Asianet Suvarna News

ಸಂಜನಾ ಜತೆ ಕ್ಯಾಸಿನೋದಲ್ಲಿದ್ರು ಎಂದ ಸಂಬರಗಿ ವಿರುದ್ಧ ಕೇಸ್ ಜಡಿದ ಶಾಸಕ ಜಮೀರ್

ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನ ಮಾಡಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ದೂರು ದಾಖಲಿಸಿದ್ದಾರೆ.

congress mla zameer ahmed Khan Files Complaint against Prashanth Sambargi
Author
Bengaluru, First Published Sep 9, 2020, 7:17 PM IST
  • Facebook
  • Twitter
  • Whatsapp

ಬೆಂಗಳೂರು, (ಸೆ. 09): ನಟಿ ಸಂಜನಾ ಗರ್ಲಾನಿ ಜೊತೆ ಕ್ಯಾಸಿನೋದಲ್ಲಿದ್ರು ಎಂದು ಆರೋಪ ಮಾಡಿದ್ದ ಶಾಸಕ ಜಮೀರ್ ಅಹಮ್ಮದ್ ದೂರು ನೀಡಿದ್ದಾರೆ. ಪ್ರಶಾಂತ್ ನಂಬರಗಿ ಸ್ಯಾಂಡಲ್ ವುಡ್ ಡ್ರಗ್ಸ್ ನಂಟಿನ ಪ್ರಕರಣದ ಬಗ್ಗೆ ಮಾತನಾಡುವಾಗ ಜಮೀರ್ ಅಹ್ಮದ್ ಹೆಸರನ್ನು ಪ್ರಸ್ತಾಪಿಸಿದ್ದು, ಅವರ ವಿರುದ್ಧ ಚಾಮರಾಜಪೇಟೆ ಠಾಣೆಗೆ ಜಮೀರ್ ಅಹ್ಮದ್ ದೂರು ನೀಡಿದ್ದಾರೆ.

"

ಅಷ್ಟಕ್ಕೂ ಪ್ರಶಾಂತ್ ಸಂಜನಾ ಹೆಸರೇ ಹೇಳಲು ಮೂಲ ಕಾರಣವೇನು?

ಶ್ರೀಲಂಕಾದ ಕೊಲಂಬೋ ಕ್ಯಾಸಿನೋದಲ್ಲಿ ನಟಿ ಸಂಜನಾ ಗರ್ಲಾನಿ ಜೊತೆಗೆ ಜಮೀರ್ ಅಹಮ್ಮದ್ ಇದ್ದರು ಎಂದು ಸಂಬರಗಿ ಬಾಂಬ್ ಸಿಡಿಸಿದ್ದರು. ಇದರು ಆಧಾರ ರಹಿತವಾಗಿ ನನ್ನ ಹೆಸರನ್ನು ಹೇಳಿದ್ದಾರೆ ಎಂದು ಜಮೀರ್ ಅಹ್ಮದ್ ದೂರು ದಾಖಲಸಿದ್ದಾರೆ. ಪೊಲೀಸರು ಸದ್ಯಕ್ಕೆ ಎನ್.ಸಿ.ಆರ್ ದಾಖಲಿಸಿಕೊಂಡಿದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

ಕೊಲಂಬೋ ಕ್ಯಾಸಿನೋದಲ್ಲಿ ನಟಿ ಸಂಜನಾ ಗರ್ಲಾನಿ ಜೊತೆಗೆ ಜಮೀರ್ ಅಹ್ಮದ್ ಕೂಡ ಹೋಗಿದ್ದರು ಪ್ರಶಾಂತ್ ಗಂಭೀರ ಆರೋಪ ಮಾಡಿದ್ದಲ್ಲದೇ, ಸಂಜನಾಳ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದರು.

ಬಳಿಕ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂಜನಾ ಅವನಿಗೆ ಚಪ್ಪಲಿ ತಗೆದುಕೊಂಡು ಹೊಡೆತ್ತೇನೆ ಅಂತೆಲ್ಲಾ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ಜಮೀರ್ ಅಹ್ಮದ್ ಸರ್ ಪ್ರಶಾಂತ್ ಸಂಬರಿಗಿಯವನ ಸುಮ್ನೆ ಬಿಡ್ಬೇಡಿ ಸರ್ ಎಂದು ಹೇಳಿದ್ದರು. ಸದ್ಯ ಸಂಜನಾ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿದ್ದಾರೆ.

"

Follow Us:
Download App:
  • android
  • ios