ಬೆಂಗಳೂರು, (ಫೆ.01): ನಾನು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಈ ಹಿಂದೆ ಮೂರು ಬಾರಿ "ಆತ್ಮನಿರ್ಭರ" ಬಜೆಟ್ ಘೋಷಿಸಿದ್ದರು. ಈಗ ನಿರ್ಮಲಾ ಅವರು "ಆತ್ಮ ಬರ್ಬಾದ್" ಬಜೆಟ್ ಕೊಟ್ಟಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಿರಾಶಾದಾಯಕವಾಗಿದೆ. ಆತ್ಮ ನಿರ್ಭರ್ ಭಾರತ್ ಬಜೆಟ್ ಅಲ್ಲ. ಇದು ಆತ್ಮ ಬರ್ಭರ ಬಜೆಟ್. ಕೋವಿಡ್ 19 ನಿಂದ ಆದ ಆರ್ಥಿಕ ಸಂಕಷ್ಟವನ್ನ ಈ ಬಜೆಟ್ ನಲ್ಲಿ ಸರಿದಾರಿಗೆ ತರ್ತಾರೆ ಎಂಬ ಭರವಸೆ ಇತ್ತು ಎಂದರು.

"

ಕೇಂದ್ರ ಬಜೆಟ್‌: ಕರ್ನಾಟಕಕ್ಕೆ ಯಾವುದೇ ಘೋಷಣೆ ಇಲ್ಲ, ಅಸಮಾಧಾನಗೊಂಡ MP

ಕೃಷಿಗೆ ಉತ್ತೃಜನ ನೀಡುವುದೇ ಆಗಿದ್ದರೆ ಕೃಷಿ ಸೆಸ್ ಬದಲು, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬಹುದಾಗಿತ್ತು. ಕೃಷಿ ಸೆಸ್ ವಸೂಲಿ ಮಾಡುದಾದರೆ, ಕೃಷಿ ಕಲ್ಯಾಣ ಕಾರ್ಯಕ್ರಮಗಳನ್ನ ಸರ್ಕಾರ ಘೋಷಿಸಬೇಕಾಗಿತ್ತು. ಆದ್ರೆ ಯಾವುದೇ ಕೃಷಿ ಕಲ್ಯಾಣ ಕಾರ್ಯಕ್ರಮಗಳು ಬಜೆಟ್ ನಲ್ಲಿ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿ ಸೆಸ್ ಹಾಕಲಾಗಿದೆ. ಕೃಷಿ ಯಂತ್ರೋಪಕರಣಗಳು, ರಾಸಾಯನಿಕ ಗೊಬ್ಬರ ಮೇಲೆ ಕೃಷಿ ಸೆಸ್ ಹಾಕಿದ್ದಾರೆ. ವಿದ್ಯುತ್ ಕ್ಷೇತ್ರವನ್ನ ಖಾಸಗಿಕರಣಕ್ಕೆ ಆದ್ಯತೆ ನೀಡಲಾಗಿದೆ. ರೈತರಿಗೆ ವಿದ್ಯುತ್ ಕಂಪನಿಗಳು ಉಚಿವ ವಿದ್ಯುತ್ ನೀಡಲು ಸಾಧ್ಯವೆ..? ವಿಮಾ ಕ್ಷೇತ್ರ ಖಾಸಗಿ ಬಂಡವಾಳ ಹೆಚ್ಚಳಕ್ಕೆ ಅವಕಾಶ ಮಾಡಲಾಗಿದೆ. ವಿಮಾ ಕ್ಷೇತ್ರ ಖಾಸಗಿ ಅವರ ಕೈಪಾಲಾಗಲಿದೆ ಎಂದು ಹೇಳಿದರು.