Karnataka Politics: ನನಗೆ ಥೂ... ಥೂ... ಅಂತಾರೆ. ನಾನೇನು ಮಾಡಿದ್ದೇನೆ?: ಲಕ್ಷ್ಮೀ ಹೆಬ್ಬಾಳ್ಕರ್
* ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ
* ನಾನು ಬಸವ ತತ್ವ ಪಾಲಕ, ಜಾತಿವಾದ ಮಾಡಿಲ್ಲ: ರಮೇಶ್
* ಹೆಬ್ಬಾಳ್ಕರ್‌ಗೆ ಟಾಂಗ್ ನೀಡಿದ ರಮೇಶ್ ಜಾರಕಿಹೊಳಿ
ಬೆಳಗಾವಿ(ನ.28): ‘ನನಗೆ ಥೂ... ಥೂ... ಎನ್ನುತ್ತಾರೆ. ನಾನೇನು ಮಾಡಿದ್ದೇನೆ? ಲಿಂಗಾಯತ ಸಮುದಾಯದಲ್ಲಿ ಹುಟ್ಟಿರುವ ಒಬ್ಬ ಹೆಣ್ಣು ಮಗಳು ನಾನು. ಇಡೀ ಸ್ತ್ರೀ ಕುಲಕ್ಕೆ ಅವರು ಮಾಡಿದ ಅವಮಾನವಿದು.’
ಇದು ತನ್ನ ವಿರುದ್ಧ ಥೂ ಥೂ ಅಂದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ(Ramesh Jarkiholi) ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಮಾಡಿರುವ ವಾಗ್ದಾಳಿ. ಕಾಂಗ್ರೆಸ್(Congress) ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರವಾಗಿ ನಗರದಲ್ಲಿ ಶನಿವಾರ ಪ್ರಚಾರ(Campaign) ಸಭೆಯಲ್ಲಿ ಮಾತನಾಡಿದ ಅವರು ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ(Satish Jarkiholi) ಅವರ ಎದುರು ಸತೀಶ್ ಅವರನ್ನು ಹೊಗಳಿ ರಮೇಶ್ ಅವರನ್ನು ತೆಗಳಿದರು. ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸುವುದೇ ನಮ್ಮ ಗುರಿ ಎನ್ನುತ್ತಾರೆ. ಯಾಕೆ ನಮ್ಮ ಪಕ್ಷದಲ್ಲಿ ನಾನು ಬೆಳೆಯಬಾರದಾ? ನೀವು ನಿಮ್ಮ ಪಕ್ಷದಲ್ಲಿ ಬೆಳೆದುಕೊಳ್ಳಿ. ಏನೂ ಮಾಡಿದ್ದೇನು ನಾನು? ಎಂದು ಪ್ರಶ್ನಿಸಿದರು.
ಕೈ ಕಾರ್ಯಕರ್ತರಲ್ಲಿ ಭಯ ಸೃಷ್ಟಿಗೆ ಐಟಿ ದಾಳಿ: ಹೆಬ್ಬಾಳಕರ್
ನಾನು ಬಸವ ತತ್ವ ಪಾಲಕ, ಜಾತಿವಾದ ಮಾಡಿಲ್ಲ: ರಮೇಶ್
ಬೆಳಗಾವಿ(Belagavi): ನನಗೆ ಪಕ್ಷದ ಗೆಲುವೇ ಮುಖ್ಯ, ಪಕ್ಷದ ವಿಚಾರ ಬಂದಾಗ ನಾನೆಂದಿಗೂ ಕುಟುಂಬ ನೋಡಿಲ್ಲ. ನಾನೂ ಬಸವ ತತ್ವದ(Basava Principle) ಪರಿಪಾಲಕನಾಗಿದ್ದೇನೆ. ನಾನೆಂದಿಗೂ ಜಾತಿವಾದ(Casteism) ಮಾಡಿದವನಲ್ಲ. ಕೆಲವರು ಸೋಲಿನ ಭಯದಿಂದ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರಗೆ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ತಿರುಗೇಟು ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಶನಿವಾರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದ ಅವರು, ನಾವು ಯಾವುದೇ ಜಾತಿ(Caste) ಆಧಾರಿತವಾಗಿಲ್ಲ. ನಮ್ಮದು ಮಾನವ ಜಾತಿ. ನಾವು ಬಸವಣ್ಣನವರ(Basavanna) ತತ್ವ ಸಿದ್ಧಾಂತದ ಮೇಲೆ ಹೋಗುವಂತವರು ಎಂದರು. ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ನನ್ನ ಸ್ವಂತ ತಮ್ಮ ಸತೀಶ ಜಾರಕಿಹೊಳಿ ಅವರನ್ನು ಸೋಲಿಸಿ, ಲಿಂಗಾಯತ(Lingayat) ಸಮುದಾಯದ ಬಿಜೆಪಿ(BJP) ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿದ್ದು ನಾನೇ. ಇನ್ನು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ(Mahantesh Kavatagimatha) ಅವರನ್ನು ಗೆಲ್ಲಿಸುವುದು, ಕಾಂಗ್ರೆಸ್ ಪಕ್ಷವನ್ನು ಸೋಲೀಸುವದೇ ನನ್ನ ಗುರಿ. ಆದರೆ, ಸದ್ಯ ಇರುವ ಲಿಂಗಾಯತ ನಾಯಕಿಯ ಬಗ್ಗೆ ನಾನು ವೈಯಕ್ತಿಕವಾಗಿ ಮಾತನಾಡಲ್ಲ ಎಂದು ಪರೋಕ್ಷವಾಗಿ ಹೆಬ್ಬಾಳ್ಕರ್‌ಗೆ ಟಾಂಗ್ ನೀಡಿದ್ದಾರೆ.
MLC Election: ನಾಮಪತ್ರ ಹಿಂದೆ ಪಡೆಯದೆ ಬಿಜೆಪಿ, ಕೈಗೆ ಲಖನ್ ಶಾಕ್
ಟಿಕೆಟ್ ಕೈತಪ್ಪಿದ್ದಕ್ಕೆ ನನಗೆ ಬೇಸರವಿಲ್ಲ: ಎಸ್‌ಆರ್‌ಪಿ
ಕಾಂಗ್ರೆಸ್ ಪಕ್ಷ ಎಂದರೆ ನನಗೆ ತಾ(Mother) ಸಮಾನ. ಪಕ್ಷದ ನಿರ್ಣಯವನ್ನು ನಾನು ಪ್ರೀತಿಯಿಂದ ಸ್ವೀಕರಿಸಿ ಗೌರವಿಸುತ್ತೇನೆ. ವಿಧಾನಪರಿಷತ್ ಚುನಾವಣೆ(Vidhan Parishat Election) ಟಿಕೆಟ್ ಕೈ ತಪ್ಪಿರುವ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್. ಪಾಟೀಲ್(SR Patil) ಹೇಳಿದ್ದಾರೆ.
ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ 45 ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಮಾಡಿಕೊಂಡು ಬಂದಿದ್ದೇನೆ. ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ. ಈ ನಿರ್ಧಾರದಿಂದ ಅಸಮಾಧಾನ ಉಂಟಾಗುವ ಪ್ರಶ್ನೆಯೇ ಇಲ್ಲ. ನಮ್ಮ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಗೆ ಬೇಸರ ಉಂಟಾಗಿತ್ತು ಸತ್ಯ. ಆದರೆ ಅವರಿಗೂ ನಾನು ಸಮಾಧಾನ ಹೇಳಿದ್ದೇನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ತಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ಎಸ್.ಆರ್. ಪಾಟೀಲ್ ಅವರೇ ಸ್ಪಷ್ಟಪಡಿಸಿದ್ದಾರೆ. ಕೆಲವೊಮ್ಮೆ ಇಂತಹ ನಿರ್ಧಾರಗಳು ಆಗುತ್ತವೆ. ಪಕ್ಷವು ದೂರದೃಷ್ಟಿಯ ಯೋಚನೆಯಿಂದ ಅವರಿಗೆ ಈಗ ಅವಕಾಶ ನೀಡಿಲ್ಲ. ಮುಂದಿನ ನಡೆಗಳ ಕುರಿತು ಈಗಾಗಲೇ ಹೈಕಮಾಂಡ್ ಅವರೊಂದಿಗೆ ಚರ್ಚಿಸಿದೆ ಎಂದು ಸ್ಪಷ್ಟಪಡಿಸಿದರು.