ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ ಏಕೈಕ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್‌ ಮಾತ್ರ. ಇಂದು ಅಧಿ​ಕಾರ ಪಡೆದಿರುವ ಪಕ್ಷವು ಜನರ ಮಧ್ಯೆ ಕಂದರವನ್ನು ಸೃಷ್ಟಿಸಿದೆ. ಇದನ್ನು ತಡೆದು ದೇಶದಲ್ಲಿ ಜನರ ಮಧ್ಯೆ ಒಗ್ಗಟ್ಟನ್ನು ಮರು ಸ್ಥಾಪಿಸಲು ಕಾಂಗ್ರೆಸ್‌ನ್ನು ಮತ್ತೆ ಅ​ಕಾರಕ್ಕೆ ತರಬೇಕೆಂದು ಮಾಜಿ ಶಾಸಕ ಬಿ.ಎ. ಮೊಯಿದೀನ್‌ ಬಾವಾ ಹೇಳಿದರು.

ಮೂಲ್ಕಿ (ಆ.3೦): ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ ಏಕೈಕ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್‌ ಮಾತ್ರ. ಇಂದು ಅಧಿ​ಕಾರ ಪಡೆದಿರುವ ಪಕ್ಷವು ಜನರ ಮಧ್ಯೆ ಕಂದರವನ್ನು ಸೃಷ್ಟಿಸಿ ಜನರನ್ನು ಜಾತಿ ಮತಗಳ ಆಧಾರದಲ್ಲಿ ಒಡೆದು ಆಳುವ ನೀತಿ ಮುಂದುವರಿಸಿದೆ. ಇದನ್ನು ತಡೆದು ದೇಶದಲ್ಲಿ ಜನರ ಮಧ್ಯೆ ಒಗ್ಗಟ್ಟನ್ನು ಮರು ಸ್ಥಾಪಿಸಲು ಕಾಂಗ್ರೆಸ್‌ನ್ನು ಮತ್ತೆ ಅ​ಕಾರಕ್ಕೆ ತರಬೇಕೆಂದು ಮಾಜಿ ಶಾಸಕ ಬಿ.ಎ. ಮೊಯಿದೀನ್‌ ಬಾವಾ ಹೇಳಿದರು.

ಇವತ್ತಿನ ಕಾಂಗ್ರೆಸ್ ಸ್ವಾತಂತ್ರ್ಯದ ಸಮಯದಲ್ಲಿ ಇದ್ದ ಕಾಂಗ್ರೆಸ್ ಅಲ್ಲ: ಚಕ್ರವರ್ತಿ ಸೂಲಿಬೆಲೆ

ಮಂಗಳೂರು(Mangaluru) ಉತ್ತರ ವಿಧಾನಸಭಾ ಕ್ಷೇತ್ರ, ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌(Suratkal Block Congress) ಸಮಿತಿ ಹಾಗೂ ಗುರುಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ವಾಮಂಜೂರು ಜಂಕ್ಷನ್‌ನಲ್ಲಿ ಜರುಗಿದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಸಚಿವ ಬಿ. ರಮಾನಾಥ್‌ ರೈ(Ramanatha rai) ಮಾತನಾಡಿ, ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂದಿ(Indira Gandhi)​ಯವರು ತಂದಿರುವ ಸುಧಾರಣೆಗಳಿಂದ ಇಂದು ನಾವೆಲ್ಲರೂ ಆರಾಮಾಗಿ ಬದುಕುತ್ತಿದ್ದೇವೆ. ಅಕ್ರಮ ಸಕ್ರಮ, ಭೂ ಸುಧಾರಣಾ ಕಾಯ್ದೆಯಿಂದ ಇಂದು ಜನರಿಗೆ ಭೂಮಿ, ಮನೆ ಎಲ್ಲವೂ ಸಿಕ್ಕಿದೆಯೆಂದು ಹೇಳಿದರು.

ಆಗಿನ ಕಾಂಗ್ರೆಸ್ಸೇ ಬೇರೆ. ಈಗಿರುವುದು ನಕಲಿ ಕಾಂಗ್ರೆಸ್; ಕೇಂದ್ರ ಸಚಿವ ಪ್ರಹ್ಲಾದ ಜೋಷಿ ವಾಗ್ದಾಳಿ

ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಮಾಜಿ ಶಾಸಕ ಬಿ.ಎ. ಮೊಯಿದೀನ್‌ ಬಾವಾ, ಮಾಜಿ ಶಾಸಕ ಜೆ.ಆರ್‌. ಲೋಬೊ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್‌ ರೈ, ಕೃಪಾ ಅಮರ್‌ ಆಳ್ವ, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಶಾಲೆಟ್‌ ಪಿಂಟೋ, ಕೃಷ್ಣ ಅಮೀನ್‌, ಲಾರೆನ್ಸ್‌ ಡಿಸೋಜ, ಕೆಪಿಸಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹ್ಯಾರಿಸ್‌ ಬೈಕಂಪಾಡಿ, ಗುರುಪುರ ಬ್ಲಾಕ್‌ ಅಧ್ಯಕ್ಷ ಸುರೇಂದ್ರ ಕಂಬಳಿ, ಸುರತ್ಕಲ್‌ ಬ್ಲಾಕ್‌ ಅಧ್ಯಕ್ಷ ಉಮೇಶ್‌ ದಂಡೆಕೇರಿ, ಪ್ರಕಾಶ್‌ ಸಾಲಿಯಾನ್‌, ಅಲ್ಪಸಂಖ್ಯಾತ ವಿಭಾಗದ ಮುಹಮ್ಮದ್‌ ಸಮೀರ್‌ ಕಾಟಿಪಳ್ಳ, ಮಾಜಿ ಮೇಯರ್‌ ಹರಿನಾಥ್‌, ಕೆ. ಮುಹಮ್ಮದ್‌, ಶಾಹುಲ್‌ ಹಮೀದ್‌, ಗಿರೀಶ್‌ ಆಳ್ವ, ಅನಿಲ್‌ ಕುಮಾರ್‌, ಯು.ಕೆ. ಮೋನಪ್ಪ ಉಪಸ್ಥಿತರಿದ್ದರು. ರೆಹಮಾನ್‌ ಖಾನ್‌ ಕಾರ್ಯಕ್ರಮ ನಿರೂಪಿಸಿದರು.