ಸ್ವಾಮೀಜಿಗಳಿಗೆ ರಾಜಕೀಯ ಪ್ರವೇಶಕ್ಕೆ ಆಫರ್ ಕೊಟ್ಟ ನಡ್ಡಾ ನಡೆಗೆ ಕಾಂಗ್ರೆಸ್ ಶಾಸಕರ ವಿರೋಧ
ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಧರ್ಮ ಬೆರೆಯುತ್ತಿದೆ. ರಾಜಕಾರಣದಲ್ಲಿ ಧರ್ಮ ಬೆರೆಸುವ ಸಂಸ್ಕೃತಿ ಕಾಂಗ್ರೆಸ್‌ಗೂ ಸರಿಯಲ್ಲ, ಬಿಜೆಪಿಗೂ ಸರಿಯಲ್ಲ. ದೇಶ ಉಳಿಯಬೇಕಾದರೆ ಧರ್ಮ ರಾಜಕಾರಣದಲ್ಲಿ ಬರಬಾರದು: ಶಿವಾನಂದ ಪಾಟೀಲ
ವಿಜಯಪುರ(ಫೆ.27): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಡೆಗೆ ಕಾಂಗ್ರೆಸ್ ಶಾಸಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ವಿರೋಧ ವ್ಯಕ್ತಪಡಿಸಿದ್ದಾರೆ.
ಜೆ.ಪಿ. ನಡ್ಡಾ ಸ್ವಾಮೀಜಿಗಳಿಗೆ ರಾಜಕೀಯ ಪ್ರವೇಶಕ್ಕೆ ಆಫರ್ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಧರ್ಮ ಬೆರೆಯುತ್ತಿದೆ. ರಾಜಕಾರಣದಲ್ಲಿ ಧರ್ಮ ಬೆರೆಸುವ ಸಂಸ್ಕೃತಿ ಕಾಂಗ್ರೆಸ್‌ಗೂ ಸರಿಯಲ್ಲ, ಬಿಜೆಪಿಗೂ ಸರಿಯಲ್ಲ. ದೇಶ ಉಳಿಯಬೇಕಾದರೆ ಧರ್ಮ ರಾಜಕಾರಣದಲ್ಲಿ ಬರಬಾರದು ಅಂತ ತಿಳಿಸಿದ್ದಾರೆ.
ಪಂಚಮಸಾಲಿ 2ಎ ಮೀಸಲಿಗೆ ಶಾಸಕ ಪಾಟೀಲ ಬೆಂಬಲ
ಕಾಂಗ್ರೆಸ್ ಪಕ್ಷ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಿವಾನಂದ ಪಾಟೀಲ ಅವರು, ಕಾಂಗ್ರೆಸ್ ಪಕ್ಷ ಬಿಡೋಲ್ಲ ಅಂತ ಹೇಳುವ ಮೂಲಕ ಪಕ್ಷಾಂತರಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ನಾನು ಪಕ್ಷ ಬಿಟ್ಟು ಹೋಗ್ತೀನಿ ಅಂತ ಎಲ್ಲಿಯೂ ಹೇಳಿಲ್ಲ, ಮಾಧ್ಯಮದವರು ಹೇಳಬೇಡಿ, ಪಕ್ಷದ ವರಿಷ್ಠರಲ್ಲಿ ಕೆಲವು ಏನಾದರೂ ನಾನು ಹೇಳಿಕೊಳ್ಳಬಹುದು. ನಾನು ಬಹಿರಂಗವಾಗಿ ಯಾವುದು ಹೇಳಲ್ಲ ಅಂತ ಹೇಳಿದ್ದಾರೆ.