Asianet Suvarna News Asianet Suvarna News

ಕಾಂಗ್ರೆಸ್‌ ಶಾಸಕರೇ ಸರ್ಕಾರವನ್ನು ಅಭದ್ರಗೊಳಿಸುತ್ತಿದ್ದಾರೆ: ಕೇಂದ್ರ ಸಚಿವ ಜೋಶಿ‌

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಡುವೆ ಈಗಾಗಲೇ ಜಗಳ‌ ನಡೆಯುತ್ತಿದೆ. ಹೀಗಾಗಿ, ಬೇರೆಯವರು ಸರ್ಕಾರವನ್ನು ಅಭದ್ರಗೊಳಿಸು‌ವ ಮಾತೇ ಬರುವುದಿಲ್ಲ. ಅವರೇ ಅಭದ್ರಗೊಳಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರೇ ಬಡಿದಾಡಿಕೊಂಡು ಬಿಜೆಪಿಯವರ ಮೇಲೆ ಹಾಕುತ್ತಿದ್ದಾರೆ ಎಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ‌ 

Congress MLAs are making the Government Insecure Says Union Minister Pralhad Joshi grg
Author
First Published Feb 5, 2024, 4:27 AM IST

ಹುಬ್ಬಳ್ಳಿ(ಫೆ.05): ರಾಜ್ಯ ಸರ್ಕಾರವನ್ನು ನಾವು ಅಭದ್ರಗೊಳಿಸುತ್ತಿಲ್ಲ‌. ಅವರ ಶಾಸಕರೇ ಆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ‌ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಡುವೆ ಈಗಾಗಲೇ ಜಗಳ‌ ನಡೆಯುತ್ತಿದೆ. ಹೀಗಾಗಿ, ಬೇರೆಯವರು ಸರ್ಕಾರವನ್ನು ಅಭದ್ರಗೊಳಿಸು‌ವ ಮಾತೇ ಬರುವುದಿಲ್ಲ. ಅವರೇ ಅಭದ್ರಗೊಳಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರೇ ಬಡಿದಾಡಿಕೊಂಡು ಬಿಜೆಪಿಯವರ ಮೇಲೆ ಹಾಕುತ್ತಿದ್ದಾರೆ ಎಂದರು.

ಸಚಿವ ಸಂತೋಷ ಲಾಡ್ ಅವರಿಗೆ ಪ್ರಧಾನಿ ನರೇಂದ್ರ‌ ಮೋದಿ ಹಾಗೂ ಜೋಶಿ ಅವರನ್ನು ಬೈಯ್ಯಲು ಹೇಳಿದ್ದಾರೆ. ಅವರು ನಮ್ಮನ್ನು ಬಯ್ಯದೇ ಇದ್ದರೆ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಭಯ ಹಾಕಿದ್ದಾರೆ. ಹಾಗಾಗಿ, ಲಾಡ್‌ ಬಿಜೆಪಿ, ಮೋದಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಜಗದೀಶ್‌ ಶೆಟ್ಟರ್‌ ವಾಪಸ್‌ ಬಿಜೆಪಿಗೆ ಹೋಗಬಾರದಿತ್ತು: ಸಚಿವ ಎಚ್.ಕೆ.ಪಾಟೀಲ್

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯದ ಕುರಿತು ಮಾತನಾಡಿದ ಜೋಶಿ, ಮೊದಲು ರಾಜ್ಯಕ್ಕೆ ₹60 ಸಾವಿರ ಕೋಟಿ ಅನುದಾನ ಬರುತ್ತಿತ್ತು. ಈಗ ₹2.60 ಲಕ್ಷ ಕೋಟಿ ಅನುದಾನ ಬರುತ್ತಿದೆ. ಯುಪಿಎ ಕಾಲದಲ್ಲಿ ತೆರಿಗೆ ₹81 ಸಾವಿರ ಕೋಟಿ ಬರುತ್ತಿತ್ತು. ಈಗ ₹2.51 ಲಕ್ಷ ಕೋಟಿ‌ ಬರುತ್ತಿದೆ. ಯಾವುದು ಅನ್ಯಾಯ ಎಂಬುದನ್ನು ಕಾಂಗ್ರೆಸ್ ಹೇಳಲಿ. ಹೆಚ್ಚು ರಸ್ತೆ, ರೈಲು, ರೈತರಿಗೆ ಯೋಜನೆಗಳನ್ನು ನಾವು ಕೊಟ್ಟಿದ್ದೇವೆ ಎಂದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಇವರ ಶಾಸಕರೇ ಸರ್ಕಾರದ ವಿರುದ್ಧ 50% ಕಮೀಷನ್ ಆರೋಪ ಎಂದು ಹೇಳುತ್ತಿದ್ದಾರೆ. ಕೇಂದ್ರದಿಂದ ನೀಡಿರುವ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸುತ್ತಿಲ್ಲ. ಇವರು ಕೆಲಸ ಮಾಡಿದರೆ ಕೇಂದ್ರದಿಂದ ಅನುದಾನ ನೀಡಲು ಸಿದ್ಧವಿದೆ ಎಂದರು.

Follow Us:
Download App:
  • android
  • ios