ಅದ್ಧೂರಿ ಸಿದ್ದರಾಮೋತ್ಸವಕ್ಕೆ ದಾವಣಗೆರೆ ಸಜ್ಜು: 8 ಲಕ್ಷ ಜನ ಭಾಗಿ ಸಾಧ್ಯತೆ

ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ, ಸಾಧು ಕೋಕಿಲ, ಸಂಗೀತ ಕಟ್ಟಿ ಅವರಿಂದ ಸಂಗೀತ ಕಾರ್ಯಕ್ರಮದ ಮೂಲಕ ಸಮಾರಂಭ 

Congress Preparation to Siddaramotsava in Davanagere grg

ದಾವಣಗೆರೆ(ಆ.03):  ಸಿದ್ದರಾಮಯ್ಯನವರ 75ನೇ ಜನ್ಮದಿನದ ಅಮೃತ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಇಂದು(ಬುಧವಾರ) ಬೆಳಗ್ಗೆ 10 ಗಂಟೆಗೆ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ, ಸಾಧು ಕೋಕಿಲ, ಸಂಗೀತ ಕಟ್ಟಿ ಅವರಿಂದ ಸಂಗೀತ ಕಾರ್ಯಕ್ರಮದ ಮೂಲಕ ಸಮಾರಂಭ ಶುರುವಾಗಲಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಸುಮಾರು ಆರೇಳು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮಧ್ಯಾಹ್ನ 1ಗಂಟೆಗೆ ಎಐಸಿಸಿ ಮುಖಂಡ ರಾಹುಲ್‌ ಗಾಂಧಿ ವೇದಿಕೆಗೆ ಆಗಮಿಸಲಿದ್ದಾರೆ. ಬೀದರ್‌ನಿಂದ ಚಾಮರಾಜನಗರದವರೆಗೆ ನಾಲ್ಕೂ ದಿಕ್ಕಿನಿಂದ ವಾಹನಗಳು ಇಲ್ಲಿಗೆ ಬರಲಿವೆ. ಸುಮಾರು 300 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಬಸ್ಸು, ಕ್ರೂಸರ್‌, ಸ್ವಂತ ವಾಹನ, ದ್ವಿಚಕ್ರ ವಾಹನಗಳಲ್ಲಿ ಬರುವವರಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಸಮಾರಂಭಕ್ಕೆ ಬಂದ ಲಕ್ಷಾಂತರ ಜನರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸುಮಾರು 50 ಎಕರೆ ವಿಸ್ತಾರದ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೊಡ್ಡ ಪ್ರಮಾಣದ ಪೆಂಡಾಲ್‌ ಅಳವಡಿಸಿದ್ದು, 4 ಲಕ್ಷ ಕುರ್ಚಿಗಳನ್ನು ಹಾಕಲಾಗಿದೆ. 2500 ಬಾಣಸಿಗರು ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. 6 ಲಕ್ಷ ಮೈಸೂರು ಪಾಕ್‌ ಸಿದ್ಧವಾಗಿದೆ. ಬಫೆ ವ್ಯವಸ್ಥೆ ಮಾಡಲಾಗಿದ್ದು, ಪಲಾವ್‌, ಮೊಸರನ್ನ, ಸಿಹಿ ಊಟದ ವ್ಯವಸ್ಥೆಯನ್ನು 400 ಕೌಂಟರ್‌ನಲ್ಲಿ ಮಾಡಲಾಗಿದೆ. ಬಂದವರಿಗೆ ಊಟ ಬಡಿಸಲು ಸ್ವಯಂ ಸೇವಕರ ವ್ಯವಸ್ಥೆ ಮಾಡಿದೆ. ಯಾವುದೇ ಗೊಂದಲ, ಗದ್ದಲ ಇಲ್ಲದೇ, ಸಮರ್ಪಕವಾಗಿ ಯುವಕರ ಪಡೆಯನ್ನು ಭೋಜನ ವ್ಯವಸ್ಥೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ವಾಹನ ಅಪಘಾತ, ಓರ್ವ ಸಾವು, ಸಿದ್ದರಾಮಯ್ಯ ಸಂತಾಪ

ಭರ್ಜರಿ ಸಿದ್ಧತೆ

8 ಲಕ್ಷ-ರಾಜ್ಯದ ವಿವಿಧೆಡೆಯಿಂದ ಆಗಮಿಸಲಿರುವ ಜನರು
8000-ಅಭಿಮಾನಿಗಳನ್ನು ಕರೆ ತರಲು ಮಾಡಿರುವ ಬಸ್ಸುಗಳು
35000ಕ್ಕೂ ಅಧಿಕ ವಾಹನಗಳು ದಾವಣಗೆರೆಯತ್ತ
6 ಲಕ್ಷ-ಮೈಸೂರು ಪಾಕ್‌
2500-ಬಾಣಸಿಗರಿಂದ ಮೊಸರನ್ನ, ಪಲಾವ್‌ ತಯಾರಿ
400-ಕೌಂಟರ್‌ಗಳಲ್ಲಿ ಬಫೆ ವ್ಯವಸ್ಥೆಯಲ್ಲಿ ಊಟ
500 ಎಕರೆ ಪ್ರದೇಶದಲ್ಲಿ ವಿಶಾಲ ವಾಟರ್‌ ಪೆಂಡಾಲ್‌ ಅಳವಡಿಕೆ
4 ಲಕ್ಷ ಕುರ್ಚಿಗಳ ವ್ಯವಸ್ಥೆ
300- ಸ್ವಯಂ ಸೇವಕರನ್ನು ವೇದಿಕೆ ಆವರಣದಲ್ಲಿ ನಿಯೋಜನೆ
33 ಎಲ್‌ಇಡಿ ಪರದೆಗಳ ಅಳವಡಿಕೆ
 

Latest Videos
Follow Us:
Download App:
  • android
  • ios