Asianet Suvarna News Asianet Suvarna News

ರಾಜ್ಯಸಭೆ ಎಲೆಕ್ಷನ್ ಅಡ್ಡಮತದಾನ ಭೀತಿ: ಕಾಂಗ್ರೆಸ್‌ ಶಾಸಕರು ಹೋಟೆಲ್‌ಗೆ, ವೋಟಿಂಗ್ ತರಬೇತಿ

ಕಾಂಗ್ರೆಸ್ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಸಲುವಾಗಿ ಮಾನ್ಯತಾ ಟೆಕ್‌ ಪಾರ್ಕ್‌ ಹಿಲ್ಟನ್ ಹೋಟೆಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ಮತ ಚಲಾವಣೆ ಮಾಡಲು ಸೂಚಿಸಲಾಗಿದೆ. 

Congress MLA's Shift to Hotel due to Cross Voting in Rajya Sabha Elections  grg
Author
First Published Feb 27, 2024, 7:30 AM IST

ಬೆಂಗಳೂರು(ಫೆ.27):  ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನದ ಆತಂಕದ ಹಿನ್ನೆಲೆ ಕಾಂಗ್ರೆಸ್‌ನ ಪಾಸಕರನ್ನು ಸೋದುವಾರ ಸಂಜೆಯೇ ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಸ್ಥಳಾಂತರಗೊಳಿಸಿದ್ದು, ಮಂಗಳವಾರ ವಿಧಾನ ಸೌಧದಲ್ಲಿ ನಡೆಯಲಿರುವ ಚುನಾವಣಾ ಸ್ಥಳಕ್ಕೆ ಶಾಸಕರು ನೇರವಾಗಿ ಆಗಮಿಸಲಿದ್ದಾರೆ.

ಅಡ್ಡಮತದಾನ ತಪ್ಪಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಏಜೆಂಟ್ ಆಗಿ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅಲ್ಲದೆ ಒಬ್ಬೊಬ್ಬ ಅಭ್ಯರ್ಥಿ ಪರ ಮತ ಚಲಾವಣೆ ಕುರಿತು ನಿಗಾವಹಿಸಲು ಪೋಲಿಂಗ್ ಏಜೆಂಟರನ್ನು ನೇಮಿಸಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿಗಳಾದ ಅಜಯ್‌ ಮಾಕನ್‌ ರಿಜ್ವಾನ್ ಅರ್ಷದ್, ಸೈಯದ್ ನಾಸಿ‌ರ್ ಹುಸೇನ್‌ ಯು.ಬಿ. ವೆಂಕಟೇಶ್, ಜಿ.ಸಿ. ಚಂದ್ರಶೇಖರ್ ಆವರಿಗೆ ಮಾಜಿ ಎಂಎಲ್ಲಿ ನಾರಾಯಣಸ್ವಾಮಿ ಅವರನ್ನು ಪೊಲೀಂಗ್‌ ಏಜೆಂಟರಾಗಿ ನೇಮಿಸಲಾಗಿದೆ. 

ಕರ್ನಾಟಕದ ರಾಜ್ಯಸಭೆ ಅಖಾಡದಲ್ಲಿ 5 ಜನ: ಚುನಾವಣೆ ಗ್ಯಾರಂಟಿ..!

ಕಾಂಗ್ರೆಸ್ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಸಲುವಾಗಿ ಮಾನ್ಯತಾ ಟೆಕ್‌ ಪಾರ್ಕ್‌ ಹಿಲ್ಟನ್ ಹೋಟೆಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ಮತ ಚಲಾವಣೆ ಮಾಡಲು ಸೂಚಿಸಲಾಗಿದೆ. ಬಳಿಕ ಹೋಟೆಲ್‌ನಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಮುಖ್ಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಅವರು ವಿಪ್ ಜಾರಿ ಮಾಡಿದ್ದು, ಎಲ್ಲಾ ಶಾಸಕರೂ ಕಡ್ಡಾಯವಾಗಿ ಮತದಾನಕ್ಕೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ. 

ಅಣಕು ಮತದಾನ, ತರಬೇತಿ: 

ಕಾಂಗ್ರೆಸ್‌ನಲ್ಲಿ 70 ಮಂದಿ ನೂತನ ಶಾಸಕರಿದ್ದು ಮತದಾನದ ವೇಳೆ ಗೊಂದಲ ಆಗದಂತೆ ಹೋಟೆಲ್‌ನಲ್ಲಿ ಅಣಕು ಮತ ದಾನ ವ್ಯವಸ್ಥೆ ಮಾಡಲಾಗಿತ್ತು. ಈ ದೇಳೆ ಪ್ರತಿಯೊಬ್ಬರಿಗೂ ತರಬೇತಿ ನೀಡಲಾಗಿದೆ. ಜತೆಗೆ ಚುನಾವಣಾಧಿಕಾರಿ ನೀಡುವ ನೇರಳೆ ಸೈಜ್ ವೆನ್ ಹಾಗೂ ಮತಪತ್ರ ಮಾತ್ರ ಬಳಸಬೇಕು. ಮೊದಲ ಪ್ರಾಶಸ್ತ್ರವಾಗಿ ಆಯ್ಕೆ ಮಾಡುವ ಅಭ್ಯರ್ಥಿಯ ಹೆಸರಿನ ಎದುರು ಒದಗಿಸಿರುವ ಪ್ರಾಶಸ್ಯ ಕ್ರಮದ ಕಾಲಂನಲ್ಲಿ '1' ಎಂಬ ಅಂಕಿಯನ್ನು ಬರೆಯುವ ಮೂಲಕ ಮತ ನೀಡಬೇಕು. ನಂತರದ ಪ್ರಾಶಸ್ತ್ರ ಗಳನ್ನೂ ಸಂಖ್ಯೆಯಲ್ಲೇ ಬರೆಯಬೇಕು. ಯಾವುದೇ ಕಾರಣಕ್ಕೂ ಅಕ್ಷರಗಳ ರೂಪದಲ್ಲಿ ಬರೆಯಬಾರದು. ಮತಪತ್ರದಲ್ಲಿ ಮತದಾರರು ತಮ್ಮ ಹೆಸರು ಬರೆಯ ಬಾರದು. ಯಾವುದೇ ಪದ, ಸಹಿ ಹಾಕಬಾರದು. ಹೆಬ್ಬೆಟ್ಟು ಗುರುತು ಹಾಕಬಾರದು. ಬ್ಯಾಲೆಟ್ ವ್ಯವಸ್ಥೆಯ ಕಾರಣ ಶಾಸಕರು ತಮ್ಮ ಪ್ರಾಶಸ್ತ್ರ ಮತ ಚಲಾಯಿಸಿದ ನಂತರ ಅಧಿಕೃತ ಏಜೆಂಟ್‌ರಿಗಷ್ಟೇ ತೋರಿಸಬೇಕು ಎಂಬಿತ್ಯಾದಿ ಮಾಹಿತಿ ಶಾಸಕರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿದೆ. 

ಮತದಾನ ತರಬೇತಿ: 

ಹೋಟೆಲ್‌ನಲ್ಲಿ ನಮ್ಮ ಶಾಸಕ ರಿಗೆ ರಾಜ್ಯ ಸಭೆ ಚುನಾವಣೆ ಮತದಾನದ ತರಬೇತಿ ಹಾಗೂ ಅಣಕು ಮತದಾನ ಮಾಡಿಸಲಾಗುತ್ತಿದೆ ಎಂದು ಸೋಮವಾರ ಸಂಜೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಹಿಲ್ಸನ್ ಹೋಟೆಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳವಾರ ಹೋಟೆಲ್‌ನಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿ ಶಾಸಕರು ಮತದಾನ ಮಾಡಲಿದ್ದಾರೆ ಎಂದರು.

Latest Videos
Follow Us:
Download App:
  • android
  • ios