ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬಿಟ್ ಕಾಯಿನ್: ಸಿಎಂ ಬೊಮ್ಮಾಯಿಗೆ ಪ್ರಿಯಾಂಕ್ 5 ಪ್ರಶ್ನೆ
* ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬಿಟ್ ಕಾಯಿನ್ ಹಗರಣ
* ಸಿಎಂ ಬಸವರಾಜ ಬೊಮ್ಮಾಯಿ ಬೊಮ್ಮಾಯಿಗೆ 5 ಪ್ರಶ್ನೆ
* 5 ಪ್ರಶ್ನೆ ಹಾಕಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ
ಬೆಂಗಳೂರು, (ನ.12): ಬಿಟ್ ಕಾಯಿನ್ ಹಗರಣ (Bitcoin Scam) ರಾಜ್ಯದಲ್ಲಿ ಭಾರೀ ಸುದ್ದು ಮಾಡುತ್ತಿದ್ದು, ರಾಜಕಾರಣದಲ್ಲಿ (Politics) ಸಂಚಲನ ಮೂಡಿಸಿದೆ. ಈ ಹರಣಗಳಲ್ಲಿ ಪ್ರಭಾವಿ ರಾಜಕಾರಣಿಗಳು ಇದ್ದಾರೆ ಎನ್ನುವ ಮಾಹಿತಿ ಇದ್ದು, ಈ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ.
"
ಇದರ ಮಧ್ಯೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಾಯಕರುಗಳ (BJP Leaders) ನಡುವೆ ಆರೋಪ-ಪ್ರತ್ಯಾರೋಪಗಳು ಸಹ ಜೋರಾಗಿವೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪ್ರಿಯಾಂಕ್ ಖರ್ಗೆ(Priyank Kharge), ಸಿಎಂ ಬಸವರಾಜ್ ಬೊಮ್ಮಾಯಿಗೆ (Basavaraj Bommai) 5 ಪ್ರಶ್ನೆಗಳನ್ನ (Five Questions) ಕೇಳಿದ್ದಾರೆ.
BitCoin Sacam : ತಪ್ಪೊಪ್ಪಿಗೆ ಹೇಳಿಕೆ ನೀಡಿದ ಶ್ರೀಕಿ, ಯಾರ ಬುಡಕ್ಕೆ ಬೆಂಕಿ..?
ಬಿಟ್ ಕಾಯಿನ್ ಕೇಸ್ ಅಷ್ಟು ಮುಖ್ಯವಲ್ಲ ಎಂದು ಸಿಎಂ ಹೇಳುತ್ತಾರೆ. ಹಾಗಾದ್ರೆ ಪ್ರಧಾನಿ ಮೋದಿ ಬಳಿ ಹೋಗಿ ಏಕೆ ಚರ್ಚಿಸಿದ್ರು ಎಂದು ಬೊಮ್ಮಾಯಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಬಿಟ್ ಕಾಯಿನ್ ಪ್ರಕರಣ ದೊಡ್ಡ ಹಗರಣ. ನವೆಂಬರ್ 14 ರಂದು ಶ್ರೀಕಿ ಸರಂಡರ್ ಆಗ್ತಾರೆ. ಬಳಿಕ 3 ದಿನ ಕೇಸ್ ಕುರಿತು ಯಾವುದೇ ರಿಪೋರ್ಟ್ ಆಗಲ್ಲ. ನವೆಂಬರ್ 17 ರಂದು ಕೇಸ್ ದಾಖಲಾಗುತ್ತೆ. ಬಳಿಕ 14 ದಿನ ಪೊಲೀಸ್ ಕಸ್ಟಡಿಗೆ ಪಡೆಯುತ್ತಾರೆ ಎಂದರು.
ಇನ್ನು, ಸರ್ಕಾರಕ್ಕೆ ಐದು ಪ್ರಶ್ನೆ ಕೇಳಿದ ಪ್ರಿಯಾಂಕ್ ಖರ್ಗೆ ಕೆಂಡಕಾರಿದರು. ಸರ್ಕಾರ ನಮ್ಮನ್ನು ಬ್ಲ್ಯಾಕ್ಮೇಲ್ ಮಾಡೋದು ಬೇಡ. ಕಾಂಗ್ರೆಸ್ಸಿಗರು ಯಾರೇ ಭಾಗಿಯಾಗಿದ್ದರೂ ಒದ್ದು ಒಳಹಾಕಿ. ಬಿಟ್ ಕಾಯಿನ್ ಕೇಸ್ ಡೈವರ್ಟ್ ಮಾಡಲು ಕಾಂಗ್ರೆಸ್ ನಾಯಕರು ಇದ್ದಾರೆ ಎಂದು ಆರೋಪ ಮಾಡುತ್ತಿದ್ದೀರಿ ಯಾಕೆ ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಕೇಳಿದ ಐದು ಪ್ರಶ್ನೆಗಳು
1. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಶ್ರೀಕಿಗೆ ಡ್ರಗ್ಸ್ ಕೊಡಲಾಗಿತ್ತಾ?
2. 186 ಬಿಟ್ ಕಾಯಿನ್ ಮೊತ್ತ ₹100 ಕೋಟಿ, ಇದೆಲ್ಲೋಯ್ತು?
3. ಶ್ರೀಕಿ ಹ್ಯಾಕ್ ಮಾಡಿದ್ದ 5 ಸಾವಿರ ಕಾಯಿನ್ ಎಲ್ಲೋಯ್ತು?
4. 80 ಸಾವಿರ ಯೂರೋ ಟ್ರಾನ್ಸಫರ್ ಮಾಡಿದ್ರೂ ತನಿಖೆ ಯಾಕಿಲ್ಲ?
5. ಇ.ಡಿ, ಇಂಟರ್ ಪೋಲ್ಗೆ ಮಾಹಿತಿ ನೀಡಲು ವಿಳಂಬವೇಕೆ?
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮೂಲಕ ಹಲವು ಆರೋಪಗಳನ್ನು ಮಾಡಿದೆ. ‘ದಲಿತ ವಿರೋಧಿ ಸಿದ್ದರಾಮಯ್ಯ ಈಗ ಹಿಟ್ ಅಂಡ್ ರನ್ ರಾಜಕೀಯ ಆರಂಭಿಸಿದ್ದಾರೆ’ ಎಂದು ಬಿಜೆಪಿ ದೂರಿದೆ. ದಲಿತ ವಿರೋಧಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಆ ಆಕ್ರೋಶದ ಬೆಂಕಿಯಿಂದ ಪಾರಾಗಲು ಬಿಟ್ಕಾಯಿನ್ ವಿಚಾರ ತೇಲಿ ಬಿಟ್ಟಿದ್ದಾರೆ. ಈ ದಲಿತ ವಿರೋಧಿಗೆ ತಕ್ಕ ಪಾಠ ಕಲಿಸಲು ಈಗ ಕಾಲ ಪಕ್ವವಾಗಿದೆ. ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆಂದು ಆರೋಪಿಸುವ ಸಿದ್ದರಾಮಯ್ಯ ಅವರೇ ದಾಖಲೆ ಬಿಡುಗಡೆ ಮಾಡಲು ಭಯವೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.
ಬಿಟ್ಕಾಯಿನ್ ಹಗರಣದ ಬೇರುಗಳು ನಿಮ್ಮ ನಾಯಕರ ಬುಡ ಸುತ್ತಿಕೊಳ್ಳಬಹುದೆಂಬ ಭಯವೇ? ಆರೋಪಿ ಶ್ರೀಕಿ ಕಾಂಗ್ರೆಸ್ ನಾಯಕರ ಪುತ್ರರತ್ನರ ಜೊತೆಗಲ್ಲವೇ ಸಂಪರ್ಕ ಹೊಂದಿರುವುದು ಎಂದು ಬಿಜೆಪಿ ಸಿದ್ದರಾಮಯ್ಯ ಅವರ ಕಾಲೆಳೆದಿದೆ.
ಬಿಟ್ಕಾಯಿನ್ ವಿಚಾರದಲ್ಲಿ ಈಗಾಗಲೇ ತನಿಖೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸ್ಪಷ್ಟನೆ ನೀಡಲಾಗಿದೆ. ಆದರೆ ಕಾಂಗ್ರೆಸ್ ನಾಯಕರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಸೂಕ್ತ ದಾಖಲೆಗಳಿದ್ದರೆ ಮಂಡಿಸಿ ಎಂದು ಈಗಾಗಲೇ ಹೇಳಿದ್ದೇನೆ. ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ ಎಂದು ಈಗಾಗಲೇ ಹೇಳಿದ್ದೇನೆ. ಕಾಂಗ್ರೆಸ್ ನಾಯಕರ ಕಪೋಲಕಲ್ಪಿತ ಆರೋಪಗಳಿಗೆ ಮತ್ತೆ ಮತ್ತೆ ಉತ್ತರಿಸುವ ಅಗತ್ಯವಿಲ್ಲ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನೂ ಬಿಜೆಪಿ ತನ್ನ ಟ್ವೀಟ್ನಲ್ಲಿ ತಿಳಿಸಿದೆ.