ಮತದಾರರಿಗೆ ಕಾಂಗ್ರೆಸ್ ವಂಚನೆ ಸಾಬೀತು: ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್
ಅಧಿಕಾರ ಹಿಡಿಯುವ ಒಂದೇ ಉದ್ದೇಶದಿಂದ ಮತದಾರರನ್ನು ವಂಚಿಸಿರುವುದು ಸ್ವತಃ ಸಚಿವರ ಹೇಳಿಕೆಯಿಂದ ಬಹಿರಂಗವಾಗಿದೆ. ಈ ಬಗ್ಗೆ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ವೇದವ್ಯಾಸ್ ಕಾಮತ್
ಮಂಗಳೂರು(ಜೂ.10): ಗ್ಯಾರಂಟಿ ಘೋಷಣೆ ಅಗ್ಗದ ಜನಪ್ರಿಯತೆ ಎಂದು ಸ್ವತಃ ಕಾಂಗ್ರೆಸ್ ಮುಖಂಡ, ಕೃಷಿ ಸಚಿವ ಚೆಲುವರಾಯ ಸ್ವಾಮಿಯೇ ಹೇಳಿರುವುದು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತದಾರರಿಗೆ ವಂಚಿಸಿರುವುದು ಸಾಬೀತಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
‘ಚುನಾವಣೆಯ ಸಂದರ್ಭ ಗೆಲುವೇ ಅನಿವಾರ್ಯ. ಫಲಿತಾಂಶಕ್ಕಾಗಿ ಇವೆಲ್ಲವನ್ನೂ ಮಾಡಬೇಕು. ಇಲ್ಲದ್ದು, ಬಲ್ಲದ್ದು ಎಲ್ಲವನ್ನೂ ಮಾಡಬೇಕು. ಕೆಲವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕು...’ ಎಂದು ಹೇಳುವ ಮೂಲಕ ಸಚಿವರು ಕಾಂಗ್ರೆಸ್ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಅಧಿಕಾರ ಹಿಡಿಯುವ ಒಂದೇ ಉದ್ದೇಶದಿಂದ ಮತದಾರರನ್ನು ವಂಚಿಸಿರುವುದು ಸ್ವತಃ ಸಚಿವರ ಹೇಳಿಕೆಯಿಂದ ಬಹಿರಂಗವಾಗಿದೆ. ಈ ಬಗ್ಗೆ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದ ಶಾಸಕ ಪೂಂಜಾಗೆ ರಿಲೀಫ್, ತನಿಖೆಗೆ ಹೈಕೋರ್ಟ್ ತಡೆ!
ಗ್ಯಾರಂಟಿ ಘೋಷಣೆ ಚುನಾವಣೆ ಗಿಮಿಕ್ ಎಂದು ಸಚಿವರೇ ಹೇಳಿರುವುದು ಪುಕ್ಕಟೆ ವಿಚಾರದಲ್ಲಿ ಕಾಂಗ್ರೆಸ್‌ಗೆ ಯಾವುದೇ ಸ್ಪಷ್ಟತೆ ಇಲ್ಲದಿರುವುದನ್ನು ಸಾಬೀತುಪಡಿಸಿದೆ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.