ಕಳೆದ ಎರಡು ವಾರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಜೆಪಿ ನಡ್ಡಾ, ಸಿಎಂ ಬೊಮ್ಮಾಯಿ ಅವರ ಪ್ರಚಾರದ ಮುಂದೆ ಕಾಂಗ್ರೆಸ್‌ ನೆಲ ಕಚ್ಚಿ, ಇಲ್ಲ ಸಲ್ಲದ ಆರೋಪ ಮಾಡಿದೆ ಎಂದು ಕೇಂದ್ರ ಸಚಿವ ಬಗವಂತ ಖೂಬಾ ಹೇಳಿದರು.

ಬೀದರ್‌ (ಮೇ.8) : ಕಳೆದ ಎರಡು ವಾರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಜೆಪಿ ನಡ್ಡಾ, ಸಿಎಂ ಬೊಮ್ಮಾಯಿ ಅವರ ಪ್ರಚಾರದ ಮುಂದೆ ಕಾಂಗ್ರೆಸ್‌ ನೆಲ ಕಚ್ಚಿ, ಇಲ್ಲ ಸಲ್ಲದ ಆರೋಪ ಮಾಡಿದೆ ಎಂದು ಕೇಂದ್ರ ಸಚಿವ ಬಗವಂತ ಖೂಬಾ ಹೇಳಿದರು.

ಅವರು ಪಕ್ಷದ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲ್ಪಸಂಖ್ಯಾತರನ್ನು ಓಲೈಸಲು ಪಿಎಫ್‌ಐ, ಎಸ್‌ಡಿಪಿಐ ನಿಷೇ​ಧ ರದ್ದು ಮಾಡುತ್ತೇವೆ ಎಂದು ಹೇಳಿ ತಮ್ಮ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ(Bajrangadala ban), ಲಿಂಗಾ​ಯ​ತ​ರಿಗೆ ಭ್ರಷ್ಟಎಂದೆ​ನ್ನು​ವುದು ಹೀಗೆ ನಂತರ ಲಿಂಗಾಯತರಲ್ಲಿ ಕ್ಷಮೆ ಕೇಳುವು​ದು, ಕಾಂಗ್ರೆಸ್‌-ಜೆಡಿಎಸ್‌ನಿಂದ ಅವಹೇಳನ, ಸೋಲಿನ ಭೀತಿಯಿಂದ ಹೇಳಿಕೆ ನೀಡು​ತ್ತಿ​ರು​ವುದನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಮ್ಮ ಪಕ್ಷದ ಎಲ್ಲರ ಪ್ರವಾಸ ಯಶಸ್ವಿಯಾಗಿದೆ. ಜಿಲ್ಲೆಯ 6ಕ್ಕೆ 6 ಸ್ಥಾನಗಳಲ್ಲಿ ಒಳ್ಳೆಯ ಪ್ರಚಾರ ಆಗಿದೆ. ಹೀಗಾಗಿ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಡಬಲ್‌ ಎಂಜಿನ್‌ ಸರ್ಕಾರದಿಂದ ಬಡವರಿಗೆ ಲಾಭ: ಕೇಂದ್ರ ಸಚಿವ ಭಗವಂತ ಖೂಬಾ

ಕಾಂಗ್ರೆಸ್‌ನವರು ಸೋಮವಾರ ಮತ್ತು ಮಂಗಳವಾರ ಕೇವಲ ಹಣ ಹಂಚಿ ಗೆಲ್ಲುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಮತದಾರರ ಮೇಲೆ ಹಣದ ಪ್ರಭಾವ ಬಿರುವುದಿಲ್ಲ. ಕಾಂಗ್ರೆಸ್‌ನ ಹಣಕ್ಕೆ ತಿರಸ್ಕಾರ ಮಾಡಿ ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವದಿಸಿ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಭಾತಂಬ್ರಾ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯ​ರ್ಥಿ​ಯಿಂದ 4ಲಕ್ಷ ರು.ಗಳ ಸಾರಾ​ಯಿ:

ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮಕ್ಕೆ ಕಾಂಗ್ರೆಸ್‌ ಅಭ್ಯರ್ಥಿ 4 ಲಕ್ಷ ರು.ಗ​ಳ ಸಾರಾಯಿ ಹಂಚಿದ್ದಾರೆ. ಈ ಕುರಿತು ಪೊಲೀಸರಿಗೆ ಸೂಚಿಸಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಭಗ​ವಂತ​ ಖೂಬಾ ತಿಳಿ​ಸಿ​ದ​ರು.

ದಲಿತ ಸಂಘಟನೆಗಳ ಹೇಳಿಕೆಗೆ ಉತ್ತರಿಸಿದ ಸಚಿವ ಖೂಬಾ, 30 ವರ್ಷಗಳಿಂದ ಒಳ ಮೀಸಲಾತಿ ಕುರಿತು ಹೋರಾಟಗಳು ನಡೆಯು​ತ್ತಿದ್ದವು. ಬೊಮ್ಮಾಯಿ ಸರ್ಕಾರ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದಕ್ಕೆ ಅನೇಕ ಸಂಘಟನೆಗಳು ಸ್ವಾಗತಿಸಿವೆ. ಆದರೆ, ಈ ಕುರಿತು ಹೇಳಿಕೆ ನೀಡುವವರು ಕಾಂಗ್ರೆಸ್‌ನ ಏಜೆಂಟರಂತೆ ವರ್ತಿಸಿ ಮುಗ್ಧ ಜನರನ್ನು ದಾರಿ ತಪ್ಪಿಸಬೇಡಿ, ಕಾಂಗ್ರೆ​ಸ್‌ನ ಚಸ್ಮಾ ಕಳ​ಚಿ​ಡಿ ಎಂದು ಸಂಸದ ಖೂಬಾ ಹೇಳಿದರು.

ಮೇ 9ರಂದು ಚಳ​ಕಾ​ಪೂರ್‌ ಹನು​ಮಾನ ಮಂದಿ​ರ​ದಲ್ಲಿ ಹನು​ಮಾನ ಚಾಲೀ​ಸಾ:

ಮೇ 9ರಂದು ಭಾಲ್ಕಿ ತಾಲೂಕಿನ ಚಳಕಾಪೂರ ಗ್ರಾಮದ ಹನುಮಾನ ಮಂದಿರದಲ್ಲಿ ಹನುಮಾನ ಚಾಲಿಸಾ ಪಠಣ ಮಾಡಲಿದ್ದೇನೆ ಎಂದ ಅವರು, ಮೇ 13ರ ನಂತರ ಹನುಮಾನ ಗಧಾ ಕಾಂಗ್ರೆ​ಸ್ಸಿಗರ ಮೇಲೆ ಹೇಗೆ ಪ್ರಹಾರ ಮಾಡುತ್ತದೆ ಕಾದು ನೋಡಿ ಎಂದರು.

ಎಂಎಲ್‌ಸಿ ರಘುನಾಥರಾವ್‌ ಮಲ್ಕಾಪೂರೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳಿಂದ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಸುಮಾರು 130 ಸ್ಥಾನಗಳು ಸಿಗಲಿವೆ. ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ 23 ಸ್ಥಾನಗಳು ಸಿಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜನರು ಕಾಂಗ್ರೆಸ್‌ನ ಸುಳ್ಳು ಭರವಸೆಗಳಿಗೆ ಕಿವಿಗೊಡಬಾರದು ಎಂದು ಮಲ್ಕಾಪೂರೆ ಹೇಳಿದರು.

ಬಾಯ್ತುಂಬ ಮಾತಾಡೋ ಮೋದಿ ಬಿಜೆಪಿ ಭ್ರಷ್ಟಾಚಾರದ ವಿಷಯಕ್ಕೆ ಬಂದ್ರೆ ಮೌನ: ಸಿದ್ದು ಕಿಡಿ

ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಮಾತನಾಡಿ, ಎಲ್ಲೆಡೆ ನಮ್ಮ ಅಭ್ಯರ್ಥಿಗಳ ಪ್ರಚಾರ ಬಿರುಸಿನಿಂದ ಸಾಗಿದೆ ಹೀಗಾಗಿ 6 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲವು ಸಾಧಿಸಲಿವೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಬಂದಿದ್ದಾರೆ. ಹೀಗಾಗಿ ಎಲ್ಲೆಡೆ ನಮಗೆ ಬಂಬಲ ಸಿಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಡಾ ಅಧ್ಯಕ್ಷ ಬಾಬು ವಾಲಿ, ಮುಖಂಡರಾದ ಗುರುನಾಥ ಕೊಳ್ಳೂರ, ಬಸವರಾಜ ಜೋಜನಾ, ಶ್ರೀನಿವಾಸ ಚೌಧರಿ, ನೆಮತಾಬಾದಿ ಇದ್ದರು.