ಬೆಂಗಳೂರು, (ಏ.04): ಅನ್ನ ಭಾಗ್ಯ ಯೋಜನೆ ವಿಚಾರದ ಬಗ್ಗೆ ಮಾತನಾಡುವಾಗ ಸರ್ಕಾರಿ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ ಎಂದಿರುವೆ. ಅದು ಬೈಗುಳವೇ? ಮೊದಲು ಯಡಿಯೂರಪ್ಪ ಯತ್ನಾಳ್ ಗೆ ಬೈದು ಬಾಯಿ ಮುಚ್ಚಿಸಲಿ. ನನಗೆ ಬೈಯ್ಯೋದಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ನಲವತ್ತು ವರ್ಷದ ಅನುಭವವಿದೆ. ಇದು ಯಡಿಯೂರಪ್ಪ ಮನೆ ಹಣ ಅಲ್ಲ, ಸರ್ಕಾರದ ಹಣ ಅಂತ ಹೇಳೋದು ಅಸಂವಿಧಾನಿಕ ಪದವೇ ಎಂದು ಪ್ರಶ್ನಿಸಿದರು.

'ನೀವು ಸಿಎಂ ಆಗಿರಿ ಉಳಿದ ಎಲ್ಲ ಖಾತೆಯ ಜವಾಬ್ದಾರಿ ವಿಜಯೇಂದ್ರಗೆ ಕೊಡಿ'

ಜಾರಕಿಹೊಳಿ ಪ್ರಕರಣದ ಯುವತಿ ಮಾಜಿ ಸಚಿವ ಡಿ.ಸುಧಾಕರ್ ಜೊತೆ ಸಂಪರ್ಕ ಮಾಡಿರೋ ವಿಚಾರವಾಗಿ ಕೇಳಿದ ಪ್ರಶ್ನೆಗೆ ಆ‌ ವಿಚಾರ ಯಾವುದು ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರ ಮಾತನಾಡಲ್ಲ ಎಂದರು.

ಇನ್ನು ಇದೇ ವೇಳೆ ಕೊರೋನಾ ನಿಯಮ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇಲ್ಲಿಯವರೆಗೂ ವಿಪಕ್ಷದವರನ್ನ ಕರೆದು ಮಾತನಾಡಿಲ್ಲ. ನಾನೇ ಅವರಿಗೆ ಪತ್ರ ಬರೆದಿದ್ದೇನೆ. ಈವರೆಗೂ ನಮ್ಮನ್ನ ಕರೆದು ಮಾತನಾಡಿಲ್ಲ ಎಂದು ತಿಳಿಸಿದರು.

ಯುವತಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಎಸ್.ಐ.ಟಿ ಮೇಲೆ ನಂಬಿಕೆ ಇಲ್ಲ ಅಂದರೆ ಬೇರೆ ತನಿಖೆ ಮಾಡಲಿ. ನಾನು ಈ ಬಗ್ಗೆ ಸದನದಲ್ಲೂ ಪ್ರಸ್ತಾಪ ಮಾಡಿದ್ದೆ. ಎಸ್.ಐ.ಟಿ ಸರ್ಕಾರದ ಮುಷ್ಠಿಯಲ್ಲಿ ಇರಲಿದೆ. ಅದಕ್ಕಾಗಿ ಸಿಜೆ ತನಿಖೆ ನಡೆಸುವಂತೆ ಸೂಚಿಸಿದ್ದೆ ಎಂದು ಹೇಳಿದರು.