ಇದು ಪ್ರಾರಂಭ ಮಾಡಿರೋದು ಜನರ ಪಲ್ಸ್ ತಿಳಿದುಕೊಳ್ಳೋಕೆ. ಇದು ಆರಂಭದ ಹಂತ ಗ್ಯಾರಂಟಿ ಒಂದೊಂದೆ ವಾಪಸ್ ಪಡೆಯಲು ಈ ರೀತಿ ಹೇಳಿಕೆ‌ ನೀಡಿದ್ದಾರೆ ಎಂದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ 

ತುಮಕೂರು(ನ.01):  ಕಾಂಗ್ರೆಸ್ ಆಡಳಿತ ಯಾವ ರೀತಿ ಇದೆ, ಕಾಂಗ್ರೆಸ್ ನಾಯಕರ ಪರಸ್ಪರ ಕಚ್ಚಾಟ ಯಾವ ರೀತಿ ನಡಿತಾ ಇದೆ ಅಂತಾ ನಾವು ಹೇಳಬೇಕಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಇಬ್ಬರು ನಾಯಕರನ್ನ ಅಕ್ಕ ಪಕ್ಕ ಕೂರಿಸಿಕೊಂಡು ಉಪದೇಶ ಮಾಡಿ ಸಲಹೆ ಕೊಟ್ಟು ಹೋಗಿದ್ದಾರೆ, ನಾವು ಕೊಟ್ಟಿದ್ದೇವಾ? ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. 

ಉಪಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಇಂದು(ಶುಕ್ರವಾರ) ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದಿದ್ದಾರೆ. 

ಉಪಚುನಾವಣೆ ಹೊತ್ತಲ್ಲಿ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ! ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ತಾರಾ ಇನ್ನಷ್ಟು ಶಾಸಕರು?

ಬಳಿಕ ಶಕ್ತಿ ಯೋಜನೆ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಇದು ಪ್ರಾರಂಭ ಮಾಡಿರೋದು ಜನರ ಪಲ್ಸ್ ತಿಳಿದುಕೊಳ್ಳೋಕೆ. ಇದು ಆರಂಭದ ಹಂತ ಗ್ಯಾರಂಟಿ ಒಂದೊಂದೆ ವಾಪಸ್ ಪಡೆಯಲು ಈ ರೀತಿ ಹೇಳಿಕೆ‌ ನೀಡಿದ್ದಾರೆ ಎಂದು ಹೇಳಿದ್ದಾರೆ. 

ವಕ್ಫ್‌ ಆಸ್ತಿ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ಇದು ಯಾಕೆ ಪ್ರಾರಂಭವಾಯಿತು, ಇಷ್ಟು ದಿನ ಯಾಕೇ ಇರಲಿಲ್ಲ. ಇಲ್ಲಿ ಕಾಂಗ್ರೆಸ್ ‌ನ ದುರಾರಳಿತ ಹೊರಬರಲಿಕ್ಕೆ ಪ್ರಾರಂಭವಾಗಿದೆ. ಕಾಂಗ್ರೆಸ್ ನ ಅಕ್ರಮ ಮುಚ್ಚಿಕೊಳ್ಳುವ ಪ್ರಯತ್ನ ಇದು. ಸಂವಿಂಧಾನ ರಚನೆ ಮಾಡಬೇಕಾದರೆ ಪ್ರತಿ ಕುಟುಂಬದ ಹಕ್ಕು ನೀಡಿದೆ. ನ್ಯಾಯಾಂಗದಲ್ಲಿ ಚರ್ಚೆಗಳು ಆರಂಭವಾಗಿವೆ ಇದಕ್ಕೆ ಜನರ ಉತ್ತರ ಸಿಗಲಿದೆ. ಮೋದಿಯವರ ಕ್ಯಾಬಿನೆಟ್ ನಲ್ಲಿ ಯಾವ ರೀತಿ ತೀರ್ಮಾನ ಆಗಬೇಕು ಎಂದು ಚರ್ಚೆ ಆಗಿದೆ. ಕಾನೂನು ವ್ಯಾಪ್ತಿಯಲ್ಲಿ ಇದೆಲ್ಲದಕ್ಕೂ ಅಂತಿಮ ಮಾಡಲಿಕ್ಕೆ ಕಾನೂನು ಬಲಿಷ್ಠವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಇಂದು ಅಮಾವಾಸ್ಯೆ ಕಾರಣ ಚುಂಚನಗಿರಿಗೆ ಭೇಟಿ ಬಳಿಕ ಸಿದ್ದಗಂಗಾ ಮಠಕ್ಕೆ ಬಂದು ಆಶಿರ್ವಾದ ಪಡೆದಿದ್ದೇನೆ. ಬಿಜೆಪಿಯವರು ಸೇರಿ ಎಲ್ಲರೂ ಜೊತೆಗೂಡಿ ಚನ್ನಪಟ್ಟಣ ಸೇರಿದಂತೆ ಮೂರು ಕಡೆ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.