* ಬಹುತೇಕ ಕಾಂಗ್ರೆಸ್ ಪಕ್ಷದವರು ನಮ್ಮ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುತ್ತಿದ್ದಾರೆ* ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಮುಖಂಡರೇ ಬಿಜೆಪಿಗೆ ಬಹುತೇಕರು ಬರಲಿದ್ದಾರೆ* 80 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ
ಯಲಹಂಕ(ಜೂ.10): ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಮುಖ್ಯ ಮುಖಂಡರೇ ಬಿಜೆಪಿಗೆ ಬಹುತೇಕರು ಬರಲಿದ್ದಾರೆ ಎಂದು ಶಾಸಕ ಎಸ್.ಅರ್.ವಿಶ್ವನಾಥ್ ಹೇಳಿದರು.
ತಾಲೂಕಿನ ಬ್ಯಾಲಕೆರೆ, ಮಾದನಾಯಕನಹಳ್ಳಿ ಸೇರಿದಂತೆ ವಿವಿಧೆಡೆಯಲ್ಲಿ 80 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬಹುತೇಕ ಕಾಂಗ್ರೆಸ್ ಪಕ್ಷದವರು ನಮ್ಮ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುತ್ತಿದ್ದಾರೆ. ನಮಗೆ ಕೆಲಸಗಳು ಆಗಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಮುಖಂಡರೇ ಬಿಜೆಪಿಗೆ ಬಹುತೇಕರು ಬರಲಿದ್ದಾರೆ ಎಂದರು.
ರಾಜ್ಯಸಭಾ ಚುನಾವಣೆ 2022: ಬಿಜೆಪಿ 45 ಶಾಸಕರು ಮತ ಚಲಾವಣೆ, ನಿರ್ಮಲಾ ಗೆಲವು ಅಧಿಕೃತ ಘೋಷಣೆ ಬಾಕಿ
ಮಾದನಾಯಕನಹಳ್ಳಿಯಿಂದ ಕಡಬಗೆರೆ ಕ್ರಾಸ್‌ವರೆಗೆ, ಗಂಗೊಂಡನಹಳ್ಳಿಯಿಂದ ಕಾಚೋಹಳ್ಳಿ ಮಾಗಡಿ ರಸ್ತೆಗೆ 18ಕೀ.ಮೀ ಉದ್ದದ 37 ಕೋಟಿ ವೆಚ್ಚದ ಡಾಂಬರೀಕರಣ, ಕೆಜಿ ಲಕ್ಕೇನಹಳ್ಳಿಯಲ್ಲಿ 38 ಕೋಟಿ ವೆಚ್ಚದ ಬಿಡಿಎ ಅನುದಾದಡಿಯಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಕಾಮಗಾರಿ, ಬ್ಯಾಲಕೆರೆಯಿಂದ ತರಬನಹಳ್ಳಿಯವರೆಗೆ 2.90 ಕೋಟಿ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಹನುಮಯ್ಯ ಮತ್ತಿತರರು ಹಾಜರಿದ್ದರು.
