ಟಿಕೆಟ್‌ ಹಂಚಿಕೆ ಸಂಬಂಧ ಹಾಲಿ ಶಾಸಕರಿಗೆ ಯಾವುದೇ ಸಮಸ್ಯೆಯಿಲ್ಲ. ಇಬ್ಬರು ಶಾಸಕರು ಸ್ವತಃ ತಾವೇ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಅವರಿಬ್ಬರೂ ಬೇರೆಯವರ ಹೆಸರು ಸೂಚಿಸಿದ್ದಾರೆ. ಉಳಿದಂತೆ ಬೇರೆ ಶಾಸಕರಿಗೆ ಟಿಕೆಟ್‌ಗೆ ಆತಂಕವಿಲ್ಲ: ಡಿ.ಕೆ. ಶಿವಕುಮಾರ್‌ 

ಬೆಂಗಳೂರು(ಮಾ.19):  ಬೆಳಗಾವಿಯಲ್ಲಿ ಮಾ.20ರಂದು ನಡೆಯಲಿರುವ ಯುವಕ್ರಾಂತಿ ರಾರ‍ಯಲಿ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಆಗಮಿಸಲಿದ್ದಾರೆ. ಅವರು ಆಗಮಿಸಿದ ಬಳಿಕ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್‌ ಹಂಚಿಕೆ ಸಂಬಂಧ ಹಾಲಿ ಶಾಸಕರಿಗೆ ಯಾವುದೇ ಸಮಸ್ಯೆಯಿಲ್ಲ. ಇಬ್ಬರು ಶಾಸಕರು ಸ್ವತಃ ತಾವೇ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಅವರಿಬ್ಬರೂ ಬೇರೆಯವರ ಹೆಸರು ಸೂಚಿಸಿದ್ದಾರೆ. ಉಳಿದಂತೆ ಬೇರೆ ಶಾಸಕರಿಗೆ ಟಿಕೆಟ್‌ಗೆ ಆತಂಕವಿಲ್ಲ ಎಂದು ಹೇಳಿದರು. ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಯಿಲ್ಲ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಈ ಬಗ್ಗೆ ಸಿದ್ದರಾಮಯ್ಯ ಅವರನ್ನೇ ಕೇಳಿ’ ಎಂದು ಹೇಳಿದರು.

ಕೋಲಾರ ಸ್ಪರ್ಧೆಗೆ ಸಿದ್ದರಾಮಯ್ಯನ ಪ್ರಣಾಳಿಕೆ, ಬ್ಯಾನರ್, ಹಾಡು ಹೇಗಿತ್ತು.?

ಆಕಾಂಕ್ಷಿಗಳ ಭೇಟಿ: 

ಡಿ.ಕೆ. ಶಿವಕುಮಾರ್‌ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಟಿಕೆಟ್‌ ಆಕಾಂಕ್ಷಿಗಳು ಅವರಿಗೆ ಸ್ವಾಗತ ಕೋರಿದರು. ಬಳಿಕ ವಿಮಾನ ನಿಲ್ದಾಣದ ಮುಖ್ಯ ದ್ವಾರದ ಬಳಿ ದೇವನಹಳ್ಳಿ ಮತ್ತು ಬಸವ ಕಲ್ಯಾಣ ಕ್ಷೇತ್ರದ ಆಕಾಂಕ್ಷಿಗಳು ಸುತ್ತುವರೆದು ಮಾತುಕತೆ ನಡೆಸಿದರು.

ಮಾ.22ಕ್ಕೆ ಮೊದಲ ಪಟ್ಟಿ ಪ್ರಕಟ: ಸಿದ್ದು

ಕಾಂಗ್ರೆಸ್‌ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಮಾ.22 ರಂದು ಬೆಳಗ್ಗೆ ಪ್ರಕಟವಾಗಲಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಿಇಸಿ ಸಭೆಯಲ್ಲಿ ಒಂದೇ ಹೆಸರು ಶಿಫಾರಸ್ಸಾಗಿರುವ ಹಾಗೂ ಗೊಂದಲವಿಲ್ಲದ ಕ್ಷೇತ್ರಗಳ ಟಿಕೆಟ್‌ ಬಗ್ಗೆ ಮಾತ್ರ ಚರ್ಚಿಸಲಾಗಿದೆ. ಈ ವೇಳೆ ಸಿದ್ದಪಡಿಸಿರುವ ಪಟ್ಟಿಯನ್ನು ಮಾ.22 ರಂದು ಬೆಳಗ್ಗೆ ಪ್ರಕಟಿಸಲಾಗುವುದು. ಪಕ್ಷಕ್ಕೂ ಅಮಾವಾಸೆಗೂ ಸಂಬಂಧವಿಲ್ಲ. ಮಾ.21 ರಂದು ಅಮಾವಾಸ್ಯೆ, ಮಾ.22 ರಂದು ಯುಗಾದಿ. ಹೀಗಾಗಿ ಯುಗಾದಿ ದಿನದಂದು ಪಟ್ಟಿಪ್ರಕಟವಾಗಲಿದೆ ಎಂದು ಹೇಳಿದರು.