ಕೆಲಸವಿಲ್ಲದೆ ಯೋಗೇಶ್ವರ್ ಗೊಂದಲ ಸೃಷ್ಟಿ: ಡಿ.ಕೆ.ಸುರೇಶ್
ಯೋಗೇಶ್ವರ್ ಹಿಂದೆಯೂ ಯಡಿಯೂರಪ್ಪ ಅವರನ್ನೂ ಬ್ಲಾಕ್‌ಮೇಲ್ ಮಾಡಿದರು. ಅದ್ಯಾವುದೋ ಸಿಡಿ ಇಟ್ಟುಕೊಂಡು ಸರ್ಕಾರವನ್ನೂ ಬೀಳಿಸಿದ್ದಾಯ್ತು. ಈಗ ಕಾಂಗ್ರೆಸ್ ಸರ್ಕಾರ ಕೆಡುವುತ್ತೇನೆ ಎನ್ನುತ್ತಿದ್ದಾರೆ. ಬರೀ ಸರ್ಕಾರ ಬೀಳಿಸೋ ಕೆಲಸ ಮಾತ್ರವೇ ಮಾಡೋದ? ಎಂದು ಪ್ರಶ್ನಿಸಿದ ಡಿ.ಕೆ.ಸುರೇಶ್

ಚನ್ನಪಟ್ಟಣ(ಸೆ.10): ವೈದ್ಯ ಕಾಲೇಜು ಕನಕಪುರದಲ್ಲೂ ಆಗುತ್ತೆ, ರಾಮನಗರದಲ್ಲೂ ಆಗುತ್ತೆ. ಮಾಡಲು ಕೆಲಸವಿಲ್ಲದೆ ಕೆಲವರು ಈ ಕುರಿತು ಗೊಂದಲ ಸೃಷ್ಟಿಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಈ ಹಿಂದೆ ಯೋಗೇಶ್ವರ್ ಬ್ಲಾಕ್‌ಮೇಲ್ ಮಾಡಿದ್ದರು ಎಂದು ಏಕವಚನದಲ್ಲೇ ವಾಗ್ದಾಳಿ ಮಾಡಿದರು.
ಅವರು ನಗರದಲ್ಲಿ ಮಾತನಾಡಿ, ರಾಮನಗರದ ಮೆಡಿಕಲ್ ಕಾಲೇಜನ್ನು ವೈಯಕ್ತಿಕ ಲಾಭಕ್ಕೆ ಸ್ಥಳಾಂತರ ಮಾಡಲಾಗಿದೆ ಎಂಬ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆರೋಪಕ್ಕೆ ಪ್ರತಿಕ್ರಿಯಿಸಿ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಬಿಜೆಪಿ-ಜೆಡಿಎಸ್ ಒಟ್ಟಾದರೂ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಆತ ಬಿಡದಿಯಲ್ಲಿ ರಿಯಲ್ ಎಸ್ಟೇಟ್ ಹೆಸರಲ್ಲಿ, ಮೆಗಾಸಿಟಿ ಮಾಡುತ್ತೇನೆಂದು ಜನರಿಗೆ ಟೋಪಿ ಹಾಕಿದ್ದಾಯ್ತು, ಆ ದಂಧೆ ಮಾಡಬೇಕಾದ ಅನಿವಾರ್ಯತೆಯಂತೂ ನಮಗಿಲ್ಲ. ಯೋಗೇಶ್ವರ್ ಹಿಂದೆಯೂ ಯಡಿಯೂರಪ್ಪ ಅವರನ್ನೂ ಬ್ಲಾಕ್‌ಮೇಲ್ ಮಾಡಿದರು. ಅದ್ಯಾವುದೋ ಸಿಡಿ ಇಟ್ಟುಕೊಂಡು ಸರ್ಕಾರವನ್ನೂ ಬೀಳಿಸಿದ್ದಾಯ್ತು. ಈಗ ಕಾಂಗ್ರೆಸ್ ಸರ್ಕಾರ ಕೆಡುವುತ್ತೇನೆ ಎನ್ನುತ್ತಿದ್ದಾರೆ. ಬರೀ ಸರ್ಕಾರ ಬೀಳಿಸೋ ಕೆಲಸ ಮಾತ್ರವೇ ಮಾಡೋದ? ಎಂದು ಪ್ರಶ್ನಿಸಿದರು.