Asianet Suvarna News Asianet Suvarna News

ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಶುರು: ದಿಲ್ಲಿಯಿಂದ ದಿನೇಶ್ ಗುಂಡೂರಾವ್ ಮಾಹಿತಿ

* ದೆಹಲಿಯಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆ
* ಎಲ್ಲಾ ರಾಜ್ಯಗಳ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಾಧ್ಯಕ್ಷರ ಸಭೆ
* ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್​ 

Congress membership campaign From November 1st Says dinesh gundurao rbj
Author
Bengaluru, First Published Oct 26, 2021, 10:16 PM IST

ನವದೆಹಲಿ, (ಅ.26): ಮುಂದಿನ ತಿಂಗಳು (ನವೆಂಬರ್ 1) ರಿಂದ ಮಾರ್ಚ್ ಅಂತ್ಯದವರೆಗೂ ಕಾಂಗ್ರೆಸ್ ಸದಸ್ಯತ್ವ ಅಭಿಯಾನ (Congress Membership Campaign) ನಡೆಯಲಿದೆ. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸದಸ್ಯತ್ವ ಮಾಡಿಸಲು ನಿರ್ಧಾರ ಮಾಡಲಾಗಿದೆ ಎಂದು  ದಿನೇಶ್ ಗುಂಡೂರಾವ್​ ಹೇಳಿಕೆ ನೀಡಿದ್ದಾರೆ. 

ಇಂದು (ಅಕ್ಟೋಬರ್ 26) ದೆಹಲಿಯಲ್ಲಿ (New Delhi) ಪಿಸಿಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ (Dinesh Gundu Rao, ಸಾಮಾನ್ಯ ಕಾರ್ಯಕರ್ತರನ್ನು ಭೇಟಿಯಾಗಿ ಸದಸ್ಯತ್ವ ನೀಡುತ್ತೇವೆ. ಆಂತರಿಕ ಚುನಾವಣೆಗೆ ಸದಸ್ಯತ್ವದ ಪ್ರಾಮುಖ್ಯತೆ ಬಗ್ಗೆ ಚರ್ಚೆ ಮಾಡಲಾಗಿದೆ. ಜನಜಾಗೃತಿ ಮೂಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿಸಿದರು.

ವಿಷ ಬೀಜ ಬಿತ್ತುವ ಕಾರ್ಯಕ್ರಮ ತಂದಿದ್ದೇ ಸಿದ್ದರಾಮಯ್ಯ: ಸಿಟಿ ರವಿ ವಾಗ್ದಾಳಿ

ಬಿಜೆಪಿ ಸರ್ಕಾರದ ವೈಫಲ್ಯ, ಕೋಮುವಾದ, ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತದ್ದಾಗಿದೆ. ಇಂತಹ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ. ಬಿಜೆಪಿ ವಿರುದ್ಧ ಹೋರಾಟ ರೂಪಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಒಗ್ಗಟ್ಟಿನಿಂದ ದೇಶ ಉಳಿಸುವ ಕಾರ್ಯದಲ್ಲಿ ಶಿಸ್ತಿನಿಂದ ಇರಬೇಕು. ಈ ಬಗ್ಗೆ ಸಭೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ. ಕರ್ನಾಟಕ ರಾಜ್ಯದ ಬಗ್ಗೆ ಪ್ರತ್ಯೇಕ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದು ಬಿಜೆಪಿ ಟ್ರೋಲ್​ ಮಾಡಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಲಿಂಗಾಯತರನ್ನು ಬಿಜೆಪಿ ವೋಟ್​ ಬ್ಯಾಂಕ್ ಅಂದುಕೊಂಡಿದೆ. ವೋಟ್​ ಬ್ಯಾಂಕ್ ಉಳಿಸಿಕೊಳ್ಳಲು ಬಿಜೆಪಿಯವರು ಏನ್​ ಬೇಕಾದರೂ ಮಾಡಲು ಸಿದ್ಧವಾಗಿದ್ದಾರೆ ಎಂದು​ ಆರೋಪಿಸಿದರು.

ಎಲ್ಲಾ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಆದೇಶಿಸಿದ್ದರು. ಸಿದ್ದರಾಮಯ್ಯನವರು ಅನುಭವ ಮಂಟಪ ನಿರ್ಮಿಸಿದ್ದರು. ಆದರೆ ಈಗ ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಟ್ರೋಲ್ ಮಾಡ್ತಿದ್ದಾರೆ ಕಿಡಿಕಾರಿದರು,

ಸಿಂದಗಿ, ಹಾನಗಲ್ 2 ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಜೆಡಿಎಸ್​ ಟಿಕೆಟ್​ ನೀಡಿದ್ದಾರೆ. ಜೆಡಿಎಸ್​ಗೆ ಬದ್ಧತೆ ಇಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆಯಿಲ್ಲ. ರಾಜ್ಯದಲ್ಲಿ ಸ್ಥಿರ ಸರ್ಕಾರ ಬರುವುದು ಜೆಡಿಎಸ್​ಗೆ ಇಷ್ಟವಿಲ್ಲ. ರಾಜದಲ್ಲಿ ಅತಂತ್ರ ಸರ್ಕಾರ ಬರಬೇಕು ಎನ್ನುವುದು ಜೆಡಿಎಸ್ ಉದ್ದೇಶ. ಇದು ಸಾಮಾನ್ಯ ಜನರಿಗೆ ಗೊತ್ತಿದೆ. ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಯಾಕೆ ಎಂದೂ ಗೊತ್ತಿದೆ ಎಂದರು.
 

Follow Us:
Download App:
  • android
  • ios