ಇಡಿ ಬೇಕು ಅಂತಲೇ ದುರದ್ದೇಶದಿಂದ ಮಾಡುತ್ತಿದ್ದಾರೆ. ಇಡಿಗೂ ಗೊತ್ತಿದೆ 14 ನಿವೇಶನಗಳಲ್ಲಿ ಯಾವುದೇ ಕಾನೂನು ಬಾಹಿರವಾಗಿ ಚಟುವಟಿಕೆ ನಡೆದಿಲ್ಲ. ನಮಗೆ ಕೊಟ್ಟಿರುವ ನಿವೇಶನ ಕಾನೂನಾತ್ಮಕವಾಗಿಯೇ ಇದೆ. ಕೇಂದ್ರದವರು ಇಡಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಕರ್ನಾಟಕದ ಬಿಜೆಪಿ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಇಡಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದ ಡಾ. ಯತೀಂದ್ರ ಸಿದ್ದರಾಮಯ್ಯ
ಮೈಸೂರು(ಫೆ.01): ಬಿಜೆಪಿ ತಾಳಕ್ಕೆ ಇಡಿ ಕುಣಿಯುತ್ತಿದೆ. ಅಂತಿಮವಾಗಿ ಸತ್ಯ, ನ್ಯಾಯ ಯಾವ ಕಡೆ ಇರುತ್ತೆ ಅವರಿಗೆ ಗೆಲ್ಲುವು ಆಗುತ್ತೆ ಎಂದು ವಿಧಾನಪರಿಷತ್ತು ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಬೇಕು ಅಂತಲೇ ದುರದ್ದೇಶದಿಂದ ಮಾಡುತ್ತಿದ್ದಾರೆ. ಇಡಿಗೂ ಗೊತ್ತಿದೆ 14 ನಿವೇಶನಗಳಲ್ಲಿ ಯಾವುದೇ ಕಾನೂನು ಬಾಹಿರವಾಗಿ ಚಟುವಟಿಕೆ ನಡೆದಿಲ್ಲ. ನಮಗೆ ಕೊಟ್ಟಿರುವ ನಿವೇಶನ ಕಾನೂನಾತ್ಮಕವಾಗಿಯೇ ಇದೆ. ಕೇಂದ್ರದವರು ಇಡಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಕರ್ನಾಟಕದ ಬಿಜೆಪಿ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಇಡಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.
ಮೈಕ್ರೋ ಫೈನಾನ್ಸ್‌ಗೆ ಹೆದರಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಸಿದ್ದರಾಮಯ್ಯ
ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಅವರ ಹೆಸರನ್ನ ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ. ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ. ಆದರೆ, ಇದರಲ್ಲಿ ಯಾವುದೇ ನಿಜಾಂಶ ಇಲ್ಲ. ಆರೋಪ ಮುಕ್ತರಾಗಿ ಸಿದ್ದರಾಮಯ್ಯ ಹೊರ ಬರುತ್ತಾರೆ ಎಂದರು.
ಇಡಿಗೆ ಯಾವ ಸಾಕ್ಷಿ ಸಿಕ್ಕಿದೆ? ಯಾವ ಸಾಕ್ಷಿಗಳು ಇಡಿಗೆ ಸಿಕ್ಕಿಲ್ಲ. ಬೇಕಿದ್ರೆ ಇಡಿ ಸಾಕ್ಷಿ ತೋರಿಸಲಿ. ಬೇರೆಯವರ ಆಸ್ತಿಗಳನ್ನ ಸೀಜ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ನಮ್ಮ ಕುಟುಂಬದ ಹೆಸರಿನಲ್ಲಿರುವ ಯಾವ ಆಸ್ತಿಗಳನ್ನು ಸೀಜ್ ಮಾಡಿಲ್ಲ. ಮುಡಾದ ಹಗರಣದಲ್ಲಿ ಭಾಗಿಯಾದವರ ಆಸ್ತಿಗಳನ್ನ ಮಾತ್ರ ಇಡಿ ಸೀಜ್ ಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮಠಮಾನ್ಯಗಳಿಂದ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸ: ಬಿ.ವೈ.ವಿಜಯೇಂದ್ರ
ಇಡಿ ರೀಪೋರ್ಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸೈಟಿನ ವಿಚಾರವೇ ಬೇರೆ. ಮೂಡಾದಲ್ಲಿ ಆಗಿರುವ ಹಗರಣವೇ ಬೇರೆ. ಮುಡಾದವರು ನಮ್ಮ ಜಮೀನನ್ನ ಅನಧಿಕೃತವಾಗಿ ವಶಪಡಿಸಿಕೊಂಡಿದ್ದರು. ಇದಕ್ಕೆ ಬದಲಿಯಾಗಿ ನಿವೇಶನ ಕೊಟ್ಟಿದ್ದಾರೆ. ಹಿಂದೆ ಭೂಸ್ವಾಧಿನಪಡಿಸಿಕೊಂಡ ಭೂಮಿಗೆ ರೈತರಿಗೆ 50:50ಯಲ್ಲಿ ನಿವೇಶನ ಕೊಟ್ಟು ಹಗರಣ ಮಾಡಿದ್ದಾರೆ. ಮುಡಾ ಸದ್ಯಸರು ಇದರಲ್ಲಿ ಭಾಗಿಯಾಗಿದ್ದಾರೆ. ಇದು ಕಾನೂನುಬಾಹಿರವಾಗಿ ನಡೆದಿರುವುದು. ಇದಕ್ಕೆ ನಮ್ಮ 14 ನಿವೇಶಗಳಿಗೂ ಸಂಬಂಧ ಇಲ್ಲ ಎಂದರು.
ಪತ್ರದಲ್ಲಿ ತಪ್ಪಾಗಿರುವುದಕ್ಕೆ ವೈಟ್ನರ್
ಮುಡಾ ದಾಖಲೆಗೆ ವೈಟ್ನರ್ ಹಚ್ಚಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಪತ್ರದಲ್ಲಿ ತಪ್ಪಾಗಿರುವುದಕ್ಕೆ ವೈಟ್ನರ್ ಹಾಕಿರುವುದು. ದೇವನೂರು ಬಡಾವಣೆಯಲ್ಲಿ ಕೊಡಿ ಎಂದು ಕೇಳಿದರೆ ತಪ್ಪಾಗುತ್ತೆ ಅಂಥ ಯಾರಾದರೂ ಹೇಳಿರಬಹುದು ಅದಕ್ಕೆ ತಿದ್ದಿ ವೈಟ್ನರ್ ಹಾಕಿರಬಹುದು. ನಾವು ಇಂತಹದ್ದೆ ಜಾಗದಲ್ಲಿ ಸೈಟ್ ಕೊಡಿ ಎಂದು ಕೇಳಿಲ್ಲ. ನಮ್ಮ ಜಮೀನಿನನ್ನ ಮುಡಾ ಭೂಸ್ವಾಧಿನಪಡಿಸಿಕೊಂಡಿತ್ತು. ಅದರ ಬದಲಿಯಾಗಿ ಎಲ್ಲಿಯಾದರೂ ಕೊಡಿ ಎಂದು ಕೇಳಿರುವುದು. ದೇವನೂರು ಬಡಾವಣೆಯಲ್ಲಿ ಸೈಟ್ ಖಾಲಿ ಇದ್ಯಾ ಇಲ್ವಾ ಎಂಬುದು ನಮಗೆ ಗೊತ್ತಿಲ್ಲ. ಮುಡಾದವರಿಗೆ ಎಲ್ಲಿ ಸೂಕ್ತ ಅನಿಸಿತ್ತೊ ಅಲ್ಲಿ ನಿವೇಶನ ಕೊಟ್ಟಿದ್ದಾರೆ. ನಮ್ಮ ತಂದೆ ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
