ಮೋದಿ ಮಾಡೆಲ್ ಅಂದ್ರೆ ಖಾಲಿ ಚೊಂಬು ಮಾಡೆಲ್: ರಣದೀಪ್ ಸುರ್ಜೇವಾಲಾ
ಮೋದಿ ಮಾಡೆಲ್ ಅಂದ್ರೆ ಖಾಲಿ ಚೊಂಬು. ಮೋದಿ ಮಾಡೆಲ್ ಅಂದ್ರೆ ಚೊಂಬು ಮಾಡೆಲ್ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರು (ಏ.22): ಮೋದಿ ಮಾಡೆಲ್ ಅಂದ್ರೆ ಖಾಲಿ ಚೊಂಬು. ಮೋದಿ ಮಾಡೆಲ್ ಅಂದ್ರೆ ಚೊಂಬು ಮಾಡೆಲ್ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಖಾಲಿ ಚೊಂಬನ್ನು ತಲೆಕೆಳಗಾಗಿ ಪ್ರದರ್ಶಿಸಿ ಮಾತನಾಡಿದ ಅವರು, ಮೋದಿ ಬಳಿ ರಾಜ್ಯಕ್ಕೆ ಬರಬೇಕಿರುವ ಬರಗಾಲದ ಪರಿಹಾರ ಕೇಳಿದ್ದೇವೆ.
ನಾವು ಕೇಳುತ್ತಿರೋದು ಭಿಕ್ಷೆಯಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಆದರೆ, ಅವರು ಕೊಟ್ಟಿದ್ದೇನು?, ಖಾಲಿ ಚೊಂಬು ಎಂದು ಕಿಡಿಕಾರಿದರು. ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿ ಡಿಎನ್ಎ. ಬಿಜೆಪಿ 400 ಸೀಟನ್ನು ಕೇಳುತ್ತಿರೋದೇ ಸಂವಿಧಾನ ಬದಲಾಯಿಸಲು. ಬಿಜೆಪಿ ದಲಿತ, ರೈತ, ಮಹಿಳಾ ವಿರೋಧಿ ಡಿಎನ್ಎ ಹೊಂದಿದೆ. ಚುನಾವಣೆಯಾದ ನಂತರ ಕಾಂಗ್ರೆಸ್ ನವರು ಗ್ಯಾರಂಟಿ ನಿಲ್ಲಿಸುತ್ತಾರೆ ಅಂತ ಬಿಜೆಪಿ ನಾಯಕರು ಹೇಳುತ್ತಾರೆ.
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ. ಮುಂದಿನ ಐದು ವರ್ಷಗಳ ಕಾಲ ಈ ಯೋಜನೆಗಳನ್ನು ಮುಂದುವರಿಸುತ್ತೇವೆ. ಗ್ಯಾರಂಟಿ ಯೋಜನೆಯನ್ನು ವಿರೋಧಿಸುವ ಮೂಲಕ ಬಿಜೆಪಿ, ಜೆಡಿಎಸ್ ನಾಯಕರು 6.50 ಕೋಟಿ ಜನರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ನಾಯಕರು ಕೋಟಿಗಟ್ಟಲೆ ಹಣವನ್ನು ಕಾರಿನಲ್ಲಿ ಸಾಗಿಸುತ್ತಿದ್ದಾರೆ. ಇದಕ್ಕೆ ವಿಜಯೇಂದ್ರ, ಅಶೋಕ್ ಉತ್ತರ ನೀಡಬೇಕು ಎಂದು ಆರೋಪಿಸಿದರು.
ಅಟಲ್‌ರಂತೆ ನರೇಂದ್ರ ಮೋದಿ ಕೂಡ ಸೋಲುತ್ತಾರೆ: ಮುಖಾಮುಖಿ ಸಂದರ್ಶನದಲ್ಲಿ ಸುರ್ಜೇವಾಲಾ
ನಾಯಕತ್ವ ಬದಲಾವಣೆ ಊಹಾಪೋಹ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಕೇವಲ ಊಹಾಪೂಹ. ವಿರೋಧ ಪಕ್ಷಗಳು ಉತ್ಪ್ರೇಕ್ಷೆಯ ಹೇಳಿಕೆಯನ್ನು ನೀಡುತ್ತಾ ಭ್ರಮೆಯಲ್ಲಿ ಮಾತನಾಡುತ್ತಿವೆ. ಇದು ನಂಬುವಂತದ್ದಲ್ಲ, ಯಾರೂ ನಂಬಬೇಡಿ. ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು, ನಾಯಕರು ನೀಡಿರುವ ಹೇಳಿಕೆಗಳು ವೈಯಕ್ತಿಕ ಹಾಗೂ ಸಂದರ್ಭಾನುಸಾರವಾಗಿವೆಯೇ ಹೊರತು ಅದಕ್ಕೆ ಬೇರೆನೂ ಅರ್ಥ ಕಲ್ಪಿಸಬಾರದು ಎಂದರು.