ಬಾಗಲಕೋಟೆ, (ಡಿ.13): ಈಗ ಚುನಾವಣೆ ಇರೋದು ಕಾಂಗ್ರೆಸ್ BJP ನಡುವೆ. JDS ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್​ ಕೊಟ್ಟಿದ್ದಾರೆ. 

ಇಂದು (ಭಾನುವಾರ) ಗುಳೇದಗುಡ್ಡ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ  JDS ಅಪ್ಪ ಮಕ್ಕಳ ಆಸ್ತಿ. ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದೇ ನಿಜ. ಏನಾದರೂ ಅವರ ವಿರುದ್ಧ ನಡೆದರೆ ಹೊರಹಾಉತ್ತಾರೆ. ನನ್ನಂಥವನನ್ನೇ ಪಕ್ಷದಿಂದ ಹೊರಹಾಕಿದರು ಎಂದು ಹೇಳಿದರು.

ರಾಷ್ಟ್ರ ರಾಜಕಾರಣಕ್ಕೆ ಹೋಗುವ ಬಗ್ಗೆ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ...!

ನಾನು ಅಹಿಂದ ಎಂದು ಮಾತಾಡಿದ್ದಕ್ಕೆ ಹೊರಹಾಕಿದರು. ದೇವೇಗೌಡರು ಅಹಿಂದ ಬೇಡ ಎಂದರು. ನಾನು ಯಾರೇ ಬಂದರೂ ನಿಲ್ಲಿಸೋದಿಲ್ಲ ಎಂದು ಉತ್ತರಿಸಿದೆ. ದೇವರೆ ಬಂದು ಹೇಳಿದರೂ ನಿಲ್ಲಿಸೋದಿಲ್ಲ ಅಂದೆ. ಅದಕ್ಕೇ ನನ್ನನ್ನು ಉಚ್ಚಾಟನೆ ಮಾಡಿಬಿಟ್ರು ಎಂದು ತಿಳಿಸಿದರು.

 ಆಮೇಲೆ‌ ಕಾಂಗ್ರೆಸ್​ಗೆ ಬಂದೆ. ಅಲ್ಲಿ ಎಲ್ಲರೂ ಸ್ವಾಗತ ಮಾಡಿದರು. ಜೊತೆಗೆ, ನನ್ನನ್ನು ಮುಖ್ಯಮಂತ್ರಿಯಾಗಿ ನೀವೆಲ್ಲರೂ ಮಾಡಿದ್ರಿ ಎಂದು ತಿಳಿಸಿದರು.