ ನಡೆಸಿದ್ದಾರೆ. ವರದಿಯನ್ನ ಹೈಕಮಾಂಡ್‌ ನಾಯಕರು ಗಂಭಿರವಾಗಿ ಪರಿಗಣಿಸಿದ್ದಾರೆ.