ಅಗತ್ಯ ವಸ್ತುಗಳ ದರ ಏರಿಕೆಗೆ ಬಿಜೆಪಿ ಕಾರಣ: ನಾರಾಯಣಸ್ವಾಮಿ
ಬೆಲೆ ನಿಯಂತ್ರಣ ಮಾಡದೆ ಬಿಜೆಪಿ ಸರ್ಕಾರ ಬಡವರ ಹಾಗೂ ಮಧ್ಯವ ವರ್ಗದ ಜನರ ಶಾಪಕ್ಕೆ ಗುರಿಯಾಗಿದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ: ಶಾಸಕ ನಾರಾಯಣಸ್ವಾಮಿ
ಬಂಗಾರಪೇಟೆ(ಜು.16): ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಜೀವನಕ್ಕೆ ಬಿಜೆಪಿ ಸರ್ಕಾರ ಕೊಡಲಿ ಪೆಟ್ಟು ನೀಡಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪಿಸಿದರು. ತಾಲೂಕಿನ ಮಾಗೊಂದಿ ಗ್ರಾಮ ಪಂಚಾಯ್ತಿಯ ಸಕ್ಕನಹಳ್ಳಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಗ್ರಾಮದಿಂದ ಮಾಗೊಂದಿ ಗ್ರಾಮದವರೆಗೂ ರಸ್ತೆ ಡಾಂಬರೀಕರಣಕ್ಕೆ ಚಾಲನೆ ಹಾಗೂ ಹಾರೋಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ದೀಪ ಉದ್ಘಾಟಿಸಿ ಮಾತನಾಡಿದ ಅವರು, ಮತ್ತೆ ಬಡವರು, ಮಧ್ಯಮ ವರ್ಗದ ಜನರು ನೆಮ್ಮದಿಯಾಗಿ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಆಡಳಿತ ಬಂದರೆ ಮಾತ್ರ ಸಾಧ್ಯವೆಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ
ಬೆಲೆ ನಿಯಂತ್ರಣ ಮಾಡದೆ ಬಿಜೆಪಿ ಸರ್ಕಾರ ಬಡವರ ಹಾಗೂ ಮಧ್ಯವ ವರ್ಗದ ಜನರ ಶಾಪಕ್ಕೆ ಗುರಿಯಾಗಿದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ,ಆಗ ಮತ್ತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಬರಲಿದೆ. ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಲ್ಯಗಳನ್ನು ಕಲ್ಪಿಸಿಕೊಡಲಾಗಿದೆ, ಜನರ ಸಮಸ್ಯೆಗಳಿಗೆ ತಕ್ಕಂತೆ ಸ್ಪಂದಿಸಿ ಜನರ ಸೇವೆ ಮಾಡಿರುವೆ ಎಂದರಲ್ಲದೆ ಕಾಮಸಮುದ್ರ ಗ್ರಾಮದಿಂದ ಪಟ್ಟಣದ ದೇಶಿಹಳ್ಳಿ ರೈಲ್ವೆ ಗೇಟ್‌ವರೆಗೂ 8ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಈಗಾಗಲೆ ಚಾಲನೆ ನೀಡಿದ್ದು ಎರಡು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ಜೆಡಿಎಸ್ ಸೇರಿದ ಮುನಿಯಪ್ಪ ಆಪ್ತ, ಹೈಕಮಾಂಡ್‌ಗೆ ಟ್ರೈಲರ್ ತೋರಿಸಿದ್ರಾ ಕೈ ಹಿರಿಯ ನಾಯಕ?
ಈ ವೇಳೆ ಮಾಗೊಂದಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯಮ್ಮ,ಉಪಾಧ್ಯಕ್ಷೆ ಕುಪೇಂದ್ರ,ಮಾಜಿ ಅಧ್ಯಕ್ಷ ಚಂಗಾರೆಡ್ಡಿ,ಡಿಸಿಸಿ ಬ್ಯಾಂಕಿನ ನಿರ್ದೇಶಕ ಗೋವಿಂದರಾಜು,ಭೂ ಬ್ಯಾಂಕಿನ ಮಾಜಿ ಅಧ್ಯಕ್ಷ ಚಿಕ್ಕಹೊಸಹಳ್ಳಿ ಮಂಜುನಾಥಗೌಡ, ಮುಖಂಡರಾದ ದೇವರಾಜು, ಆನಂದ್,ನಾರಾಯಣಸ್ವಾಮಿ, ತಮ್ಮಣ್ಣ, ಗೋಪಿ ಮತ್ತಿತರರು ಇದ್ದರು.