ಬಿಎಸ್‌ವೈ ಸರ್ಕಾರಕ್ಕೆ ಇಕ್ಕಟ್ಟು ತಂದಿಟ್ಟ ಸಿದ್ದರಾಮಯ್ಯ
ಭೂಸುಧಾರಣೆ ಕಾಯ್ದೆ ವಿರೋಧ ರೈತರರ ಪ್ರತಿಭಟನೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬೆಂಗಳೂರು, (ಸೆ.22): ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಬೆಂಗಳೂರಿನಲ್ಲಿ ರೈತರ ಹೋರಾಟದ ಕಿಚ್ಚು ವ್ಯಾಪಕವಾಗುತ್ತಿದೆ. ಮತ್ತೊಂದೆಡೆ ಸದನದಲ್ಲಿ ವಿಪಕ್ಷಗಳ ಸರ್ಕಾರದ ಮೇಲೆ ಮುಗಿಬಿದ್ದಿವೆ.
ಅಲ್ಲದೇ ಭೂಸುಧಾರಣೆ ಕಾಯ್ದೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನಾ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಇದರಿಂದ ರೈತರ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿದ್ದು, ಸರ್ಕಾರಕ್ಕೆ ನುಂಗಲಾದ ತುತ್ತಾಗಿ ಪರಿಣಮಿಸಿದೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ,ಭೂಸುಧಾರಣೆ ಕಾಯ್ದೆಗೆ ನನ್ನ ವಿರೋಧವಿದೆ. ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.
ರೈತರ ಪ್ರತಿಭಟನೆ : ಶೀಘ್ರ ಕರ್ನಾಟಕ ಬಂದ್?
ನಿನ್ನೆಯಿಂದ ರೈತರ ಹಾಗೂ ಕಾರ್ಮಿಕ ಸಂಘಟನೆಗಳು, ಐಕ್ರ ಹೋರಾಟ ಸಮಿತಿ ಒಗ್ಗಟ್ಟಾಗಿ ನಿನ್ನೆಯಿಂದ ಹೋರಾಟ, ಧರಣಿಗಳನ್ನು ಮಾಡ್ತಾ ಇವೆ. ಇವರು ಭೂಮಿಯ ಹಕ್ಕಿಗಾಗಿ ಹೋರಾಟ ಮಾಡ್ತಾ ಇದ್ದಾರೆ. ರೈತರಿಗೂ ಭೂಮಿಗೂ ತಲತಲಾಂತರದ ಸಂಬಂಧ ಇದೆ ಎಂದರು.
ಅಲ್ಲದೇ, ಮನುಷ್ಯನ ಬದುಕಿಗೆ ಕೃಷಿ ಆಧಾರ, ರಾಜರ ಕಾಲದಿಂದಲೂ ಕೃಷಿಯೇ ಆಧಾರವಾಗಿದೆ, ತದನಂತದ ಕಾಲದಲ್ಲಿ ಕೈಗಾರಿಕಾ ಕ್ರಾಂತಿಯಾಯಿತು. ಈಗ ಕೃಷಿ ಸೆಕ್ಟರ್ನಲ್ಲಿ ಆದಾಯ ಕಡಿಮೆಯಾಗ್ತಾ ಇದೆ. ಕೈಗಾರಿಕಾ ಸೆಕ್ಟರ್ನಲ್ಲೂ ಆದಾಯ ಕಡಿಮೆಯಾಗ್ತಾ ಇದೆ. ಸರ್ವಿಸ್ ಸೆಕ್ಟರ್ನಲ್ಲಿ ಆದಾಯ ಹೆಚ್ಚಾಗ್ತಾ ಇದೆ. ವ್ಯವಸಾಯ ಮಾಡೋರು ಕೃಷಿಕರು.
ಪಾಳೆಗಾರ, ಜಮೀನ್ದಾರರು, ನಾಯಕರ ವ್ಯವಸ್ಥೆ ಇತ್ತು. ಬಸವಣ್ಣನವರ ಕಾಲದಲ್ಲಿ ಕಾಯಕ ಹಾಗೂ ದಾಸೋಹದ ಬಗ್ಗೆ ಮಹತ್ವ ಇತ್ತು. ಬಸವಣ್ಣ ಕಾಯಕವೇ ಕೈಲಾಸ ಅಂತಾ ಹೇಳಿದ್ದಾರೆ. ಪ್ರಧಾನಮಂತ್ರಿಯಾದ್ರೂ ಒಂದೇ, ಸಾಮಾನ್ಯ ನಾಯಕನಾದ್ರೂ ಒಂದೇ. ಸಮಾಜದಲ್ಲಿ ಒಗ್ಗಟ್ಟಾಗಿ ಇರ್ಬೇಕು. ಯಾರೂ ಕೂಡ ಕೂತು ತಿನ್ನಬಾರ್ದು.. ಪ್ರತಿಯೊಬ್ಬರೂ ಕಾಯಕ ಮಾಡ್ಬೇಕು. ಪ್ರತಿಯೊಬ್ರೂ ಹಂಚಿಕೊಳ್ಳಬೇಕು. ಕಾರ್ಮಿಕ ಯಾರೇ ಆಗ್ಲಿ ಬೇಧ ಭಾವ ಇರಬಾರದು. ಬಡವ ಬಲ್ಲಿದ ಅನ್ನೋ ಬೇಧ ಬಾವ ರಬಾರದು ಎಂದು ಬಸವಣ್ಣನ ತತ್ವಗಳನ್ನ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಹೇಳಿದರು.
ಕೃಷಿ ಮಸೂದೆ ಖಂಡಿಸಿ ಸರ್ಕಾರದ ವಿರುದ್ಧ ಅನ್ನದಾತರ ಸಮರ; ಬೀದಿಗಿಳಿದಿದ್ದಾರೆ ರೈತರು
1961ರಲ್ಲಿ ರಕ್ಷಣೆ ಕೊಡುವ ಸಲುವಾಗಿ ಆಕ್ಟ್ ಜಾರಿಗೆ ತರಲಾಯಿತು. ಉಳುವವನೇ ಭೂಮಿಗೆ ಒಡೆಯ ಕಾನೂನು ಜಾರಿಗೆ ತರಲಾಯ್ತು. 1974ರಲ್ಲಿ ದೇವರಾಜು ಅರಸು ಇದ್ದಾಗ ಭೂಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನ 1961 ರಲ್ಲಿ 63 ಆಕ್ಟ್ ಗೆ ತಂದ್ರು. 63 ರಲ್ಲಿ ಯೂನಿಟ್ಗಳನ್ನ ಡಬಲ್ ಮಾಡಲಾಯಿತು. 79(ಎ) (ಬಿ)( ಸಿ) ಯನ್ನ ಪೂರ್ವನ್ವಯ ರೀತಿಯಲ್ಲಿ ಡ್ರಾಫ್ಡ್ ತಂದ್ರು. ಈಗ ಎಲ್ಲ ಯುನಿಟ್ ಡಬಲ್ ಮಾಡಿದ್ದಾರೆ ಎಂದು ಹೇಳಿದರು.
79 a,b,c ಯನ್ನ ಸಂಪೂರ್ಣ ಡ್ರಾಪ್ ಮಾಡಲು ಹೊರಟಿದ್ದಾರೆ. ಸೆಕ್ಷನ್ 80 ಡ್ರಾಪ್ ಮಾಡಿದ್ದಾರೆ. ಈ ಪ್ರಕಾರ ಯಾರು ಬೇಕಾದ್ರೂ ಜಮೀನು ಕೊಳ್ಳಬಹುದು. ಈ ಪ್ರಕಾರ ಮತ್ತೆ ಜಮೀನ್ದಾರಿ ಪದ್ದತಿ ಜಾರಿಗೊಳಿಸ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.