ಬೆಂಗಳೂರು, (ಜ.13): ಸಚಿವ ಸ್ಥಾನ ಸಿಗದ ಸಿಟ್ಟಿನಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಇಬ್ಬರು ಒಂದೇ, ಇಬ್ಬರಿಗೂ ಕೃತಜ್ಞತೆ ಇಲ್ಲ ಎಂದು ಹೇಳಿದ್ದ ಪರಿಷತ್ ಸದದ್ಯ ವಿಶ್ವನಾಥ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

 ವಿಶ್ವನಾಥ್ ಅವರು ತಮಗೆ ಲೋಕಸಭೆಗೆ ಟಿಕೆಟ್ ಕೊಡಿಸಿದ್ದು, 2008ರಲ್ಲಿ ವಿಧಾನಸಭೆಗೆ ಟಿಕೆಟ್ ಕೊಡಿಸಿದ್ದು ಯಾರು ಎಂಬುದನ್ನು ನೆನಪು ಮಾಡಿಕೊಂಡು ಹೇಳಲಿ. ಆ ಮೇಲೆ ನನ್ನ ವಿರುದ್ಧ ಮಾತನಾಡಲಿ. ಕೃತಜ್ಞತೆ ಇಲ್ಲದೆ ಇರುವ ಕಾರಣಕ್ಕೆ  ಬಿಎಸ್ ಯಡಿಯೂರಪ್ಪ ಅವರೂ ಇವರನ್ನು ಮಂತ್ರಿ ಮಾಡಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಲೇವಡಿ ಮಾಡಿದ್ದಾರೆ. 

ಹೆಚ್. ವಿಶ್ವನಾಥ್ ಅವರು ತಮಗೆ ಲೋಕಸಭೆಗೆ ಟಿಕೆಟ್ ಕೊಡಿಸಿದ್ದು, 2008ರಲ್ಲಿ ವಿಧಾನಸಭೆಗೆ ಟಿಕೆಟ್ ಕೊಡಿಸಿದ್ದು ಯಾರು ಎಂಬುದನ್ನು ನೆನಪು ಮಾಡಿಕೊಂಡು ಹೇಳಲಿ, ಆ ಮೇಲೆ ನನ್ನ ವಿರುದ್ಧ ಮಾತನಾಡಲಿ. ಕೃತಜ್ಞತೆ ಇಲ್ಲದೆ ಇರುವ ಕಾರಣಕ್ಕೆ @BSYBJP ಅವರೂ ಇವರನ್ನು ಮಂತ್ರಿ ಮಾಡಿಲ್ಲ. 1/6#Mysuru

— Siddaramaiah (@siddaramaiah) January 13, 2021

ನಾಗೇಶ್​ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೆಯೇ ಸ್ವಕ್ಷೇತ್ರದಲ್ಲೇ ಸಂಭ್ರಮಾಚರಣೆ!

 ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆಯೇ ಇಲ್ಲ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್ಸಿನಲ್ಲಿ ಸಿಎಂ ಮಾಡಿದ್ವಿ, ಅವರು ಎಲ್ಲೂ ಕೂಡ ನಮ್ಮ ಹೆಸರನ್ನು ಹೇಳಲಿಲ್ಲ. ಯಡಿಯೂರಪ್ಪನವರಿಗೋಸ್ಕರ ಕಾಂಗ್ರೆಸ್ಸಿನಲ್ಲಿ ಮಂತ್ರಿ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದು ಬಿಎಸ್ ವೈ ಅವರನ್ನು ಸಿಎಂ ಮಾಡಿದ್ವಿ. ಆದರೆ ಇಂದು ಯಡಿಯೂರಪ್ಪನವರು ಕೂಡ ಕೊಟ್ಟಿದ್ದ ಮಾತು ತಪ್ಪುವುದರ ಮೂಲಕ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದಿದ್ದರು. 

ಇಷ್ಟೇ ಅಲ್ಲದೆ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ವಿಶ್ವನಾಥ್ ಅವರು, ಯೋಗೇಶ್ವರ್ ಒಬ್ಬ ಫ್ರಾಡ್, ಅವನಿಗೆ ಏಕೆ ಸ್ಥಾನ ನೀಡಿದ್ದೀರಾ, ಅವನೇನಾದರೂ ರಾಜಿನಾಮೆ ನೀಡಿ ಬಂದಿದ್ದಾನಾ? ಅಥವಾ ಯಡಿಯೂರಪ್ಪ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದುಕೊಂಡಿದ್ದಾನಾ, ಯಡಿಯೂರಪ್ಪನವರೇ ನೀವು ಕೊಟ್ಟ ಮಾತಿಗೆ ತಪ್ಪಿದ್ದೀರಾ, ಸಿದ್ದಲಿಂಗೇಶ್ವರ ನಿಮಗೆ ಒಳ್ಳೆಯದು ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.