'ಜಾರಕಿಹೊಳಿ ರಾಸಲೀಲೆ CD ಪ್ರಕರಣದಲ್ಲಿ ಚನ್ನಪಟ್ಟಣದವರ ಭಾಗಿ ಇದೆ'

ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣದಲ್ಲಿ ಚನ್ನಪಟ್ಟಣದವರೂ ಭಾಗಿ ಇದೆ ಎಂದು ಹೇಳುವ ಮೂಲಕ ಸಂಸದರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. 

Congress MP DK Suresh Hits back at Minister CP Yogeeshwar Over Ramesh Jarkiholi sex scandal Case rbj

ಬೆಂಗಳೂರು, (ಮಾ.12): ರಮೇಶ್ ಜಾರಕಿಹೊಳಿ ರಾಸಲೀಲೆ CD ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಎಸ್​ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಮಹಾನಾಯಕ ಇದ್ದಾರೆ ಎಂದು ಸ್ವತಃ ಜಾರಕಿಹೊಳಿ ಬ್ರದರ್ಸ್ ಹೇಳುತ್ತಿದ್ದಾರೆ. ಆದ್ರೆ, ಯಾರು ಎನ್ನುವುದನ್ನು ಸುಳಿವು ಸಹ ಕೊಡುತ್ತಿಲ್ಲ. ಇನ್ನು ಇದರ ಮಧ್ಯೆ CD ಪ್ರಕರಣದಲ್ಲಿ ಚನ್ನಪಟ್ಟಣದವರೂ ಭಾಗಿ ಇದೆ ಎಂದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಒಂದೇ ಮಾತಿನಲ್ಲಿ ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್‌ಗೆ ಟಾಂಗ್ ಕೊಟ್ಟರು.

ಜಾರಕಿಹೊಳಿ CD ಕೇಸ್​: ಮೊದಲ ದಿನವೇ ಮೂವರು ಬಲೆಗೆ, ಸ್ಫೋಟಕ ಮಾಹಿತಿ ಲಭ್ಯ

ಈ ಪ್ರಕರಣದಲ್ಲಿ ಕನಕಪುರ, ಬೆಳಗಾವಿಯವರ ಪಾತ್ರ ಇದೇ ಎಂದಿದ್ದ ಯೋಗೇಶ್ವರ್​ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಡಿಕೆ ಸುರೇಶ್.. ಸಿಡಿ ಪ್ರಕರಣದಲ್ಲಿ ಚನ್ನಪಟ್ಟಣದವರೂ ಭಾಗಿಯಾಗಿದ್ದಾರೆ. ಚನ್ನಪಟ್ಟಣದವರಿಗೆ ಅಧಿಕಾರದ ಮೇಲೆ ಆಸೆಯಿತ್ತಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಅವರದ್ದು ಭಾಗಿ ಇದೆ ಎಂದರು.

 ಕನಕಪುರದವರದ್ದು ಆಸೆಯಿದ್ದ ಮೇಲೆ, ಚನ್ನಪಟ್ಟಣದವರದ್ದು ಇಲ್ವಾ? ಚನ್ನಪಟ್ಟಣದವರು ಯಾರು? ಜೊತೆಯಲ್ಲೇ ಇದ್ದವರೆ ಅಲ್ವೇನಪ್ಪಾ? ಚಡ್ಡಿ, ಪ್ಯಾಂಟ್ ಬಿಚ್ಚೋದು ಅಲ್ಲ ಕಂಡು ಹಿಡಿದೋರು ಯಾರು? ನೋಡಿದೋರು ಜೊತೆಯಲ್ಲಿದ್ದವರು. ಜೊತೆಯಲ್ಲಿದ್ದವರು ಅದನ್ನ ನೋಡಲು ಸಾಧ್ಯ, ಬೇರೆಯವರಿಂದ ಹೇಗೆ ಸಾಧ್ಯ? ಅವರ ಜೊತೆಯಲ್ಲಿದ್ದವರು ಚನ್ನಪಟ್ಟಣದವರು ಅಲ್ವಾ? ಅವರನ್ನೇ ಕೇಳಿ ಎಂದು ಹೇಳಿದರು.

ಗೃಹ ಸಚಿವರ ಹೇಳಿಕೆಯನ್ನ ನಾನು ನೋಡಿದ್ದೇನೆ. ಈ ಪ್ರಕರಣವನ್ನ SITಗೆ ವಹಿಸಿದ್ದಾರೆ. ಆದರೆ ಅದರಲ್ಲಿ FIR ಇಲ್ಲ. ಹೀಗಾಗಿ ಇದೊಂದು ತನಿಖೆನಾ? ಅಥವಾ ಪ್ರಕರಣವನ್ನ ಮುಚ್ಚಿ ಹಾಕುವ ಪ್ರಯತ್ನಾನಾ? ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ರಾಜ್ಯದ ಜನಕ್ಕೆ ಆಗಿದ ಅಪಮಾನವಾಗಲಿ, ಮಾಜಿ ಸಚಿವರು ಕೇಳಿದ ನ್ಯಾಯಕ್ಕಾಗಲಿ, ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ? ಅವರು ಏಕೆ ಸಿಡಿ ಪ್ರಕರಣದಲ್ಲಿ ತಗುಲಿದ್ರು ಅನ್ನೋದ್ರ ಬಗ್ಗೆ ತನಿಖೆ ಆಗಬೇಕು ಅಂದ್ರೆ ಎಫ್​ಐಆರ್ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅದು ಪೊಲೀಸ್ ಕಾನೂನು ಒಳಗಡೆಯೇ ಇರಬೇಕು. ಇದು ಕೇವಲ ಕಣ್ಣೊರೆಸುವ ತಂತ್ರವನ್ನ ಮಾಡಿದ್ದಾರೆ. ಇದು ಕ್ಲಿನ್​ಚಿಟ್ ಕೊಡುವ ಸಂಬಂಧ ಒಂದು ತಂಡವನ್ನ ರಚನೆ ಮಾಡಿದ್ದಾರೆ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios