ಚೆನ್ನೈ, (ಆ.28): ಕಾಂಗ್ರೆಸ್​ ಲೋಕಸಭಾ ಸದಸ್ಯ ಎಚ್​. ವಸಂತಕುಮಾರ್​  (70) ಕೋವಿಡ್​ ಸೋಂಕಿನಿಂದ ಇಂದು (ಶುಕ್ರವಾರ) ನಿಧನರಾಗಿದ್ದಾರೆ. 

 ಆಗಸ್ಟ್ 10ರಂದು ವಂಸತ್ ಕುಮಾರ್ ಅವರನ್ನು ಚೆನ್ನೈನ ಅಪೋಲೊ  ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರ ದೇಹದ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಅವರನ್ನು ಇಸಿಎಂಒ ಮತ್ತು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.  

ಆದ್ರೆ. ಇಮದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇನ್ನು ಇವರ ಪತ್ನಿ ಕೂಡ ಕೊರೋನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ ವಿರುದ್ಧ ನಾಯಕರ ಅಸಮಾಧಾನ, ಬಿಟೌನ್ ಮಾಫಿಯಾ ಬಿಚ್ಚಿಟ್ಟ ಕಂಗನಾ: ಆ.28ರ ಟಾಪ್ 10 ಸುದ್ದಿ!

ಇದೇ ಮೊದಲ ಬಾರಿಗೆ ಸಂಸದರಾಗಿದ್ದ ಎಚ್​. ವಸಂತಕುಮಾರ್​ ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇನ್ನು ವಸಂತಕುಮಾರ್​ ನಿಧನಕ್ಕೆ ಪ್ರಧಾನಿ ನರೇಮದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ತಮಿಳುನಾಡಿನ ಪ್ರಗತಿ ಬಗ್ಗೆ ಅವರಿಗಿದ್ದ ಕಾಳಜಿ ಪ್ರಶಂಸನೀಯ ಎಂದು ಅವರೊಂದಿಗಿನ ಮಾತುಕತೆಯನ್ನು ಸ್ಮರಿಸಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಸಂತಾಪ ಸೂಚಿಸಿದ್ದು, ವಸಂತಕುಮಾರ್​ ಸಾವು ಆಘಾತ ನೀಡಿದೆ. ಕಾಂಗ್ರೆಸ್​ ತತ್ವ- ಸಿದ್ಧಾಂತದ ಮೇಲೆ ಅವರಿಗಿದ್ದ ನಂಬಿಕೆ ಹಾಗೂ ಜನಸೇವೆ ಸದಾ ಹಸಿರಾಗಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.