ತೇಜಸ್ವಿ ಸೂರ್ಯ-ಸೂಲಿಬೆಲೆ ಹತ್ಯೆಗೆ ಸಂಚು: 'ಅವೆಲ್ಲ ಚಿಲ್ಲರೆ ಬಜಾರ್ ವಿಷ್ಯಗಳು'

ಸಂಸದ ತೇಜಸ್ವಿ ಸೂರ್ಯ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅವೆಲ್ಲ ಚಿಲ್ಲರೆ ಬಜಾರ್ ವಿಷ್ಯಗಳು ಎಂದಿದ್ದಾರೆ.

Congress MLC CM ibrahim Reacts On sdpi wokers planned kill tejasvi surya sulibele

ಮಂಗಳೂರು,(ಜ.17): ತೇಜಸ್ವಿ ಸೂರ್ಯ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸ್ಕೆಚ್ ಪ್ರಕರಣದಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನಲ್ಲಿ ಇಂದು (ಶುಕ್ರವಾರ) ಮಾತನಾಡಿರುವ ಇಬ್ರಾಹಿಂ, ಸಿಎಎ ಜಾಗೃತಿ ಜಾಥಾದಲ್ಲಿ ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸಿಎಂ ಇಬ್ರಾಹಿಂ ಗರಂ ಆಗಿ ಉತ್ತರಿಸಿದರು.

ಸೂಲಿಬೆಲೆ-ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್: 'ಪೊಲೀಸ್ ಕಮಿಷನರ್ ಆರೋಪ ಸುಳ್ಳು'

ಅದರ ಬಗ್ಗೆ ಕೇಳಬೇಡಿ, ಅದೆಲ್ಲಾ ಚಿಲ್ಲರೆ ಬಜಾರ್ ವಿಷಯಗಳು. ಯಾರು ಯಾವುದರಲ್ಲಿ ಆಟ ಆಡ್ತಾರೋ ಅವರು ಅದರಲ್ಲೇ ಅಂತ್ಯ ಆಗುತ್ತಾರೆ ಎಂದರು.

ಒಂದು ಕಡೆ ಹಿಂದೂ ಭಯೋತ್ಪಾದಕರು, ಮತ್ತೊಂದು ಕಡೆ ಮತ್ತೊಂದು ಭಯೋತ್ಪಾದಕರು. ನಾವು ಸೌಮ್ಯವಾದಿಗಳು. ಈ ಎರಡು ಕೈಗಳ ಮಧ್ಯೆ ನಾವು ಸ್ಯಾಂಡ್ ವಿಚ್ ಆಗ್ತಿದೀವಿ ಎಂದು ಹೇಳಿದರು.

ಸಿಎಎ ಪರ ಪ್ರತಿಭಟನೆ: ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಸ್ಕೆಚ್!

ಮನುಷ್ಯ ಮನುಷ್ಯನಾಗಿ ಬಾಳಬೇಕು. ನಮ್ಮ ಕಲ್ಪನೆಯಲ್ಲಿ ಇಲ್ಲದ್ದು ಈಗ ಆಗ್ತಿದೆ. ಆವಾಗಲೂ ಆರ್ ಎಸ್ ಎಸ್ ನವರು ಇದ್ದರು, ಅದ್ರೆ ಈಥರ ಇರಲಿಲ್ಲ. ಈಗ ಸಂಪೂರ್ಣ ವಾತಾವರಣ ರೌಡಿಸಂ ಕಡೆ ಹೋಗ್ತಿದ್ದು, ಸಜ್ಹನರಿಗೆ ಕಾಲವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೂಲಿಬೆಲೆ ಕೂಡ ನಾಲಿಗೆ ಹರಿ ಬಿಟ್ಟವರೇ ಆಗಿದ್ದಾರೆ. ಅವರು ಕಂಟ್ರೋಲ್‌ನಲ್ಲಿ ಇರಲಿ, ಇವರು ಕಂಟ್ರೋಲ್ ಇರಬೇಕು. ಸರ್ಕಾರ ತನಿಖೆ ಮಾಡಲಿ. ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನ ಟೌನ್‌ಹಾಲ್‌ ಬಳಿ ಸಿಎಎ ಪರ ಜಾಗೃತಿ ಜಾಥಾ ವೇಳೆ ಸಂಸದ ತೇಜಸ್ವಿ ಸೂರ್ಯ ಹಾಗು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಹತ್ಯೆಗೆ ಎಸ್‌ಡಿಪಿಐ ಕಾರ್ಯಕರ್ತರು ಸಂಚು ರೂಪಿಸಿದ್ದರು ಎಂದು ಸ್ವತಃ ಬೆಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ. ಇದು ಸ್ಫೋಟಕ ಮಾಹಿತಿ ಹೊರಬೀಳುತ್ತಿದ್ದಂತೆಯೇ ರಾಜ್ಯದಲ್ಲಿ ಎಸ್‌ಡಿಪಿಐ ಬ್ಯಾನ್‌ ಮಾಡುವಂತೆ ಆಗ್ರಹಗಳು ಕೇಳಿಬರುತ್ತಿವೆ. ಈ  ಬಗ್ಗೆ ರಾಜ್ಯ ಸರ್ಕಾರವು ಸಹ ಗಂಭೀರ ಚಿಂತನೆ ನಡೆಸಿದೆ.

Latest Videos
Follow Us:
Download App:
  • android
  • ios