Asianet Suvarna News Asianet Suvarna News

AICC ಗಾದಿ ಏರಿ ಭಾವುಕರಾದ ಖರ್ಗೆ: ರಾಜೀನಾಮೆ ಸಲ್ಲಿಸಿದ ಪದಾಧಿಕಾರಿಗಳು

ಇದೊಂದು ನನಗೆ ಭಾವುಕ ಕ್ಷಣವಾಗಿದೆ. ಅತಿರತ ಮಹಾರತರು ಅಧ್ಯಕ್ಷ ವಹಿಸಿರೋ ಪಕ್ಷಕ್ಕೆ ನಾನು ಅಧ್ಯಕ್ಷನಾಗಿದ್ದೇನೆ. ಒಬ್ಬ ಕೂಲಿ ಮಾಡುವ‌ ವ್ಯಕ್ತಿಯ ಮಗ ಇಷ್ಟು ದೊಡ್ಡ ಮಟ್ಟಕ್ಕೆ ಏರಿರೋದು ಸಂಸತ ತಂದಿದೆ: ಖರ್ಗೆ

AICC President Mallikarjun Kharge talks Over Congress grg
Author
First Published Oct 26, 2022, 12:33 PM IST

ನವದೆಹಲಿ(ಅ.26): ಇದೊಂದು ನನಗೆ ಭಾವುಕ ಕ್ಷಣವಾಗಿದೆ. ಅತಿರತ ಮಹಾರತರು ಅಧ್ಯಕ್ಷ ವಹಿಸಿರೋ ಪಕ್ಷಕ್ಕೆ ನಾನು ಅಧ್ಯಕ್ಷನಾಗಿದ್ದೇನೆ. ಒಬ್ಬ ಕೂಲಿ ಮಾಡುವ‌ ವ್ಯಕ್ತಿಯ ಮಗ ಇಷ್ಟು ದೊಡ್ಡ ಮಟ್ಟಕ್ಕೆ ಏರಿರೋದು ಸಂಸತ ತಂದಿದೆ. ಎಲ್ಲಾ ಈ ಹಿಂದಿನ ಅಧ್ಯಕ್ಷರಿಗೆ ನನ್ನ ನಮನಗಳು. ನನ್ನ ಮುಂದಿನ ದೃಷ್ಟಿ ಪಕ್ಷ ಅಧಿಕಾರಕ್ಕೆ ತರುವುದಾಗಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯಲ್ಲೂ ನಾನು ಹೋರಾಡೋಕೆ ಸಿದ್ಧನಿದ್ದೇನೆ ಅಂತ ತಿಳಿಸಿದ್ದಾರೆ. 

ಇಂದು(ಬುಧವಾರ) ಎಐಸಿಸಿ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಕರ್ನಾಟಕದಲ್ಲಿ ಭಾಷಣ ಮಾಡಿ ಹೇಳಿದ್ರು, ನನ್ನ ರಾಜಕೀಯ ಅಧ್ಯಾಯ ಇಲ್ಲಿಂದ ಶುರುವಾಗುತ್ತೆ ಅಂದಿದ್ರು, ಅದರಂತೆ ಎರಡು ಬಾರಿ ಯುಪಿಎ ಸರ್ಕಾರ ಅಧಿಕಾರಕ್ಕೆ ತಂದಿದ್ದರು. ಉದಯಪುರದಲ್ಲಿ ನಡೆದ ನವಸಂಕಲ್ಪದಲ್ಲಿ ತೆಗೆದುಕೊಂಡ ನಿರ್ಧಾರವನ್ನ. ಅನುಷ್ಠಾನಕ್ಕೆ ತರೋ ಜವಾಬ್ದಾರಿ ನಮ್ಮೆಲ್ಲರ ಮುಂದಿದೆ ಅಂತ ಹೇಳಿದ್ದಾರೆ. 

ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಖರ್ಗೆಗೆ ಶುಭಕೋರಿದ ಪ್ರಧಾನಿ ಮೋದಿ!

ಬರಿ ಸುಳ್ಳು ಹೇಳಿ ಅಧಿಕಾರ ಮಾಡೋ ಸರ್ಕಾರ ಬಂದಿದೆ. ಅದನ್ನ ಕಿತ್ತೊಗೆಯುವುದೇ ನಮ್ಮ ಮುಂದಿನ ಧ್ಯೇಯವಾಗಿದೆ. ಅದು ಕಾಂಗ್ರೆಸ್ ಮತ್ತು ದೇಶದ ಹಿತಕ್ಕೆ ಪೂರಕವಾಗಿರಲಿದೆ. ನಾನು ರಾಹುಲ್ ಗಾಂಧಿಗೆ ಅಭಾರಿಯಾಗಿರುತ್ತೇನೆ. ಅವರು ಭಾರತ ಜೋಡೊ ಯಾತ್ರೆ ಮೂಲಕ ಜನರ ಕಷ್ಟ ಕೇಳೊ ಕೆಲಸವನ್ನ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ಅತಿದೊಡ್ಡ ಕೆಲಸವಾಗಿದೆ. ನಾನು ನಿಮ್ಮೆಲ್ಲರೊಂದಿಗೆ ಕೆಲಸ ಮಾಡುತ್ತೇನೆ. ನಾನು ಹಲವು ಸವಾಲುಗಳನ್ನ ಎದುರಿಸಿದ್ದೇನೆ. ಏಳು ಬೀಳು ಇದ್ದೆ ಇರುತ್ತೆ, ನಾವು ಎಲ್ಲರೂ ಸೇರಿ ಎಲ್ಲ ಕಷ್ಟಗಳನ್ನ ಎದುರಿಸೋಣ ಅಂತ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. 

ದೇಶದಲ್ಲಿ ಕೋಟಿ ಕೋಟಿ ಯುವಕರು ಧರ್ಮ, ಜಾತಿಗಿಂತಲೂ ಮೇಲೂ ನೋಡುತ್ತಿದ್ದಾರೆ. ಅದನ್ನ ನಾವು ಸಹಕಾರ ತರಬೇಕಿದೆ. ಪಕ್ಷದಲ್ಲಿ ಶೇ.50 ರಷ್ಟು ಯುವಕರಿಗೆ ಅಧಿಕಾರ ನೀಡಲಾಗುವುದು. ಉದಯಪುರದ ನಿರ್ಣಯಗಳನ್ನ ಅನುಷ್ಠಾನಕ್ಕೆ ತರೋ ಕೆಲಸ ಮಾಡುತ್ತೇನೆ. ಪಕ್ಷದ ಎಲ್ಲ ಹಂತದ ಹುದ್ದೆಗಳನ್ನ ತುಂಬುತ್ತೇವೆ. ಓಬಿಸಿ, ಎಸ್ ಸಿ, ಎಸ್ ಟಿ ನಾಯಕರನ್ನ ಹುಟ್ಟು ಹಾಕುತ್ತೇವೆ ಅಂತ ತಿಳಿಸಿದ್ದಾರೆ. 

ಬಿಜೆಪಿಗೆ ಜವಾಬ್ ನೀಡೋ ಕೆಲಸ ಮಾಡುತ್ತೇನೆ

ಬಿಜೆಪಿಗೆ ಜವಾಬ್ ನೀಡೋ ಕೆಲಸ ಮಾಡುತ್ತೇನೆ. ಸಿಬಿಐ, ಇಡಿ ಇಲಾಖೆಗಳು ಬಿಜೆಪಿ ಪರವಾಗಿವೆ. ದಲಿತರನ್ನ ಶೋಷಿತರನ್ನ ಬಿಜೆಪಿ ಅವಮಾನಿಸಲಾಗುತ್ತಿದೆ. ಗೊಡ್ಸೆಯನ್ನ ದೇಶ ಭಕ್ತ ಎಂದು ಬಿಂಬಿಸಿ ಗಾಂಧಿಯನ್ನ ದೇಶ ದ್ರೋಹಿ ಎನ್ನುತ್ತಿದ್ದಾರೆ. ರಸ್ತೆ, ವಿಮಾನ ನಿಲ್ದಾಣ, ರೈಲ್ವೆ ಎಲ್ಲವೂ ಕೆಲವರಿಗೆ ಮಾರಾಟ ಮಾಡುತ್ತಿದ್ದಾರೆ. ಇಂತಹ ಎಲ್ಲಾ ನಿರ್ಧಾರದ ಬಗ್ಗೆ ನಾವು ಹೋರಾಡಬೇಕಿದೆ. ಇದಕ್ಕೆ ಕಾಂಗ್ರೆಸ್ ನ ತಳ ಹಂತದ ನಾಯಕರು, ಕಾರ್ಯಕರ್ತರು ಗಟ್ಟಿಯಾಗಬೇಕಿದೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ ಎಂದು ತೋರಿಸಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲಾ ನಾಯಕರಿಗೆ ಧನ್ಯವಾದಗಳನ್ನ ಅರ್ಪಿಸುತ್ತೇನೆ ಅಂತ ಹೇಳಿದ್ದಾರೆ.

Congress Election: ಮಲ್ಲಿಕಾರ್ಜುನ್‌ ಖರ್ಗೆ ಕಾಂಗ್ರೆಸ್‌ನ ನೂತನ ಅಧ್ಯಕ್ಷ; ಈ ಸ್ಥಾನ ಪಡೆದ ಎರಡನೇ ಕನ್ನಡಿಗ

ಎಲ್ಲ ಪಿಸಿಸಿ ಸದಸ್ಯರಿಗೆ, CWC, ಕಾಂಗ್ರೆಸ್ ಕಮಿಟಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಹಿಮಾಚಲ ಮತ್ತು ಗುಜರಾತ್ ಚುನಾವಣೆ ಬರುತ್ತಿದೆ. ಅಲ್ಲಿ ಬದಲಾವಣೆ ತರೋ ಕೆಲಸ ಮಾಡಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ‌ಮಾಡಬೇಕಿದೆ. ನಾವು ಮಹಾತ್ಮ ಗಾಂಧಿಯ ಸಿಪಾಯಿಗಳು. ನಾವು ಯಾವುದೇ ಕಾರಣಕ್ಕೂ ಯಾರಿಗೂ ಹೆದರೋದಿಲ್ಲ ಖರ್ಗೆ ಹೇಳಿದ್ದಾರೆ. 

ಎಐಸಿಸಿ ಜನರಲ್ ಸೆಕ್ರೆಟರಿ, CWC ಸದಸ್ಯರು, ರಾಜ್ಯ ಉಸ್ತುವಾರಿಗಳ ರಾಜೀನಾಮೆ

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಎಲ್ಲಾ CWC ಸದಸ್ಯರು, AICC ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.  
 

Follow Us:
Download App:
  • android
  • ios