Asianet Suvarna News Asianet Suvarna News

ಬಿಜೆಪಿ ಸರ್ಕಾರದಿಂದ ದೇವಸ್ಥಾನ ಕೇಸರೀಕರಣ ಮಾಡುವ ಹುನ್ನಾರ: ಪರಮೇಶ್ವರ ನಾಯ್ಕ

*   ರೈತರ, ನಾಗರಿಕ ಸಮಾಜದ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿ ಇಲ್ಲ
*   ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇದ್ದರೂ ಮೇಕೆದಾಟು ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ
*   ಅತಿಥಿ ಶಿಕ್ಷಕರ ಸಮಸ್ಯೆ ಕುರಿತು ಸದನದಲ್ಲೇ ಧರಣಿ ಮಾಡಿದ ಕಾಂಗ್ರೆಸ್‌ 
 

Congress MLA PT Parameshwar Naik Slams on BJP Government grg
Author
Bengaluru, First Published Jan 3, 2022, 8:33 AM IST

ಹೂವಿನಹಡಗಲಿ(ಡಿ.03):  ಮುಜರಾಯಿ ಇಲಾಖೆಯ ಅಧೀನದಲ್ಲಿದ್ದ ದೇವಸ್ಥಾನಗಳನ್ನು(Temples) ಸರ್ಕಾರದಿಂದ ಮುಕ್ತ ಮಾಡಿ ಸಂಪೂರ್ಣ ಕೇಸರೀಕರಣ ಮಾಡುವ ಹುನ್ನಾರ ನಡೆದಿದೆ ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ(PT Parameshwar Naik) ಆರೋಪಿಸಿದರು. ತಾಲೂಕಿನ ಕತ್ತೆಬೆನ್ನೂರು ಗ್ರಾಮದ ಬಿಸಿಎಂ ನೂತನ ವಸತಿ ನಿಲಯ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರದ(Government of Karnataka) ಅಧೀನದಲ್ಲಿದ್ದ ದೇವಸ್ಥಾನಗಳನ್ನು ಮುಕ್ತ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪರೋಕ್ಷವಾಗಿ ಆರ್‌ಎಸ್‌ಎಸ್‌(RSS) ಮತ್ತು ಬಿಜೆಪಿ ಕಾರ್ಯಕರ್ತರ(BJP Activists) ಹಿಡಿತಕ್ಕೆ ಒಪ್ಪಿಸಲು ಹೊರಟಿದ್ದಾರೆ ಎಂದು ದೂರಿದರು.

ಬಳ್ಳಾರಿ, ವಿಜಯನಗರದಲ್ಲಿ ಕಾಂಗ್ರೆಸ್ ಮೇಲುಗೈ, ಆನಂದ್‌ ಸಿಂಗ್‌ಗೆ ಭಾರಿ ಮುಖಭಂಗ

ಈ ಹಿಂದೆ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಎಲ್ಲ ಜಾತಿ ಧರ್ಮದ ಜನಾಂಗದವರು ಹಾಗೂ ಆಯಾ ಗ್ರಾಮಗಳ ದೇವಸ್ಥಾನಗಳಲ್ಲಿ ಸಮಿತಿ ರಚಿಸಿಕೊಂಡು ದಾಸೋಹ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪೂಜೆ ಅಭಿಷೇಕ ಮಾಡಲಾಗುತ್ತಿತ್ತು. ಆ ವ್ಯವಸ್ಥೆಯನ್ನು ಬದಲಾವಣೆ ಮಾಡಿ ಕೇಸರೀಕರಣ ಮಾಡುವ ಉದ್ದೇಶ ಹೊಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಹೇಳಿಕೆಗಳು ಮುಖ್ಯಮಂತ್ರಿಗಳಿಗೆ ಶೋಭೆ ತರುವಂತದಲ್ಲ ಎಂದರು.

ರಾಜ್ಯದ(Karnataka) ಮೇಕೆದಾಟು ಯೋಜನೆಯು(Mekedatu Project) ರಾಜ್ಯದ ನಾಲ್ಕೈದು ಜಿಲ್ಲೆಗಳು ಸೇರಿದಂತೆ ಬೆಂಗಳೂರು(Bengaluru) ಮಹಾ ನಗರಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆಯಾಗಿದೆ. ಈ ಹಿಂದೆ ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿಗಳಿದ್ದಾಗ ಡಿಪಿಆರ್‌(DPR) ರಚನೆ ಮಾಡಲಾಗಿತು ಎಂದು ಹೇಳಿದರು.

ರೈತರ(Farmers), ನಾಗರಿಕ ಸಮಾಜದ ಬಗ್ಗೆ ಬಿಜೆಪಿ ಸರ್ಕಾರಕ್ಕೆ(BJP Government) ಕಾಳಜಿ ಇಲ್ಲ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇದ್ದರೂ ಆ ಮೇಕೆದಾಟು ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ, ಇಂತಹ ಯೋಜನೆಗಳಲ್ಲಿಯೂ ರಾಜಕಾರಣ(Politics) ಮಾಡುತ್ತಿರುವುದು ಸರಿಯಲ್ಲ ಎಂದರು.

ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅದರಲ್ಲಿ ಕಲ್ಯಾಣ ಕರ್ನಾಟಕ(Kalyana Karnataka) ಭಾಗದಲ್ಲೇ 25 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಿಕ್ಷಕರ ನೇಮಕಾತಿ(Teacher Recruitment) ವಿಚಾರದಲ್ಲಿ ಸರ್ಕಾರ ಹೊಸ ರೀತಿಯಾಗಿರುವ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಅತಿಥಿ ಶಿಕ್ಷಕರ ಸಮಸ್ಯೆ ಕುರಿತು ಕಾಂಗ್ರೆಸ್‌(Congress) ಸದನದಲ್ಲೇ ಧರಣಿ ಮಾಡಿದೆ. ಅವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಗೆ(Untimely Rain)  ರೈತರು ಲಕ್ಷಾಂತರ ಮೌಲ್ಯದ ಬೆಳೆ ಕಳೆದುಕೊಂಡು ಆತಂಕದಲ್ಲಿದ್ದಾರೆ. ಅವರಿಗೆ ಈ ವರೆಗೂ ಪರಿಹಾರ(compensation) ನೀಡುತ್ತಿಲ್ಲ. ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಸರ್ಕಾರ ನುಣುಚಿಕೊಳ್ಳುವ ಕೆಲಸದಲ್ಲಿ ತೊಡಗಿದೆ. ಮನೆಗಳನ್ನು ಕಳೆದುಕೊಂಡಿರುವ ಬಡ ಕುಟುಂಬಗಳು ವಾಸ ಮಾಡಲು ಪರದಾಡುತ್ತಿವೆ. ಸರ್ಕಾರ ಬಿದ್ದ ಮನೆಗಳನ್ನು ಎ.ಬಿ.ಸಿ ಎಂದು ವರ್ಗಾಯಿಸಿದೆ. ಅವರಿಗೆ ಪರಿಹಾರ ನೀಡದೇ ಬರಿ ಕಣ್ಣು ಒರೆಸುವ ತಂತ್ರ ಮಾಡುತ್ತಿದೆ ಎಂದು ದೂರಿದರು.

Local Body Election: ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸುವೆ: ಆನಂದ್‌ ಸಿಂಗ್‌

ಈ ಹಿಂದೆ ಮಂಜೂರಾಗಿರುವ ಬಡವರ ಮನೆಗಳ ನಿರ್ಮಾಣಕ್ಕೆ ಸರಿಯಾಗಿ ಜಿಪಿಎಸ್‌(GPS) ಸಹ ಆಗಿಲ್ಲ, ಮನೆ ಮಾಲೀಕರಿಗೆ ಈ ವರೆಗೂ ಸರ್ಕಾರ ಅನುದಾನ ನೀಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ. ಪರಮೇಶ್ವರಪ್ಪ, ಅಟವಾಳಗಿ ಕೊಟ್ರೇಶ, ಅರವಳ್ಳಿ ವೀರಣ್ಣ, ಶಾನಭೋಗರ ಸುಧಾಕರ, ಎಸ್‌.ಎಸ್‌. ಗುತ್ತಲ ಸೇರಿದಂತೆ ಇತರರಿದ್ದರು.

ಚಪ್ಪಲಿ ಹಿಡಿದು ಶಾಸಕ, ಮಾಜಿ ಶಾಸಕರ ಜಟಾಪಟಿ: ಇವರೇನಾ ನಮ್ಮ ಜನಪ್ರತಿನಿಧಿಗಳು?

ಹಗರಿಬೊಮ್ಮನಹಳ್ಳಿ ಪುರಸಭೆ(Hagaribommanahalli Municipality) ಮತದಾನದ ವೇಳೆ ನಿಯಮ ಮೀರಿ ಮತಗಟ್ಟೆ ಪ್ರವೇಶಿಸಿದ್ದ ಘಟನೆಗೆ ಸಂಬಂಧಿಸಿ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧ ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಲಿ ಶಾಸಕ ಭೀಮಾ ನಾಯ್ಕ(Bhima Naik) ಮತ್ತು ಮಾಜಿ ಶಾಸಕ ನೇಮಿರಾಜ ನಾಯ್ಕ(Nemiraj Naik) ಸೇರಿದಂತೆ ಬೆಂಬಲಿಗರ ವಿರುದ್ಧ ದೂರು(Complaint) ದಾಖಲಾಗಿದೆ. ಪುರಸಭೆ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ಗಲಾಟೆ ವಾಗ್ವಾದ ನಡೆದಿತ್ತು. ಬೆಂಬಲಿಗರಷ್ಟೇ ಅಲ್ಲದೇ ಸ್ವತಃ ಹಾಲಿ, ಮಾಜಿ ಶಾಸಕರು ಮತಗಟ್ಟೆಗೆ ಬಂದಿದ್ದರು. ಪರಸ್ಪರ ನಿಂದನೆ ಮಾಡಿಕೊಳ್ಳುವ ಮೂಲಕ ಬೆಂಬಲಿಗರ ಜತೆಗೆ ನೇರ ಕಾದಾಟಕ್ಕೆ ಇಳಿದಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಇಬ್ಬರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ(Violation of Code of Conduct) ಪ್ರಕರಣ ದಾಖಲಿಸಿದ್ದರು.
 

Follow Us:
Download App:
  • android
  • ios