* ಪರಮೇಶ್ವರ್‌ ಹಾಗೂ ಬಿ.ಕೆ. ಹರಿಪ್ರಸಾದ್‌ ಅವರು ಮುನಿಯಪ್ಪ ಅವರೊಂದಿಗೆ ಮಾತುಕತೆ * ಮುಂದಿನ ಸಿಎಂ ವಿಚಾರದಲ್ಲಿ ತಂತ್ರ ನಡೆಸುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳು*  ಮೂಲ ಕಾಂಗ್ರೆಸ್ಸಿಗರ ನಿಲುವು ಏನಾಗಿರಬೇಕು ಎಂಬುದರ ಕುರಿತು ಚರ್ಚೆ  

ಬೆಂಗಳೂರು(ಜೂ.27): ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಕುರಿತು ಚರ್ಚೆ ಶುರುವಾದ ಬೆನ್ನಲ್ಲೇ ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ನಿವಾಸದಲ್ಲಿ ಮೂಲ ಕಾಂಗ್ರೆಸ್ಸಿಗರ ಗುಂಪು ಸಭೆ ನಡೆಸಿದೆ.

ಕೆ.ಎಚ್‌. ಮುನಿಯಪ್ಪ ನಿವಾಸದಲ್ಲಿ ಶನಿವಾರ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರು ಕೆ.ಎಚ್‌. ಮುನಿಯಪ್ಪ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಮುಂದಿನ ಸಿಎಂ ಅಂತರ್‌ ಯುದ್ಧದ ನಡುವೆ ಡಿಕೆ ಶಿವಕುಮಾರ್ ಮಹತ್ವದ ಸಭೆ

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಬಣಗಳು ಮುಂದಿನ ಸಿಎಂ ವಿಚಾರದಲ್ಲಿ ತಂತ್ರಗಳನ್ನು ನಡೆಸುತ್ತಿದ್ದು, ಈ ವಿಚಾರದಲ್ಲಿ ಮೂಲ ಕಾಂಗ್ರೆಸ್ಸಿಗರ ನಿಲುವು ಏನಾಗಿರಬೇಕು ಎಂದು ಈ ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.