ವಾಜಪೇಯಿಗಿಂತ ಮೋದಿ ದೊಡ್ಡ ಲೀಡ್ರಾ? ಇಬ್ರಾಹಿಂ, ಜೆಡಿಎಸ್, ಬಿಜೆಪಿ ವಿರುದ್ಧವೂ ಸಿದ್ದು ವಾಗ್ದಾಳಿ
* ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತು
* ಇಬ್ರಾಹಿಂ ನನ್ನ ಒಳ್ಳೆಯ ಸ್ನೇಹಿತ ಅಂತ ಹೇಳುತ್ತಾ ಪರೋಕ್ಷವಾಗಿ ಟಾಂಗ್ ಕೊಟ್ಟ ಸಿದ್ದು
* ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ನನ್ನ ಕಂಡರೆ ಭಯ ಎಂದ ಸಿದ್ದರಾಮಯ್ಯ
* ವಾಜಪೇಯಿಗಿಂತ ಮೋದಿ ದೊಡ್ಡ ಲೀಡ್ರ ? ಎಂದು ಪ್ರಶ್ನಿಸಿದ ಟಗರು
ಕೋಲಾರ, (ಮಾ.13): ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನೆಡೆ ಆಗಿರೋದು ನಿಜ. ಪ್ರಜಾಪ್ರಭುತ್ವದಲ್ಲಿ ಹಿನ್ನೆಡೆ, ಮುನ್ನೆಡೆ ಸಹಜ.1980 ರಲ್ಲಿ ಬಿಜೆಪಿ ಕೇವಲ ಎರಡು ಸ್ಥಾನ ಗೆದಿತ್ತು.ಈಗ 300 ಕ್ಕೂ ಹೆಚ್ಚು ಸ್ಥಾನ ಗೆದಿದ್ದಾರೆ. ಜನರ ತೀರ್ಪನ್ನು ನಾವು ಒಪ್ಪಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೋಲಾರದಲ್ಲಿ ಇಂದು(ಭಾನುವಾರ) ಮಾತನಾಡಿದ ಸಿದ್ದರಾಮಯ್ಯ, ಎಪಿಸಿಸಿ ಯಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮುಂದುವರೆಯುತ್ತಾರೆ. ಪ್ರಧಾನ ಮಂತ್ರಿ ಅಧ್ಯಕ್ಷರಾಗಿದ್ದಾಗ ನಾಯಕತ್ವ ಇರ್ಲಿಲ್ವಾ ? ವಾಜಪೇಯಿಗಿಂತ ಮೋದಿ ದೊಡ್ಡ ಲೀಡ್ರ ? ಮೋದಿ ಬಂದ ಮೇಲೆ ಇದ್ದಕ್ಕಿಂದಂತೆ ಬೆಳೆದು ನಿಂತಿದಿಯಾ ? ಎಂದು ಪ್ರಶ್ನಿಸಿದರು.
ಸೋಲಿನ ಬಗ್ಗೆ ಚರ್ಚಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಂಜಾಬ್ ನಲ್ಲಿ ನಮ್ಮ ತಪ್ಪಿನಿಂದ ಸೋತಿದ್ದೇವೆ ಎಂದು ಸಿದ್ದರಾಮಯ್ಯ ಸೋಲು ಒಪ್ಪಿಕೊಂಡರು.
ಇಬ್ರಾಹಿಂಗೆ ಸಿದ್ದು ಪರೋಕ್ಷವಾಗಿ ಟಾಂಗ್
ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಸಿಎಂ ಇಬ್ರಾಹಿಂ ಅವರ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಿಂದ ಅವರಿಗೆ ಅನ್ಯಾಯವಾಗಿಲ್ಲ. 2013 ರಲ್ಲಿ ಹಾಲಿ ಶಾಸಕರನ್ನು ಬಿಟ್ಟು ಇಬ್ರಾಹಿಂಗೆ ಟಿಕೆಟ್ ನೀಡಲಾಗಿತ್ತು. ಭದ್ರಾವತಿಯ ಸಂಗಮೇಶ್ ಗೆ ಟಿಕೆಟ್ ತಪ್ಪಿಸಿ ಕೊಟ್ಟಿದ್ವಿ. ಅದೊಂದೇ ಕ್ಷೇತ್ರದಲ್ಲಿ ಮಾತ್ರ ನಾವು ಹಾಲಿ ಶಾಸಕರಿಗೆ ಟಿಕೆಟ್ ನೀಡಿರಲಿಲ್ಲ. ಆಗ ಇಬ್ರಾಹಿಂ ಮೂರನೇ ಸ್ಥಾನಕ್ಕೆ ಹೋದ್ರು ಎಂದು ಇಬ್ರಾಹಿಂಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಬ್ಬರಿನ್ನೂ ಒಪ್ಪಿಸಿ ಟಿಕೆಟ್ ಕೊಡಿಸಿದ್ದೆ. ಸೋತ ಬಳಿಕ ಪ್ಲ್ಯಾನಿಂಗ್ ಬೋರ್ಡ್ ವೈಸ್ ಚೆರ್ಮೆನ್ ಮಾಡಿದ್ವಿ. ಅದು ಕ್ಯಾಬಿನೆಟ್ ರ್ಯಾಂಕ್ ನ ಅಧಿಕಾರಿ ಕೊಟ್ಟಿದ್ವಿ. ಅದಾದ ಬಳಿಕ ಅವರನ್ನು MLC ಮಾಡಿದ್ವಿ. ಕಾಂಗ್ರೆಸ್ ನಿಂದ ಅವರಿಗೆ ಏನೂ ಅನ್ಯಾಯ ಆಗಿದೆ. ವಿರೋಧ ಪಕ್ಷದ ನಾಯಕರ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷ ಬಿಟ್ಟಿದ್ದಾರೆ ಎಂದರು.
ದುಡ್ಡು ಹೆಚ್ಚಾಗಿ ಕೊಡಿ ಎಂದು ಸಿದ್ದರಾಮಯ್ಯನವರಿಗೆ ಕೇಳಿದ್ದೆ ಕೊಟ್ಟಿಲ್ಲ ಅಂತ ಇನ್ನೊಂದು ನೆಪ ಹೇಳ್ತಿದ್ದಾರೆ. ಹಾಗಾದ್ರೆ ಅಧಿಕಾರದಲ್ಲಿ ಇದ್ದಾಗ ಯಾಕೆ ಇಬ್ರಾಹಿಂ ಇದೆಲ್ಲಾ ಹೇಳಿಲ್ಲ ? ಪರಿಷತ್ ನಲ್ಲಿ ಇವರು ಯಾವ ವಿಚಾರಕ್ಕೂ ಕಿತ್ತಾಡಿಲ್ಲ.
ಅಲ್ಪಸಂಖ್ಯಾತರಿಗಾಗಿ 3 ಸಾವಿರ ಕೋಟಿ ಮೀಸಲಿತ್ತು, ಬಿಜೆಪಿ ಅವರು ಅದನ್ನು 880 ಕೋಟಿಗೆ ತಂದು ನಿಲ್ಲಿಸಿದ್ದಾರೆ. ಯಾವತದ್ರೂ ಪರಿಷತ್ ನಲ್ಲಿ ಈ ವಿಚಾರವಾಗಿ ಇಬ್ರಾಹಿಂ ಮಾತಾಡಿದ್ದಾರ ? ಅಲ್ಪಸಂಖ್ಯಾತರ ಪರವಾಗಿ ಅವರು ಇದುವರೆಗೂ ಮಾತಾಡಿಲ್ಲ ಎಂದು ಇಬ್ರಾಹಿಂಗೆ ತಿರುಗೇಟು ನೀಡಿದರು.
ಜನರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡ್ತಾರೆ. ಯಾರು CLP ಲೀಡರ್ ಆಗ್ಬೇಕು ಅಂತ MLA ಗಳು ತೀರ್ಮಾನ ಮಾಡ್ತಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ನನ್ನ ಕಂಡರೆ ಭಯ
ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ನನ್ನ ಕಂಡರೆ ಭಯ. ನಾನು ಎಲ್ಲಿ ಸ್ಪರ್ಧೆ ಮಾಡ್ತೇನೆ ಅನ್ನೋದು ಅವರಿಗೆ ಮುಖ್ಯವಾಗಿದೆ. ನನ್ನನು ಸೋಲಿಸೋದಕ್ಕೆ ಪ್ರಯತ್ನ ಮಾಡ್ತಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸೋಲಿಸಲು ಆಗಲಿಲ್ಲ. ಭಯದಿಂದ ನನ್ನ ಮೇಲೆ ಟಾರ್ಗೆಟ್ ಮಾಡ್ತಿದ್ದಾರೆ.
ಸುಮ್ ಸುಮ್ನೆ ಯಾರಾದ್ರೂ ಟಾರ್ಗೆಟ್ ಮಾಡ್ತಾರಾ? ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಯಾರು ಟಾರ್ಗೆಟ್ ಮಾಡ್ತಿಲ್ಲ ಎಂದು ಹೇಳಿದರು.
ಬಿಜೆಪಿಯ ಬಿ ಟೀಂ ಅಂದ್ರೆ ಅದು ಜೆಡಿಎಸ್. ಕಳೆದೆ ಬಾರಿ ಒಪ್ಪಂದ ಮಾಡಿಕೊಂಡು ಚುನಾವಣೆ ಮಾಡಿದ್ರು. ಈ ಬಾರಿ ಜೆಡಿಎಸ್ ನವರು ಏನು ಮಾಡ್ತಾರೋ ಗೊತ್ತಿಲ್ಲ. ಸುಮ್ನೆ JDS ಅಂತ ಹೆಸರು ಇಟ್ಕೊಂಡಿದ್ದಾರೆ. ಆದ್ರೆ ಯಾವತ್ತೂ ಅವರು ಸೆಕ್ಯುಲರಿಸಂ ರೀತಿ ನಡೆದುಕೊಂಡಿಲ್ಲ. 2006ರಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ಏನುಕ್ಕೆ ಮಾಡಿದ್ರು. ನಾನು ಹಿಂದುತ್ವಕ್ಕೆ ವಿರುದ್ಧ ಸೆಕ್ಯುಲರಿಸಂಗೆ ಪರ ಎಂದು ಜೆಡಿಎಸ್‌ಗೆ ಟಾಂಗ್ ಕೊಟ್ಟರು.