ಅಧಿಕಾರದಿಂದ ಪ್ರಧಾನಿ ಮೋದಿ ಕೆಳಗಿಳಿಸುವದೇ ನಮ್ಮ ಗುರಿ: ರಕ್ಷಾ ರಾಮಯ್ಯ

ಪ್ರಧಾನಮಂತ್ರಿ ಸ್ಥಾನದಿಂದ ಮೋದಿ ಕೆಳಗಿಳಿಸೋದು ನಮ್ಮ ಗುರಿ. ಆ ಸ್ಥಾನದಲ್ಲಿ ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಕೂರುವಂತಾಗಬೇಕು. ಇಂತಹ ಆಸೆ ಯುವಕರಿಗಿದೆ. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ತಿಳಿಸಿದರು. 

Congress Leader Raksha Ramaiah Slams On PM Narendra Modi gvd

ಚಿಕ್ಕಬಳ್ಳಾಪುರ (ಆ.19): ಪ್ರಧಾನಮಂತ್ರಿ ಸ್ಥಾನದಿಂದ ಮೋದಿ ಕೆಳಗಿಳಿಸೋದು ನಮ್ಮ ಗುರಿ. ಆ ಸ್ಥಾನದಲ್ಲಿ ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಕೂರುವಂತಾಗಬೇಕು. ಇಂತಹ ಆಸೆ ಯುವಕರಿಗಿದೆ. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ತಿಳಿಸಿದರು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ ಏರ್ಪಡಿಸಿದ್ದ ಯುವ ಸಂವಾದ ಸಮಾವೇಶದಲ್ಲಿ ಮಾತನಾಡಿ, ದೇಶದ ಜನತಂತ್ರ ವ್ಯವಸ್ಥೆ ಬಲಿಷ್ಠವಾಗಿಸಲು, ಪ್ರಜಾ ಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕಾದರೆ ಯುವ ಶಕ್ತಿ ತಪ್ಪದೆ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಮುಖ್ಯಎಂದರು.

ಯುವಕರು ರಾಜಕೀಯಕ್ಕೆ ಬರಬೇಕು: ರಾಜಕಾರಣಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಇದಕ್ಕಾಗಿಯೇ ದಿ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರು ಮತದಾನ ವಯಸ್ಸನ್ನು 21ವರ್ಷದಿಂದ 18 ವರ್ಷಕ್ಕಿಳಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಬೇರಿ ಭಾರಿಸಲಿದ್ದು ದೇಶದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯಲಿದೆ ಎಂದರು.

ನೈಸ್‌ ಜತೆ​ ಡಿಕೆ ಸಹೋ​ದ​ರರ ವ್ಯವ​ಹಾ​ರ ದಾಖ​ಲೆ​ಗ​ಳಿವೆ: ಮಾಜಿ ಶಾಸಕ ಮಂಜುನಾಥ್‌ ಆರೋಪ

ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಚಿಕ್ಕಬಳ್ಳಾಪುರವನ್ನು ಬೆಂಗಳೂರಿನ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆಯೇ ಹೊರತು, ಸಿಂಗಾಪುರ ಮಾಡುವುದಿಲ್ಲ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಾನವ ಸಂಪನ್ಮೂಲ ಇರುವುದನ್ನು ಮನಗಂಡಿದ್ದು ಹೆಚ್ಚಿನ ಕೈಗಾಕೆಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ ಯುವಕರಿಗೆ, ಸ್ಥಳೀಯರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತೇವೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನಾನು ಸಹ ಟಿಕೆಟ್‌ ಆಕಾಂಕ್ಷಿ ಯಾಗಿದ್ದೇನೆ. ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆಂದರು.

ಡಿಜಿಟಲ್‌ ಪ್ಲಾಟ್‌ಫಾರಂ ಬಳಸಿ: ಜಿಲ್ಲೆಯ ಯುವ ಮತದಾರರರು, ಕಾಲೇಜು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಧ್ವನಿಯಾಗಲು ಡಿಜಿಟಲ್‌ ಪ್ಲಾಟ್‌ಫಾರಂನಲ್ಲಿ ಅವಕಾಶ ನೀಡಲಾಗಿದೆ.ಮೊಬೈಲ್‌ ಬಳಸಿಕೊಂಡು ಅಲ್ಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾ‌ನ್‌ ಮಾಡುವ ಮೂಲಕ ಸಮಸ್ಯೆಗನ್ನು ದಾಖಲಿಸಬಹುದು. ಇದಕ್ಕೆ ಎಂ.ಎಸ್‌.ರಾಮಯ್ಯ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಪರಿಹಾರ ನೀಡಲಾಗುವುದು ಎಂದರು. ಶಾಸಕ ಪ್ರದೀಪ್‌ ಈಶ್ವರ್‌ ಮಾತನಾಡಿ, ರಾಜಕಾರಣದಲ್ಲಿ ಎಲ್ಲರೂ ಕೆಟ್ಟವರು ಇರುವುದಿಲ್ಲ, ಅಲ್ಲಿ ನನ್ನಂತಹ ಒಳ್ಳೆಯವರೂ ಇರುತ್ತಾರೆ. ಮುಂಬರುವ ದಿನಗಳಲ್ಲಿ ಯುವಕರಿಗೆ ರಾಜಕಾರಣದಲ್ಲಿ ಹೆಚ್ಚಿನ ಜವಾಬ್ದಾರಿಗಳು ದೊರೆಯುವ ಕಾರಣ ಯುವಕರು ರಾಜಕಾರಣಕ್ಕೆ ಬರಬೇಕು.ಅದಕ್ಕೂ ಮೊದಲು ಒಳ್ಳೆಯ ಶಿಕ್ಷಣ ಪಡೆದುಕೊಳ್ಳಿ ಎಂದರು.

ಉದ್ಯೋಗದಾತರಾಗಿ: ನನ್ನ ಬಳಿ ಕೆಲಸ ಕೇಳಿಕೊಂಡು ಬರುವ ಯುವಕರಿಗೆ ನಾನು ಹೇಳುವುದಿಷ್ಟೆ. ಕೆಲಸಕ್ಕೆ ಸೇರಿದರೆ ಏನೂ ಮಾಡಲಾಗುವುದಿಲ್ಲ, ನೀವೇ ಕೆಲಸ ಕೊಡುವಂತೆ ಬೆಳೆದರೆ ನೀವು ಇತರರಿಗೆ ಕೆಲಸ ಕೊಡಬಹುದು. ನನಗೆ ಇಂಗ್ಲಿಷ್‌ ಸರಿಯಾಗಿ ಬರುವುದಿಲ್ಲ ಎಂದು ಯಾರೂ ಕೆಲಸ ಕೊಡಲಿಲ್ಲ. ಆಗ ನಾನೇ ಸಂಸ್ಥೆ ಕಟ್ಟುವ ಮೂಲಕ ಈಗ 400 ಜನಕ್ಕೆ ಕೆಲಸ ಕೊಟ್ಟಿದ್ದೇನೆ. ಇಂಗ್ಲಿಷ್‌ ಇರೋದೆ ತಪ್ಪಾಗಿ ಮಾತನಾಡಲು, ಕನ್ನಡ ಇರೋದು ಸರಿಯಾಗಿ ಮಾತನಾಡಲು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕೌನ್ಸೆಲಿಂಗ್‌ ಮೂಲಕ ವರ್ಗಾವಣೆಯಿಂದ ಸರ್ಕಾರದ ಇಮೇಜ್‌ ಹೆಚ್ಚಳ: ಬಸವರಾಜ ಹೊರಟ್ಟಿ

ಮತದಾನ ಸಂವಿಧಾನ ಬದ್ದ ಹಕ್ಕು. ಅದರ ಮೂಲಕವೇ ನಾನು ಎಂಎಲ್‌ಎ ಆಗಿರೋದು. ಯುವಜನತೆ ತಪ್ಪದೆ ಮತದಾನ ಮಾಡಿ, ಕ್ಷೇತ್ರದ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗಣಪತಿ ಹಬ್ಬಕ್ಕೆ ಒಬ್ಬ ಅಣ್ಣನಾಗಿ ಹೊಸ ಬಟ್ಟೆಯನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ.ನಿಮಗೆ ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಹೇಳಿಕೊಳ್ಳಿ, ತಪ್ಪದೆ ಅದನ್ನು ನಿವಾರಿಸುವೆ. ಇಲ್ಲಿರುವ ವಿದ್ಯಾರ್ಥಿಗಳು ಚೆನ್ನಾಗಿ ಓದಿ,ಒಂದು ಗುರಿಯಿಟ್ಟುಕೊಳ್ಳಿ, ಕಷ್ಟಪಟ್ಟು ಇಷ್ಟಪಟ್ಟು ಓದಿ. ಫಲಿತಾಂಶದ ದಿನ ಇಡೀ ಕರ್ನಾಟಕ ನಿಮ್ಮನ್ನು ಓದಬೇಕು ಹಾಗೆ ಓದಿ ಎಂದು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಎಂಎಸ್‌ ರಾಮಯ್ಯ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

Latest Videos
Follow Us:
Download App:
  • android
  • ios