ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಶೆಟ್ಟರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಶೆಟ್ಟರ್ ವಿರುದ್ದ ಘೋಷಣೆ ಕೂಗಿ, ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕಿ ತಮ್ಮ ಆಕ್ರೋಶ ಹೊರ ಹಾಕಿದರು.

ಬೆಂಗಳೂರು(ಜ.26): ಮಾಜಿ ಸಿಎಂ ಜಗದೀಶ ಶೆಟ್ಟ‌ರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಮರಳಿದ್ದಕ್ಕೆ ಕಾಂಗ್ರೆಸ್ ನಾಯಕರು ಅಸಮಾ ಧಾನ ವ್ಯಕ್ತಪಡಿಸಿದ್ದು, ಅವರ ನಡೆಯನ್ನು ಅವಕಾಶವಾದಿ ಎಂದು ಜರಿದಿದ್ದಾರೆ. ಇದೇ ವೇಳೆ, ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶೆಟ್ಟರ್ ಭಾವಚಿತ್ರಕ್ಕೆ 2508 ಹಚ್ಚಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಕಾಂಗ್ರೆಸ್ ಪಕ್ಷ ನಿಂತಿಲ್ಲ. ಅವರ ವಿದಾಯವನ್ನು ಆಯಾರಾಂ, ಗಯಾರಾಂ ಅನ್ನೋತೀವಿ ಅಷ್ಟೇ ಎಂದಿದ್ದಾರೆ. ಲಕ್ಷ್ಮಣ ಸವದಿ ಸಹ ಪಕ್ಷ ಬಿಡುತ್ತಾರಂತಲ್ಲ? ಎಂಬ ಪ್ರಶ್ನೆಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿ, ಹೋಗಲಿ ಬಿಡಿ, ಬೇಡ ಅಂದೋರ್ಯಾರು? ಎಂದು ಪ್ರಶ್ನಿಸಿದರು. ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಮಾ ನಾಡಿದ ಸಚಿವ ಸತೀಶ್ ಜಾರಕಿಹೊಳಿ, ಶೆಟ್ಟರ್ ಬಿಜೆಪಿಗೆ ಸೇ ರ್ಪಡೆಯಾಗಿರುವುದರಿಂದ ಲೋಕಸಭಾಚುನಾವಣೆಮೇಲೆಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಶೆಟ್ಟರ್‌ ಸೇರ್ಪಡೆಯಿಂದ ಲೊಕಸಭೆಗೆ ಸಹಕಾರಿ: ಯಡಿಯೂರಪ್ಪ

ಗಂಗಾವತಿಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಅವರು ಪಕ್ಷ ಸಂಘಟಿಸಲಿಲ್ಲ. ಅವರಿಂದ ಪಕ್ಷಕ್ಕೆ ಲಾಭವಾಗಿಲ್ಲ. ಆದರೆ, ಶೆಟ್ಟರ್ ಎಲ್ಲೋ ಒಂದು ಕಡೆ ತಪ್ಪು ಮಾಡಿ ಬಿಜೆಪಿ ಸೇರಿದ್ದಾರೆ. ಸಹಾಯ ಮಾಡಿದವರಿಗೆ ವಂಚನೆಮಾಡಿದ್ದಾರೆ ಎಂದರು. ಧಾರವಾಡ ದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ ಲಾಡ್, ಮಾಜಿ ಸಿಎಂ ಶೆಟ್ಟರ್ ನಡೆಯಿಂದ ವೈಯಕ್ತಿಕವಾಗಿ ನಾನಂತೂ ಖುಷಿಯಾಗಿದ್ದೇನೆ. ರಾಜಕೀಯದಲ್ಲಿ ಇದೆಲ್ಲಾ ಸಾಮಾನ್ಯ ಎಂದರು.

ಪ್ರತಿಭಟನೆ:

ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಶೆಟ್ಟರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಶೆಟ್ಟರ್ ವಿರುದ್ದ ಘೋಷಣೆ ಕೂಗಿ, ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕಿ ತಮ್ಮ ಆಕ್ರೋಶ ಹೊರ ಹಾಕಿದರು.