Asianet Suvarna News Asianet Suvarna News

'ಪ್ರಧಾನಿ ಮೋದಿ 6 ವರ್ಷದಲ್ಲೇ 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ'

  • 70 ವರ್ಷದಲ್ಲಿ ಕಾಂಗ್ರೆಸ್, ಹಾಗು ಇತರ ಸರ್ಕಾರಗಳು ಒಟ್ಟು ಮಾಡಿದ ಸಾಲ 52 ಲಕ್ಷ ಕೋಟಿ
  • ನರೇಂದ್ರ ಮೋದಿ ಅವರು ಕೇವಲ 6 ವರ್ಷದಲ್ಲೇ 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ
  • ಪ್ರಧಾನಿ‌ ಮೋದಿ ವಿರುದ್ಧ ಸಿದ್ದರಾಮಯ್ಯ  ವಾಗ್ದಾಳಿ
Congress Leader siddaramaiah Slams PM Narendra Modi snr
Author
Bengaluru, First Published Jul 29, 2021, 2:14 PM IST
  • Facebook
  • Twitter
  • Whatsapp

ಬೆಂಗಳೂರು (ಜು.29):  70 ವರ್ಷದಲ್ಲಿ ಕಾಂಗ್ರೆಸ್, ಹಾಗು ಇತರ ಸರ್ಕಾರಗಳು ಒಟ್ಟು ಮಾಡಿದ ಸಾಲ 52 ಲಕ್ಷ ಕೋಟಿ. ನರೇಂದ್ರ ಮೋದಿ ಅವರು ಕೇವಲ 6 ವರ್ಷದಲ್ಲೇ 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು  ಪ್ರಧಾನಿ‌ ಮೋದಿ ವಿರುದ್ಧ ಸಿದ್ದರಾಮಯ್ಯ  ವಾಗ್ದಾಳಿ ನಡೆಸಿದರು. 

ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ನರೇಂದ್ರ ಮೋದಿ ಅವರು ಕೇವಲ 6 ವರ್ಷದಲ್ಲೇ 82 ಲಕ್ಷ ಕೋಟಿ ಸಾಲಿನ ಮಾಡಿದ್ದಾರೆ.  ಇದನ್ನ ಅಚ್ಛೇ ದಿನ್ ಅಂತ ನೀವು ಕರೆಯುವ ಹಾಗಿದ್ರೆ ಕರೆದುಕೊಳ್ಳಿ. ನನ್ನದೇನು ಅಭ್ಯಂತರವಿಲ್ಲ. ಮೋದಿ ಸರ್ಕಾರದ 6 ವರ್ಷದಲ್ಲಿ 23 ಕೋಟಿ ಭಾರತೀಯರು ಬಡತನ ರೇಖೆಗಿಂತ ಕೆಳಗೆ ಬಂದಿದ್ದಾರೆ ಎಂದರು. 

ಸುಳ್ಳು ಹೇಳುವಲ್ಲಿ ಬಿಜೆಪಿಗರು ನಿಸ್ಸೀಮರು: ಸಿದ್ದರಾಮಯ್ಯ

ಮನಮೋಹನ್ ಸಿಂಗ್ ಸರ್ಕಾರದಲ್ಲಿ 30 ಕೋಟಿ ಜನ ಬಡತನ ರೇಖೆಯ ಮೇಲಿದ್ದರು. ಈಗ ಮೋದಿ ಸರ್ಕಾರದಲ್ಲಿ ಅಭಿವೃದ್ಧಿ ದರ ಮೈನಸ್ ಆಗಿದೆ ಎಂದರು.
 
ಸಿಎಂ ಬಗ್ಗೆ ಪ್ರಸ್ತಾಪ : ಬಸವರಾಜ್ ಬೊಮ್ಮಾಯಿ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಲು ಹೋಗಿದ್ದಾರೆ. ಇದು ಸಂತೋಷದ ವಿಚಾರ. ಬೊಮ್ಮಾಯಿ ನನ್ನ ನಡುವೆ ಉತ್ತಮ ಸಂಬಂಧವಿತ್ತು. ನಿಮಗೆ ಯಾವುದೇ ಅನುಮಾನ ಬೇಡ. ಆದರೆ ಅದು ಇವರಲ್ಲ.  ಇವರ ತಂದೆ ಎಸ್ ಆರ್ ಬೊಮ್ಮಾಯಿ ಜೊತೆಗೆ.

ಎಸ್.ಆರ್ ಬೊಮ್ಮಾಯಿ ಅವರ ಮಗ ಬಸವರಾಜ್ ಬೊಮ್ಮಾಯಿ ಎಂದು ನಾನೆಂದೂ ಸಾಫ್ಟ್ ಕಾರ್ನರ್ ತೋರಿಸಲ್ಲ. ವ್ಯಕ್ತಿಗತ ಪ್ರೀತಿ ವಿಶ್ವಾಸ ಬೇರೆ.  ಅದು ಮನುಷ್ಯ ಸಹಜ ಗುಣ. ಆದರೆ ರಾಜಕೀಯ ಸಿದ್ಧಾಂತ ಮುಖ್ಯ. ನಮ್ಮ ಸಿದ್ಧಾಂತ ಬೇರೆ, ಬೊಮ್ಮಾಯಿ ಸಿದ್ಧಾಂತ ಬೇರೆ. ನಾವು ರಾಜಕಾರಣದ ಕಣ್ಣಿಂದ ನೋಡುವುದು. ಬಸವರಾಜ್ ಬೊಮ್ಮಾಯಿ ಈಗ ಜನತಾದಳದಲ್ಲಿ  ಇಲ್ಲವಲ್ಲ.  ಬಸವರಾಜ್ ಬೊಮ್ಮಾಯಿ ಕೋಮುವಾದಿ ಬಿಜೆಪಿ ಪಾರ್ಟಿ ಸೇರಿಕೊಂಡ ಮೇಲೆ ಸಂಬಂಧ ಕಟ್ ಆದಂತೆ. ನಮ್ಮ ಅವರ ಐಡಿಯಾಲಜಿ ಬೇರೆ ಬೇರೆ ಆಗುತ್ತದೆ.

 ಬಸವರಾಜ್ ಬೊಮ್ಮಯಿ ಅಪ್ಪನಿಗಿಂತ ಬುದ್ಧಿವಂತ ಆಗಬಹುದು. ದಡ್ಡರು ಸಹ ಆಗಬಹುದು. ಮಹಾತ್ಮ ಗಾಂಧಿಯವರನ್ನ ನಾವು ಮಹಾತ್ಮ ಎಂದು ಕರೆಯುತ್ತೇವೆ. ಅವರ ಮಗ ಕೆಟ್ಟ ಅಭ್ಯಾಸಗಳನ್ನ ಕಲಿತಿದ್ರು. ಬುದ್ದಿವಂತರ ಮಕ್ಕಳು ಜಾಣರು ಆಗಬಹುದು. ದಡ್ಡರು ಆಗಬಹುದು ಎಂದು ಹೇಳಿದ್ದೇನೆ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟರು. 

ಇನ್ನು ರಾಜ್ಯದಲ್ಲಿ ಆದಷ್ಟು ಬೇಗ ಸಂಪುಟ ರಚನೆ ಆಗಬೇಕು. ಒಂದು ವಾರದ ಒಳಗೆ ಆಗಬೇಕು. ಕೊರೋನ ಇದೆ,ನೆರೆ ಇದೆ.ಸಿಎಂ ಒಬ್ಬರೇ ಎಲ್ಲವನ್ನೂ ನೋಡಲು ಆಗುವುದಿಲ್ಲ ಈ ನಿಟ್ಟಿನಲ್ಲಿ ಸಚಿವರ ಅಗತ್ಯವಿದೆ ಎಂದು ಹೇಳಿದರು. 

Follow Us:
Download App:
  • android
  • ios