ರಾಷ್ಟ್ರ ರಾಜಕಾರಣಕ್ಕೆ ಹೋಗುವ ಬಗ್ಗೆ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ...!
ರಾಜ್ಯ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಅವರನ್ನ ಕಳಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇನ್ನು ಇದೀಗ ಮತ್ತೆ ರಾಷ್ಟ್ರ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬಾಗಲಕೋಟೆ, (ಡಿ.13): ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಷ್ಟ್ರ ರಾಜಕಾರಣ ನಿರಾಕರಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನಗೆ ರಾಷ್ಟ್ರ ರಾಜಕಾರಣ ಹೋಗುವದು ಇಷ್ಟ ಇಲ್ಲ. ದೆಹಲಿ ರಾಜಕಾರಣಕ್ಕೆ ಹೋಗಲ್ಲ. ಪ್ರಧಾನ ಮಂತ್ರಿ,ಮಂತ್ರಿ ಆಗಬೇಕು ಅನ್ನೋ ಆಸೆ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.
BJP ಜೊತೆ JDS ವಿಲೀನ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಕುಮಾರಸ್ವಾಮಿ
ಮನುಷ್ಯ ತನ್ನ ಶಕ್ತಿ ಮೀರಿ ಯೋಚಿಸಬಾರದು. ರಾಜಕಾರಣದಲ್ಲಿ ಜಾತಿ, ದುಡ್ಡು ಯಾವುದು ಮುಖ್ಯ ಅಲ್ಲ. ಪ್ರಜಾಪ್ರಭುತ್ವದ ಮೌಲ್ಯ ಅಳವಡಿಸಿಕೊಳ್ಳುವುದು ಮುಖ್ಯ ಎಂದರು.
ತಾಲೂಕು ಬೋರ್ಡ್ ಮೆಂಬರ್ ಆಗಿ ಕೆಳ ಹಂತದಿಂದ ಬಂದಿದ್ದೇನೆ. ಇಲ್ಲಿಗೆ ನನ್ನದು ಕೊನೆಯದು. ಇತ್ತ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಅಂತಾರೆ. ಮಿಸ್ಟರ್ ನರೇಂದ್ರ ಮೋದಿ 1980 ನೆನಪಿಸಿದೆ, ನೀವು ಎರಡೇ ಸೀಟು ಗೆದ್ದಿದ್ರಿ ಎಂದು ಬಿಜೆಪಿ ನಾಯಕರುಗಳಿಗೆ ಟಾಂಗ್ ಕೊಟ್ಟರು.
ಪ್ರಜಾಪ್ರಭುತ್ವದಲ್ಲಿ ಕಾಲ ಚಕ್ರ ತಿರುಗುತ್ತಿರುತ್ತೆ. ಮೇಲಿದ್ದವರು ಕೆಳಗೆ ಬರಬೇಕು. ಕೆಳಗೆ ಇದ್ದವರು ಮೇಲೆ ಹೋಗಬೇಕು. ರಾಜಕಾರಣ ಅನ್ನೋದು ಗಣಿತವಲ್ಲ ಎಂದು ಹೇಳಿದರು.