ಟಿಸಿಎಚ್‌ ಕಾಲೇಜು ಮೈದಾನದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯಲ್ಲಿ ಅಂದಾಜು 50 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೆಪಿಸಿಸಿ ನಾಯಕರಾದ ಜಮೀರ ಅಹ್ಮದ್‌, ಎಚ್‌.ಸಿ.ಮಹದೇವಪ್ಪ, ಸತೀಶ ಜಾರಕಿಹೋಳಿ ಸೇರಿದಂತೆ ಕಾಂಗ್ರೆಸ್‌ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಹುನಗುಂದ(ಫೆ.19): ಪಟ್ಟಣದ ಟಿಸಿಎಚ್‌ ಕಾಲೇಜು ಆವರಣದಲ್ಲಿ ಫೆ.21ರಂದು ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಸಿದ್ದಗೊಳ್ಳುತ್ತಿರುವ ಭವ್ಯ ವೇದಿಕೆ ಸ್ಥಳಕ್ಕೆ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ಸಂಘಟನೆ, ಚುನಾವಣೆ,ಬಿಜೆಪಿ ಸರ್ಕಾರದ ವೈಫಲ್ಯ ಜನರಿಗೆ ಅರಿವು ಮೂಡಿಸಲು ಕಾಂಗ್ರೆಸ್‌ ಪಕ್ಷ ಆರಂಭಿಸಿರುವ ಪ್ರಜಾಧ್ವನಿ ಯಾತ್ರೆ ಫೆ.21ರಂದು ಹುನಗುಂದ ಪಟ್ಟಣಕ್ಕೆ ಆಗಮಿಸಲಿದೆ. ಇಲ್ಲಿನ ಟಿಸಿಎಚ್‌ ಕಾಲೇಜು ಮೈದಾನದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯಲ್ಲಿ ಅಂದಾಜು 50 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೆಪಿಸಿಸಿ ನಾಯಕರಾದ ಜಮೀರ ಅಹ್ಮದ್‌, ಎಚ್‌.ಸಿ.ಮಹದೇವಪ್ಪ, ಸತೀಶ ಜಾರಕಿಹೋಳಿ ಸೇರಿದಂತೆ ಕಾಂಗ್ರೆಸ್‌ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ತಾಲೂಕಿನ ಎಲ್ಲ ಕಾಂಗ್ರೆಸ್‌ ಮುಖಂಡರು ತಾಲೂಕಿನ ಎಲ್ಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಎಂದು ತಿಳಿಸಿದರು.

ಹಿಂದುಗಳನ್ನು ಕೊಲೆ ಮಾಡಿದವರನ್ನು ಸನ್ಮಾನಿಸುವುದೇ ಇಸ್ಲಾಂ ಸಂಸ್ಕೃತಿ: ಪ್ರಮೋದ್‌ ಮುತಾಲಿಕ್ ಆರೋಪ

ಹುನಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ ದೊಡಮನಿ, ಹುನಗುಂದ ಪುರಸಭೆ ಅಧ್ಯಕ್ಷ ಪರ್ವೇಜ್‌ ಖಾಜಿ, ಶಂಕ್ರಪ್ಪ ನೇಗಲಿ, ಮುಖಂಡರಾದ ಸುಭಾಷ ತಾಳಿಕೋಟಿ, ಬಿ.ವಿ.ಪಾಟೀಲ, ಮಹಾಂತೇಶ ಅವಾರಿ, ಶೇಖರಪ್ಪ ಬಾದವಾಡಗಿ, ಮಹಾಂತೇಶ ನಾಡಗೌಡ, ಶಿವಾನಂದ ಕಂಠಿ, ಬಸವರಾಜ ಗದ್ದಿ, ಮುತ್ತಣ್ಣ ಕಲಗೋಡಿ, ಶರಣು ಬೆಲ್ಲದ, ರವಿ ಹಳಪೇಟಿ, ಸಮೀರ್‌ ದೇಶಪಾಂಡೆ ಇದ್ದರು.