ಕೆಪಿಸಿಸಿ ಕಚೇರಿಯಲ್ಲಿ ಸ್ಟೀನಿಂಗ್ ಕಮಿಟಿ ಅಧ್ಯಕ್ಷ ಹರೀಶ್ ಚೌದರಿ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಮಿಟಿಯ ಇನ್ನಿತರೆ ಸದಸ್ಯರು ಭಾಗವಹಿಸಲಿದ್ದಾರೆ.
ಬೆಂಗಳೂರು(ಫೆ.14): ಮುಂಬರುವ ಲೋಕಸಭೆ ಹಾಗೂ ರಾಜ್ಯಸಭೆ ಚುನಾವಣೆಗೆ ರಾಜ್ಯದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಕಾಂಗ್ರೆಸ್ ಪಕ್ಷದ ಸೀನಿಂಗ್ ಕಮಿಟಿ ಸಭೆ ಬುಧವಾರ ನಗರದಲ್ಲಿ ನಡೆಯಲಿದೆ. ನಗರದ ಕ್ಲೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸ್ಟೀನಿಂಗ್ ಕಮಿಟಿ ಅಧ್ಯಕ್ಷ ಹರೀಶ್ ಚೌದರಿ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಮಿಟಿಯ ಇನ್ನಿತರೆ ಸದಸ್ಯರು ಭಾಗವಹಿಸಲಿದ್ದಾರೆ.
ಸ್ಟೀನಿಂಗ್ ಕಮಿಟಿ ಸಭೆ ಹಿನ್ನೆಲೆಯಲ್ಲಿ ಈಗಾಗಲೇ ಸುರ್ಜೇವಾಲ ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದು, ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಹರೀಶ್ ಚೌದರಿ ಅವರು ಬುಧವಾರ ಬೆಳಗ್ಗೆ ನಗರಕ್ಕೆ ಆಗಮಿಸಲಿದ್ದಾರೆ. ಸಭೆಯಲ್ಲಿ ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆ ಮಾಡಬೇಕಿರುವ 4 ಸದಸ್ಯ ಸ್ಥಾನಗಳಿಗೆ ಹಾಗೂ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಒಬ್ಬ ಅಥವಾ ಇಬ್ಬರು ಆಕಾಂಕ್ಷಿಗಳಿರುವ ಕ್ಷೇತ್ರಗಳಿಗೆ ಒಂದೊಂದು ಹೆಸರನ್ನು ಅಂತಿಮಗೊಳಿಸಿ ಎಐಸಿಸಿ ಮಟ್ಟದ ಸಮಿತಿಗೆ ಕಳಹಿಸುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣವಿದೆ: ಜಗದೀಶ್ ಶೆಟ್ಟರ್
ಸಿಂಗ್ವಿ ಹೆಸರು ಮುನ್ನೆಲೆಗೆ: ಈ ಸಭೆಯಲ್ಲಿ ವಿಶೇಷವಾಗಿ ರಾಜ್ಯ ಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆಮಾಡುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಕಾಂಗ್ರೆಸ್ ನಾಸಿರ್ ಹುಸೇನ್, ಎಲ್.ಹನುಮಂತಯ್ಯ ಹಾಗೂ ಜಿ.ಸಿ. ಚಂದ್ರಶೇಖರ್ ಹಾಗೂ ಬಿಜೆಪಿಯ ರಾಜೀವ್ ಚಂದ್ರಶೇಖರ್ ಅವರ ಅವಧಿ ಮುಗಿದಿದ್ದ ರಿಂದ ತೆರವಾಗುತ್ತಿರುವ 4 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ 3 ಸ್ಥಾನಗಳನ್ನು ಉಳಿಸಿಕೊಳ್ಳುವ ಅವಕಾಶ ಹೊಂದಿದೆ. ಹೀಗಾಗಿ ಅವಧಿ ಪೂರ್ಣಗೊಂಡ ಮೂವರು (ನಾಸಿರ್ ಹುಸೇನ್, ಎಲ್. ಹನುಮಂತಯ್ಯ ಹಾಗೂ ಜಿ.ಸಿ. ಚಂದ್ರಶೇಖರ್) ಅವರು ಮತ್ತೆ ಸ್ಪರ್ಧೆಗೆ ತೀವ್ರ ಲಾಬಿ ನಡೆಸಿದ್ದಾರೆ. ಆದರೆ, ಈ ಬಾರಿ ಒಂದು ಸ್ಥಾನ ಹೈಕಮಾಂಡ್ ಸೂಚಿಸಿದವರಿಗೆ ಕೊಡಬೇಕಾದ ಅನಿವಾರ್ಯ ರಾಜ್ಯ ನಾಯಕತ್ವಕ್ಕೆ ನಿರ್ಮಾಣವಾಗಿದೆ. ಮೂಲಗಳ ಪ್ರಕಾರ ರಾಜಸ್ಥಾನದ ಅಭಿಷೇಕ್ ಮನು ಸಿಂಗ್ಲಿ ಹೆಸರನ್ನು ಹೈಕಮಾಂಡ್ ರಾಜ್ಯಸಭೆಗೆ ಸೂಚಿಸುವ ಸಾಧ್ಯತೆಯಿದೆ. ಆಂಧ್ರ ಸಿಎಂ ಜಗನ್ನೋಹನ ರೆಡ್ಡಿ ಸಹೋದರಿ
ಶರ್ಮಿಳಾ ರೆಡ್ಡಿ ರೆಡ್ಡಿ (ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು) ಅವರ ಹೆಸರು ಕೇಳಿ ಬಂದಿತ್ತಾದರೂ ಅವರು ಅಂತಿಮ ವಾಗಿ ಲೋಕಸಭೆಗೆ ನೇರ ಸ್ಪರ್ಧೆ ಮಾಡಬಯಸಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಮನು ಸಿಂಗ್ಲಿ ಹೆಸರು ಪ್ರಧಾನ ವಾಗಿ ಕೇಳಿ ಬರುತ್ತಿದೆ. ಹೀಗೆ ಸಿಂಗ್ವಿ ಹೈಕಮಾಂಡ್‌ನಿಂದ ಸೂಚಿತವಾದರೆ ಆಗ ಎಲ್. ಹನುಮಂತಯ್ಯರಿಗೆ ಕೊಕ್ ಸಿಗುವ ಸಾಧ್ಯತೆಯಿದೆ. ಇನ್ನು ನಾಸಿರ್‌ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್‌ಅವರು ಲಾಬಿ ಪ್ರಬಲವಾಗಿ ಇದೆ ಯಾದರೂ, ಹಿರಿಯ ನಾಯಕ ಬಿ.ಎಲ್. ಶಂಕರ್, ಮನ್ಸೂರ್ ಅಲಿಖಾನ್ (ಮಾಜಿ ರಾಜ್ಯಸಭಾ ಅಧ್ಯಕ್ಷ ರೆಹಮಾನ್ ಖಾನ್ ಮೊಮ್ಮಗ) ಲಾಬಿ ನಡೆಸಿದ್ದಾರೆ. ಈ ಪೈಕಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಬಹು ತೇಕ ಬುಧವಾರ ನಿರ್ಧಾರವಾಗುವ ಸಾಧ್ಯತೆಯಿದೆ.
