* ಆಸ್ಪತ್ರೆಯಿಂದ ಶವ ಕೊಡಿಸಲು ಬಂಧುಗಳು ಕೇಳ್ತಿದ್ದಾರೆ* ಖಾಸಗಿ ಆಸ್ಪತ್ರೆಗಳ ಧನದಾಹ ಬಗ್ಗೆ ಮಾಜಿ ಸ್ಪೀಕರ್ ಚರ್ಚೆ* ಸರ್ಕಾರದವರು ಖಾಸಗಿ ಆಸ್ಪತ್ರೆಯವರಿಂದ ಶವ ಕೊಡಿಸೋಕೆ ವ್ಯವಸ್ಥೆ ಮಾಡಿರಲಿಲ್ಲ
ಬೆಂಗಳೂರು(ಮಾ.23): ಖಾಸಗಿ ಆಸ್ಪತ್ರೆಗಳ ಧನದಾಹದ ಬಗ್ಗೆ ಸದನದಲ್ಲಿ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್(Ramesh Kumar), ‘ಶವ ಕೊಡಿಸಿ ಎಂದು ನಮ್ಮ ಬಳಿ ಸಂಬಂಧಿಕರು ಬರುವಂತಹ ವ್ಯವಸ್ಥೆ ಇರುವಾಗ ಈ ಸೌಭಾಗ್ಯಕ್ಕೆ ನಾನು ಶಾಸಕನಾಗಿ ಬದುಕಿರಬೇಕಾ ಸಭಾಧ್ಯಕ್ಷರೇ’ ಎಂದು ಮಾರ್ಮಿಕವಾಗಿ ನುಡಿದರು.
ಇಲಾಖೆಗಳ ಮೇಲಿನ ಬೇಡಿಕೆಗಳ ಚರ್ಚೆಯಲ್ಲಿ ಮಾತನಾಡುತ್ತಿದ್ದ ರಮೇಶ್ ಕುಮಾರ್ ಅವರು, ಹಿಂದಿನ ಕಾಂಗ್ರೆಸ್(Congress) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ(Siddaramaiah) ಅವರ ಮೇಲೆ ಒತ್ತಡ ತಂದು ಖಾಸಗಿ ಆಸ್ಪತ್ರೆಗಳಲ್ಲಿ ಶವ ನೀಡಲು ಹಣ ಕೇಳಿದರೆ ಅಂತಹವರ ವಿರುದ್ಧ ಕೇಸು ಹಾಕಿ ಬಂಧಿಸಬೇಕು ಎಂದು ಕಾನೂನು ತರಲಾಯಿತು. ಆದರೆ, ನಂತರ ನಮ್ಮ ಸರ್ಕಾರ ಬಿದ್ದುಹೋಯಿತು. ಮುಂದೆ ಅಧಿಕಾರಕ್ಕೆ ಬಂದವರಿಂದ ಅದು ಅನುಷ್ಠಾನ ಆಗಲಿಲ್ಲ. ಇವತ್ತಿಗೂ ಹಣ ಕೊಟ್ಟು ಶವ ತೆಗೆದುಕೊಂಡು ಹೋಗುವ ಪರಿಸ್ಥಿತಿ ಮುಂದುವರೆದಿದೆ. ಕೊರೊನಾ ಸಮಯದಲ್ಲೂ ಇದೇ ಆಯ್ತು. ಇದರಿಂದ ನೊಂದು ಹೈಕೋರ್ಟ್‌ನಲ್ಲಿ ನಾನು ದಾವೆ ಹೂಡಿದ್ದೆ. ಅಲ್ಲಿಯವರೆಗೂ ಸರ್ಕಾರದವರು ಖಾಸಗಿ ಆಸ್ಪತ್ರೆಯವರಿಂದ ಶವ ಕೊಡಿಸೋಕೆ ವ್ಯವಸ್ಥೆ ಮಾಡಿರಲಿಲ್ಲ. ಹಿಂದಿನ ಸರ್ಕಾರದಲ್ಲಿ ಮಾಡಿದ ಕಾನೂನು ಹೊಸ ಸರ್ಕಾರದ ಜನಪ್ರತಿನಿಧಿಗಳಿಗೆ ಗೊತ್ತಿಲ್ಲದಿದ್ದರೂ ಅಧಿಕಾರಿಗಳಿಗೆ ಗೊತ್ತಿರಲಿಲ್ವಾ? ಯಾಕೆ ಶವ ಕೊಡಿಸಲು ವ್ಯವಸ್ಥೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
Karnataka Politics : ಅತ್ಯಾಚಾರವನ್ನು ಎಂಜಾಯ್ ಮಾಡಿ ಎಂದ ಕೈ ಶಾಸಕನಿಗೆ ಮಹತ್ವದ ಹೊಣೆ
ಅರಣ್ಯ ಇಲಾಖೆ ಆದಾಯ 47 ಲಕ್ಷ ರು.!:
ಅರಣ್ಯ ಇಲಾಖೆಯಲ್ಲಿನ(Forest Department) ಅವ್ಯವಸ್ಥೆ, ವೈಫಲ್ಯಗಳನ್ನು ಇಂಚಿಂಚಾಗಿ ತೆರೆದಿಟ್ಟರಮೇಶ್ ಕುಮಾರ್, ರಾಜ್ಯದಲ್ಲಿ ಒಟ್ಟು 45.49 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಅರಣ್ಯ ಅಭಿವೃದ್ಧಿ ನಿರ್ವಹಣೆಗೆ ಸರ್ಕಾರ ಪ್ರತೀ ವರ್ಷ ಸಾವಿರಾರು ಕೋಟಿ ರು. ಖರ್ಚು ಮಾಡುತ್ತಿದೆ. ಆದರೆ, ಕಳೆದ ಮೂರು ವರ್ಷದಲ್ಲಿ ಈ ಇಲಾಖೆಯಿಂದ ಸರ್ಕಾರಕ್ಕೆ ಬಂದ ಆದಾಯ ಕೇವಲ 47 ಲಕ್ಷ ರು.ಗಳು ಮಾತ್ರ ಎಂದು ಅರಣ್ಯ ಇಲಾಖೆಯೇ ನೀಡಿರುವ ಸತ್ಯವನ್ನು ಸದನದ ಮುಂದಿಟ್ಟರು.
ಸರ್ಕಾರದ ಯಾವ ಶಾಸನಗಳೂ ಅರಣ್ಯ ಇಲಾಖೆಗೆ ಅನ್ವಯಿಸುವುದಿಲ್ಲ ಎನ್ನುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ನೀಲಗಿರಿ, ಅಕೇಶಿಯಾ ನಿಷೇಧಿಸಿದ್ದರೂ ಕೋಲಾರದಲ್ಲೇ 1344 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ನೀಲಗಿರಿ ಬೆಳೆಸಲಾಗಿದೆ. ಇದನ್ನು ಬಿಟ್ಟರೆ 152 ಹೆಕ್ಟೇರ್‌ನಲ್ಲಿ ಬಿದಿರು ಬೆಳೆಸಿರುವುದೇ ಅರಣ್ಯ ಅಧಿಕಾರಿಗಳ ದೊಡ್ಡ ಸಾಧನೆ ಎಂದು ಕಿಡಿಕಾರಿದರು. ಜತೆಗೆ ಕೃಷಿ, ಸಹಕಾರ ಮತ್ತಿತರ ಇಲಾಖೆಗಳ ಬಗ್ಗೆ ಮಾತನಾಡಿ ಹಲವು ಸಲಹೆ ನೀಡಿದರು.
Ramesh Kumar Controversy : ರಮೇಶ್ ಕುಮಾರ್ ರಾಜೀನಾಮೆಗೆ ಆಗ್ರಹ
ರಮೇಶ್ ಕುಮಾರ್ ಒಬ್ಬ ಗುಳ್ಳೆನರಿ, ಸುಧಾಕರ್ ವಾಗ್ದಾಳಿ!
ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ (Kochimul) ವಿಭಜನೆ (Spilt) ವಿಚಾರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr.K.Sudhakar)ಹಾಗೂ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ನಡುವೆ ವಾಕ್ಸಮರ ಮುಂದುವರಿದಿದೆ. ಶನಿವಾರ ಚಿಕ್ಕಬಳ್ಳಾಪುರದಲ್ಲಿ (Chikkaballapur) ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಧಾಕರ್, ರಮೇಶ್ ಕುಮಾರ್ ಒಬ್ಬ ಗುಳ್ಳೆನರಿ ಎಂದು ವಾಗ್ದಾಳಿ ನಡೆಸಿದ್ದರು.
ಫೆ. 19 ರಂದು ಚಿಕ್ಕಬಳ್ಳಾಪುರದ ತಾಲೂಕಿನ ಹೊಸಗುಡ್ಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಧಾಕರ್ ಕೋಚಿಮುಲ್ ವಿಭಜನೆ ವಿರುದ್ಧ ಹೈಕೋರ್ಟ್ ನಿಂದ ಸ್ಟೇ ಆರ್ಡರ್ ತಂದಿರುವ ವಿಚಾರದ ಬಗ್ಗೆ ಮಾತನಾಡಿದರು. "ರಮೇಶ್ ಕುಮಾರ್ ಗುಳ್ಳೆ ನರಿ ಇದ್ದ ಹಾಗೆ. ಜಗತ್ತಿಗೆ ತಾವೇ ದೊಡ್ಡ ಮಹಾಬ್ರಹಸ್ಮತಿ ಅಂತಾ ಅಂದುಕೊಂಡಿದ್ದಾರೆ. ಕೋಚಿಮುಲ್ ವಿಭಜನೆಯ ಕುರಿತಾಗಿ ಹೈಕೋರ್ಟ್ ನಿಂದ ಸ್ಟೇ ತಂದಿದ್ದಾರೆ' ಎಂದು ಹೇಳಿದ್ದರು.
