Asianet Suvarna News Asianet Suvarna News

ಎಲ್ಲರಿಗೂ ಕ್ಯಾನ್ಸರ್‌ ಆಗಿದ್ದ ಬಿಜೆಪಿ ಸರ್ಕಾರವನ್ನು ಜನ ಕಿತ್ತೆಸೆದಿದ್ದಾರೆ: ಕಾಂಗ್ರೆಸ್ ಮುಖಂಡ

ರಾಜ್ಯದಲ್ಲಿ ಅಷ್ಟೇ ಅಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಜನರು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸಲಿದ್ದಾರೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲಿದ್ದಾರೆ: ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ 

Congress Leader Siddu Konnur Slams BJP grg
Author
First Published Sep 13, 2023, 9:09 AM IST

ಮಹಾಲಿಂಗಪುರ(ಸೆ.13):  ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರವೇ ಕ್ಯಾನ್ಸರ್‌ ಬಾಧಿಸಿದಂತೆ ನಾಡಿನ ಜನರನ್ನು ಬಾಧಿಸುತ್ತಿತ್ತು. ಆ ಕಾರಣಕ್ಕಾಗಿಯೇ ರಾಜ್ಯದ ಮತದಾರರು ಬಿಜೆಪಿಯನ್ನು ಕಿತ್ತೆಸೆದು, ತಕ್ಕಪಾಠ ಕಲಿಸಿ, ಮೂಲೆಗೆ ಎಸೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.

ಈ ಮೂಲಕ ಕಾಂಗ್ರೆಸ್‌ ಅಂದರೆ ಕ್ಯಾನ್ಸರ್‌ ಇದ್ದಂತೆ ಎಂದು ಹೇಳಿದ್ದ ತೇರದಾಳ ಶಾಸಕ ಸಿದ್ದು ಸವದಿ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲು ಮಾಡಿ ಅದಕ್ಕೆ ಕಡಿವಾಣ ಹಾಕಲು ಮತ್ತು ಬಡವರ, ಮಧ್ಯಮ ವರ್ಗದವರ, ಜನಸಾಮಾನ್ಯರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಪ್ರಣಾಳಿಕೆ ಪ್ರಕಾರ ಸಿದ್ದರಾಮಯ್ಯ ಸರ್ಕಾರ ಭಾಗ್ಯಗಳ ಮೂಲಕ ಕೆಲಸ ಮಾಡುತ್ತಿದೆ. ಇದರಿಂದ ಹೊಟ್ಟೆಯುರಿ ಪಡುತ್ತಿರುವ ಬಿಜೆಪಿಯವರು ಏನೋ ಒಂದು ಸುಳ್ಳು ತಗಾದೆ ತೆಗೆದು, ಸುಳ್ಳು ಹೇಳಿ ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬಾಗಲಕೋಟೆ: ಒಳಬೇಗುದಿ ಮಧ್ಯೆ ಒಗ್ಗಟ್ಟಿನ ಮಂತ್ರ;ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರ ಸಭೆ

ರಾಜ್ಯದಲ್ಲಿ ಅಷ್ಟೇ ಅಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಜನರು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸಲಿದ್ದಾರೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲಿದ್ದಾರೆ ಎಂದರು.

Follow Us:
Download App:
  • android
  • ios