ಬಿಕ್ಕಟ್ಟು ಶಮನಕ್ಕೆ Sonia Gandhi ಎಂಟ್ರಿ, ಗುಲಾಂ ನಬಿ ಆಜಾದ್ ಜೊತೆ ಇಂದು ಮಾತುಕತೆ!

ಕಾಂಗ್ರೆಸ್ ನಾಯಕತ್ವದ ಕುರಿತಾಗಿ  ಹಿರಿಯ ನಾಯಕರಲ್ಲಿ ಭಿನ್ನಾಭಿಪ್ರಾಯ

ಕಳೆದ ಎರಡು ದಿನಗಳಲ್ಲಿ ಎರಡು ಸಭೆ ನಡೆಸಿದ ಜಿ23 ನಾಯಕರು

ಬಿಕ್ಕಟ್ಟು ಶಮನಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎಂಟ್ರಿ

Congress president Sonia Gandhi is likely to meet party leader Ghulam Nabi Azad today As Rebels Crank Up Pressure san

ನವದೆಹಲಿ (ಮಾ. 18): ಕಾಂಗ್ರೆಸ್ ಅಧ್ಯಕ್ಷೆ ( Congress president ) ಸೋನಿಯಾ ಗಾಂಧಿ (Sonia Gandhi ) ಇಂದು ಪಕ್ಷದ ನಾಯಕ ಗುಲಾಂ ನಬಿ ಆಜಾದ್ ( Ghulam Nabi Azad ) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆಜಾದ್ ನೇತೃತ್ವದ ಕಾಂಗ್ರೆಸ್‌ನ ಜಿ23 (Congress G23) ಭಿನ್ನಮತೀಯರ ನಾಯಕರ ಪ್ರಮುಖ ಗುಂಪು ಪಕ್ಷದ ಮುಂದಿನ ಮಾರ್ಗವನ್ನು ಚರ್ಚಿಸಲು ಸಭೆ ನಡೆಸಿದ ಒಂದು ದಿನದ ನಂತರ ಸೋನಿಯಾ ಗಾಂಧಿ ಹಿರಿಯ ನಾಯಕರ (Senior Leaders) ಜೊತೆಗಿನ ಬಿಕ್ಕಟ್ಟು ಶಮನಕ್ಕೆ ಯತ್ನ ನಡೆಸಿದ್ದಾರೆ.


ಪಕ್ಷದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (Congress Working Committee) ಭಾನುವಾರದ ಸಭೆಯಲ್ಲಿ ನಿಷ್ಠಾವಂತರ ನಿಲುವಿನಿಂದ ಅಸಮಾಧಾನಗೊಂಡಿರುವ ಅತೃಪ್ತರು ಬುಧವಾರದಿಂದ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಯನೀಯ ಸೋಲುಗಳ ಹೊರತಾಗಿಯೂ ಗಾಂಧಿ ಕುಟುಂಬದ ( Gandhi Family ) ನಾಯಕತ್ವವೇ ಮುಂದುವರಿಯಬೇಕು ಎಂದು ನಿಷ್ಠಾವಂತ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.

ಕಳೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಸೋನಿಯಾ ಗಾಂಧಿ, ತಮ್ಮ ಮಕ್ಕಳಾದ ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಪಕ್ಷದೊಂದಿಗಿನ ಎಲ್ಲಾ ಪ್ರಮುಖ ಹುದ್ದೆಗಳಿಂದ ಕೆಳಗಿಳಿಯುವ ಸೋನಿಯಾ ಗಾಂಧಿಯವರ ಪ್ರಸ್ತಾಪವನ್ನು ಪಕ್ಷದ ನಾಯಕರು ತಿರಸ್ಕರಿಸಿದ್ದರು. ಸತತವಾಗಿ ಚುನಾವಣೆಯಲ್ಲಿ ಎದುರಿಸಿದ  ಸೋಲುಗಳ ನಂತರ, ಜಿ23 ನಾಯಕರು 2020ರಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದು ಕಾಂಗ್ರೆಸ್ ಪಕ್ಷದ ಪುನರ್ ರಚನೆಯ ಅಗತ್ಯವಿದೆ ಎಂದು ಒತ್ತಾಯಿಸಿದ್ದರು. ಅಂದಿನಿಂದಲೂ ಸತತವಾಗಿ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎಂದು ಜಿ23 ಪ್ರಯತ್ನಿಸುತ್ತಿದೆ. ಆದರೆ, ಇವರ ಮಾತಿಗೆ ಬೆಲೆ ಸಿಗದ ಕಾರಣ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ದಯನೀಯ ಸೋಲು ಕಂಡರೆ, ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಬಹುತೇಕವಾಗಿ ಕಾಂಗ್ರೆಸ್ ನಾಮಾವಶೇಷವಾಗಿದೆ.

"ಕಾಂಗ್ರೆಸ್‌ನ ಮುಂದಿರುವ ಏಕೈಕ ಮಾರ್ಗವೆಂದರೆ ಎಲ್ಲಾ ಹಂತಗಳಲ್ಲಿ ಅಂತರ್ಗತ ಮತ್ತು ಸಾಮೂಹಿಕ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಮಾದರಿಯನ್ನು ಅಳವಡಿಸಿಕೊಳ್ಳುವುದು. ನಾವು ಕಾಂಗ್ರೆಸ್ ಅನ್ನು ಬಲಪಡಿಸಲು ಬಯಸುತ್ತೇವೆ. ಯಾವುದೇ ರೀತಿಯಲ್ಲಿ ಪಕ್ಷವನ್ನು ದುರ್ಬಲಗೊಳಿಸುವುದು ನಮ್ಮ ದಾರಿಯಲ್ಲ' ಎಂದು ಗುರುವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

G-23 Meet ಬಂಡಾಯ ನಾಯಕರ ಸಭೆಗೆ ಶಶಿ ತರೂರ್ ಹಾಜರ್, ಕಾಂಗ್ರೆಸ್‌ನಲ್ಲಿ ತಳಮಳ!
ಗುರುವಾರ ಜಿ23 ಸಭೆಯಲ್ಲಿ ಭಾಗವಹಿಸಿದ್ದ ಹರಿಯಾಣ ಮಾಜಿ ಮುಖ್ಯಮಂತ್ರಿ ( Former Haryana Chief Minister ) ಭೂಪೇಂದರ್ ಸಿಂಗ್ ಹೂಡಾ ( Bhupender Singh Hooda ) ಅವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಈ ಮಾತುಕತೆಯ ವೇಳೆ ಹೂಡಾ ಪಕ್ಷದಲ್ಲಿ ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಸ್ಪಷ್ಟನೆ ಕೇಳಿದರು ಎಂದು ಮೂಲಗಳು ತಿಳಿಸಿವೆ. ಸಾಮೂಹಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿಹೇಳಿರುವ ಹೂಡಾ, ಮುಖಂಡರು ಪಕ್ಷದ ನಿರ್ಧಾರಗಳ ಬಗ್ಗೆ ಪತ್ರಿಕೆಗಳಿಂದ ಆಗಾಗ್ಗೆ ತಿಳಿದುಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿಗೆ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಹೆಚ್ಚಾಯಿತು ಬಿರುಕು; ಬಂಗಾಳ ಚುನಾವಣಾ ಪ್ರಚಾರದಿಂದ G23 ನಾಯಕರಿಗೆ ಕೊಕ್!
ಇದೇ ವೇಳೆ ಜಿ-23 ನಾಯಕರು ಯಾವುದೇ "ಪಕ್ಷ ವಿರೋಧಿ ಚಟುವಟಿಕೆಗಳನ್ನು" ಮಾಡಿಲ್ಲ ಎಂದು ಭೂಪೇಂದರ್ ಸಿಂಗ್ ಹೂಡಾ ಹೇಳಿದರು, ಸೋನಿಯಾ ಗಾಂಧಿ ಅವರಿಗೆ ತಿಳಿಸಿದ ನಂತರವೇ ಬಣದ ಸಭೆ ನಡೆಸಲಾಗಿದೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದ್ದಾರೆ.

Latest Videos
Follow Us:
Download App:
  • android
  • ios