ಬೆಂಗಳೂರು (ಸೆ.21):  ಕೊರೋನಾ ಸೋಂಕು ಯಾರಿಗೂ ಬರಬಾರದು. ಸೋಂಕು ತಗುಲಿದವರು ಒಂದು ರೀತಿ ಸಾಮಾಜಿಕ ಬಹಿಷ್ಕಾರ ಎದುರಿಸಯವ ಸ್ಥಿತಿ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನ ಸಭೆ ಕಲಾಪದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊರೋನಾ ಪಾಠ ಮಾಡಿದ್ದಾರೆ.

ಅಶೋಕ್ ಗಸ್ತಿ ಅವರು ಕೊರೋನಾದಿಂದ ಮೃತರಾದರು. ರಾಜ್ಯಸಭೆಗೆ ಆಯ್ಕೆಯಾದರೂ ಅವರು ಅಲ್ಲಿಗೆ ಹೋಗಲಾಗಲಿಲ್ಲ. ಅವರ ಮಗಳಿಗೂ ಕೊರೋನಾ ಪಾಸಿಟಿವ್ ಬಂದಿತ್ತು ಎಂದು ಹೇಳಿದರು.

ನಿಲ್ಲದ ಕೊರೋನಾ ಕಾಟ: ಕೊಟ್ಟೂ​ರಲ್ಲಿ ಮನೆ ಮನೆಗೆ ಕೋವಿಡ್‌ ಟೆಸ್ಟ್‌ ...

ನನ್ನ ಹೆಂಡತಿಗೂ ಕೊರೋನಾ ಬಂದಿತ್ತು. ಕೊರೋನಾ ಬಂದರೆ ಯಾರನ್ನೂ ನೋಡಲಾಗಲ್ಲ. ಯಾರೂ ಊಟ ಕೊಡುವ ಹಾಗಿಲ್ಲ. ನಮ್ಮನೆಯಲ್ಲಿ ಎಲ್ಲರಿಗೂ ಕೊರೋನಾ ಬಂದು ಅಡುಗೆ ಮಾಡಲು ಜನ ಇರಲಿಲ್ಲ. ಮೈಸೂರಿನಿಂದ ಯಾರನ್ನೀ ಕರ್ಕೊಂಡು ಬಂದು ಅಡುಗೆ ಮಾಡಿಸಬೇಕಾಯ್ತು ಎಂದು ಸಿದ್ದರಾಮಯ್ಯ ಹೇಳಿದರು.

ಇನ್ನು ಡಿಕೆ ಶಿವಕುಮಾರ್  ಮೊದ್ಲು ಮಾಸ್ಕ್ ಹಾಕ್ತಿರಲಿಲ್ಲ. ಈಗ ರೋಗ ಬಂದು ಹೋದ ಮೇಲೆ ಮಾಸ್ಕ್ ಹಾಕಿಕೊಳ್ಳುತ್ತಿದ್ದಾನೆ. ಮೊದಲು ಮಾಸ್ಕ್ ಹಾಕಿಕೊಳ್ಳಲದೇ ಅಣ್ಣಾ, ಅಕ್ಕಾ ಬಾ ಅಂತಿದ್ದ. ಈಗ ಹುಷಾರಾಗಿದ್ದಾನೆ. ಈ ರೋಗ ಯಾರಿಗೂ ಬರಬಾರದು. ಕೊರೋನಾದಿಂದ ಸಾವನ್ನಪ್ಪಿದವರಿಗೆ , ಕೊರೋನಾ ವಾರಿಯರ್‌ಗಳಾಗಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.