Asianet Suvarna News Asianet Suvarna News

ಸಿಎಂ ಬೊಮ್ಮಾಯಿಯದ್ದು ದೇಶದ ಅತೀ ಭ್ರಷ್ಟ ಸರ್ಕಾರ: ರಣದೀಪ್‌ ಸಿಂಗ್‌ ಸುರ್ಜೇವಾಲಾ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ದೇಶದ ಅತಿದೊಡ್ಡ ಭ್ರಷ್ಟಸರ್ಕಾರ ಆಗಿದೆ. ಇದೊಂದು ನಲವತ್ತು ಪಸೆಂರ್‍ಟ್‌ ಸರ್ಕಾರ ಆಗಿದೆ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

Congress Leader Randeep Singh Surjewala Outraged Against CM Basavaraj Bommai Government gvd
Author
First Published Jan 18, 2023, 1:23 PM IST

ಹೊಸಪೇಟೆ (ಜ.18): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ದೇಶದ ಅತಿದೊಡ್ಡ ಭ್ರಷ್ಟಸರ್ಕಾರ ಆಗಿದೆ. ಇದೊಂದು ನಲವತ್ತು ಪಸೆಂರ್‍ಟ್‌ ಸರ್ಕಾರ ಆಗಿದೆ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು. ಕಾಂಗ್ರೆಸ್‌ನ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. 40 ಪರ್ಸೆಂಟ್‌ ಕಮಿಷನ್‌ ಕೊಡಲು ಆಗದೇ ಬೆಳಗಾವಿಯಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೊಂದು ಪೇ ಸಿಎಂ ಸರ್ಕಾರ ಆಗಿದೆ. ಸಿಎಂ ಹುದ್ದೆ .2500 ಕೋಟಿಗೆ ನೀಡಲಾಗುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದ್ದಾರೆ ಎಂದರು.

ಈ ಸರ್ಕಾರದಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಿಎಂ ಬೊಮ್ಮಾಯಿ ಸರ್ಕಾರ ಹೊಣೆಯಾಗಿದೆ. ಮೃತಪಟ್ಟಗುತ್ತಿಗೆದಾರರ ಕುಟುಂಬಗಳ ಪರ ಕಾಂಗ್ರೆಸ್‌ ನಿಂತಿದೆ ಎಂದರು. ವೇಶ್ಯಾ ಗೃಹ ನಡೆಸುವ ಸ್ಯಾಂಟ್ರೋ ರವಿ ಸರ್ಕಾರ ನಡೆಸುತ್ತಾನೆ ಎಂದರೇ ಹೇಗೆ? ಸ್ಯಾಂಟ್ರೋ ರವಿ ಎಸ್ಪಿ ಮಟ್ಟದ ಅಧಿಕಾರಿಗಳ ವರ್ಗಾವಣೆ ಮಾಡ್ತಾನೆ. ಈ ಸರ್ಕಾರ ಅಧೋಗತಿಗೆ ತಲುಪಿದೆ ಎಂದು ದೂರಿದರು. ಕೇಂದ್ರದ ಗೃಹ ಮಂತ್ರಿ ಅಮಿತ್‌ ಶಾ ಗುಂಡಾ ಎಂದು ಸಿ.ಪಿ.ಯೋಗಿಶ್ವರ ಹೇಳ್ತಾರೆ. ಬಿಜೆಪಿ ರೌಡಿಗಳ ಹಾಗೂ ಬದ್ಮಾಶ್‌ಗಳ ಪಾರ್ಟಿ ಆಗಿದೆ ಎಂದರು.

'ಯುವ ಸಂಭಾಷಣೆ ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ': ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ

ಬೆಂಕಿ ಹಚ್ಚಲು ಯತ್ನಿಸಿದ ಮಂತ್ರಿ ಹೊರಗೆ!: ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಎಸ್ಸಿ ಕುಟುಂಬವೊಂದರ ಸದಸ್ಯರ ಮೇಲೆ ಬೆಂಕಿ ಹಚ್ಚಲು ಯತ್ನಿಸಿದರು. ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹೀಗಿದ್ದರೂ ಆನಂದ ಸಿಂಗ್‌ ಹೊರಗೆ ಓಡಾಡುತ್ತಿದ್ದಾರೆ ಎಂದರು. ಆನಂದ ಸಿಂಗ್‌ ಬೇಲೆಕೇರಿ ಅದಿರು ಪ್ರಕರಣದಲ್ಲೂ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಪರಿಣಾಮ ಒಂದು ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. 

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೇ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ, ವೈಜ್ಞಾನಿಕ ಗಣಿಗಾರಿಕೆಗೆ ಒತ್ತು ನೀಡುತ್ತೇವೆ. ಸುಪ್ರೀಂ ಕೋರ್ಚ್‌ಗೂ ಮನವರಿಗೆ ಮಾಡಿ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಮಾಡುತ್ತೇವೆ. ಈ ಮೂಲಕ ಮೈನಿಂಗ್‌ ಮಾಫಿಯಾ ಮಟ್ಟಹಾಕುತ್ತೇವೆ ಎಂದರು. ಹೊಸಪೇಟೆಯ ಜನರ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ. ಮರಿಯಮ್ಮನಹಳ್ಳಿ ಭಾಗದ ಕುಡಿಯುವ ನೀರಿನ ಸಮಸ್ಯೆ ಕೂಡ ಪಹರಿಸುತ್ತೇವೆ. ತುಂಗಭದ್ರಾ ಜಲಾಶಯದ ನೀರಿನಿಂದ ಏತ ನೀರಾವರಿಗಳನ್ನು ಕೈಗೊಳ್ಳುತ್ತೇವೆ ಎಂದರು.

ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ: ಜ.19ರಂದು ಹಾವೇರಿಯಲ್ಲಿ ಜರುಗುವ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನ್ಯಾಯಕರು ಪಾಲ್ಗೊಳ್ಳುವವರಿದ್ದು, ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲ ಕಾಂಗ್ರೆಸ್‌ನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್‌ ಮುಖಂಡ ಸೋಮಣ್ಣ ಬೇವಿನಮರದ ಕೋರಿಕೊಂಡರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ಕೊಟ್ಟಸರ್ಕಾರ ಎಲ್ಲ ಅಂದರೆ 159 ಭರವಸೆಗಳನ್ನು ಈಡೇರಿಸಿದಂತ ಏಕೈಕ ಮುಖ್ಯಮಂತ್ರಿ ಅಂದರೆ ಅದು ಸಿದ್ದರಾಮಯ್ಯ ಸರ್ಕಾರ ಅದನ್ನು ಹೊರತುಪಡಿಸಿ 30 ಹೆಚ್ಚುವರಿ ಭರವಸೆಗಳನ್ನು ಕೂಡಾ ಈಡೇರಿಸಿದ್ದಾರೆ ಎಂದರು.

Dharwad: ಬಿರಿಯಾನಿ, ಸಿಗರೇಟ್‌ಗಾಗಿ ಟವರ್‌ ಏರಿದ ಭೂಪ: ಮೂರೂವರೆ ತಾಸು ಪೊಲೀಸರು ಹೈರಾಣು

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಜಸಾಮಾನ್ಯರಿಗೆ ಬರಿ ಸುಳ್ಳು ಭರವಸೆಗಳನ್ನು ಕೊಟ್ಟು ಅವುಗಳಲ್ಲಿ ಒಂದು ಭರವಸೆಯನ್ನು ಪೂರೈಸದ ಕೇಂದ್ರ ಮತ್ತು ರಾಜ್ಯ ಸರ್ಕಾರ, ನಾವು ಕಂಡ ಅತ್ಯಂತ ದುರ್ಬಲ, ಭ್ರಷ್ಟಸರ್ಕಾರ ಎಂದರು. ರಾಜ್ಯದಲ್ಲಿ ಎಂದೆಂದೂ ಕಾಣದ ದರಿದ್ರ ಮುಖ್ಯಮಂತ್ರಿಯನ್ನು ಬಿಜೆಪಿಯವರು ಮಾಡಿದ್ದಾರೆ. ಈ ರಾಜ್ಯದ 6.5 ಕೋಟಿ ಜನತೆ ಮನಸ್ಸಿಗೆ ಮತ್ತು ಮರ್ಯಾದೆಗೆ ಧಕ್ಕೆ ತರುವಂತ ಕೆಲಸವನ್ನು ಮಾಡಿದ್ದಾರೆ ಎಂದರು. ಯಸೀರಖಾನ ಪಠಾಣ ಮಾತನಾಡಿ, ಮುಖ್ಯಮಂತ್ರಿಗಳ ಪಕ್ಷದವರೆ ಅವರ ಕ್ಷೇತ್ರಕ್ಕೆ ಬಂದು ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಹೋದರು ಅವರ ಮೇಲೆ ಶಿಸ್ತು ಕ್ರಮ ಜರುಗಿಸುವ ತಾಕತ್ತು ಇಲ್ಲದೆ ಅಸಮರ್ಥ ಮುಖ್ಯಮಂತ್ರಿ ಬೊಮ್ಮಾಯಿರವರಾಗಿದ್ದಾರೆ ಎಂದರು.

Follow Us:
Download App:
  • android
  • ios