ನವದದೆಹಲಿ, (ಫೆ.01):  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಸೋಮವಾರ) 2021ನೇ ವರ್ಷದ ಮೊದಲ ಕೇಂದ್ರ ಬಜೆಟ್​ ಮಂಡನೆ ಮಾಡಿದರು.

ಕೊರೋನಾ ಸಂಕಷ್ಟದ ನಡುವೆ ಬಹುನಿರೀಕ್ಷಿತ ಕೇಂದ್ರ ಬಜೆಟ್​ ಮಂಡನೆಯಾಗಿದ್ದು, ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಮಧ್ಯಮ ವರ್ಗದ ಜನರಿಗೆ ಭಾರೀ ನಿರಾಸೆಯಾಗಿದೆ. ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ. 

"

ಚುನಾವಣಾ ಹೊಸ್ತಿಲಲ್ಲಿ ನಾಲ್ಕು ರಾಜ್ಯಗಳಿಗೆ ಬಂಪರ್, ರಸ್ತೆ ನಿರ್ಮಾಣಕ್ಕೆ 2.27 ಲಕ್ಷ ಕೋಟಿ!

ಇನ್ನು ಈ ಬಜೆಟ್ ಕಾಂಗ್ರೆಸ್ ರಾಜ್ಯಭಾ ಸದಸ್ಯ ಎಲ್‌ ಹನುಮಂತಯ್ಯ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದು, ಚುನಾವಣಾ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಲಾಗಿದೆ. ಎಲ್ಲಾ ರಾಜ್ಯಗಳಿಗೆ ಸಮಪಾಲು ಬರಬೇಕಿದೆ. ಕರ್ನಾಟಕಕ್ಕೆ ನಿರಾಶಾದಾಯಕ ಬಜೆಟ್ ಇದಾಗಿದೆ. ಚುನಾವಣಾ ಗಿಮಿಕ್ ಅನೇಕ ಕ್ಷೇತ್ರಗಳಲ್ಲಿ ತೋರಿಸಲಾಗಿದೆ. ಕರ್ನಾಟಕಕ್ಕೆ ಯಾವುದೇ ಘೋಷಣೆ ಮಾಡದೇ ಅನ್ಯಾಯ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಟ್ಟಾರೆ ಸಾಮಾನ್ಯ ಜನರಿಗೆ ಆಸೆ ಹುಟ್ಟಿಸುವ ಕೆಲಸವಾಗಿದೆ. ಆದ್ರೆ, ಅನುಕೂಲ ಇಲ್ಲ. ಸಣ್ಣ ಕೈಗಾರಿಕೆಗಳು ಮುಚ್ಚುವ ಸ್ಥಿತಿ ಇದೆ. ನಿರುದ್ಯೋಗ ಸಮಸ್ಯೆ ಇದೆ. ಎಂಎಸ್ ಎಂಇ ಮೇಲೆತ್ತುವ ಯಾವುದೇ ಯೋಜನೆ ಇಲ್ಲ. ಉದ್ಯೋಗ ನೀಡುವ ಯಾವುದೇ ಪ್ರಯತ್ನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಐಟಿ೦ಬಿಟಿಯವರು ಹಳ್ಳಿಗಳಿಗೆ ಹೋಗಿದ್ದಾರೆ. ಮನರೇಗಾ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.