Asianet Suvarna News Asianet Suvarna News

Mysuru: ಸಿದ್ದರಾಮಯ್ಯ ಜನಪರ ಕಾರ‍್ಯಕ್ರಮಗಳಿಗೆ ಮಲ್ಲಿಕಾರ್ಜುನ ಖರ್ಗೆ ಪರಾಕ್‌

ಆಹಾರ ಭದ್ರತಾ ಕಾಯಿದೆ ಜಾರಿಗೆ ಬಂದ ಬಳಿಕ ಮೊಟ್ಟಮೊದಲ ಬಾರಿಗೆ ‘ಅನ್ನಭಾಗ್ಯ’ ಯೋಜನೆಯನ್ನು ಸಿದ್ದರಾಮಯ್ಯ ಕರ್ನಾಟಕದಲ್ಲಿ ಜಾರಿಗೆ ತಂದವರು. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದ ಮುಖ್ಯಮಂತ್ರಿ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Congress Leader Mallikarjun Kharge Praised Siddaramaiah At Mysuru gvd
Author
Bangalore, First Published Jul 24, 2022, 2:59 PM IST

ಮೈಸೂರು (ಜು.24): ಆಹಾರ ಭದ್ರತಾ ಕಾಯಿದೆ ಜಾರಿಗೆ ಬಂದ ಬಳಿಕ ಮೊಟ್ಟಮೊದಲ ಬಾರಿಗೆ ‘ಅನ್ನಭಾಗ್ಯ’ ಯೋಜನೆಯನ್ನು ಸಿದ್ದರಾಮಯ್ಯ ಕರ್ನಾಟಕದಲ್ಲಿ ಜಾರಿಗೆ ತಂದವರು. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದ ಮುಖ್ಯಮಂತ್ರಿ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ಕಲಾಮಂದಿರದಲ್ಲಿ ಜನಮನ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ‘ಸಿದ್ದರಾಮಯ್ಯ ಆಡಳಿತ: ನೀತಿ ನಿರ್ಧಾರ’ ಗ್ರಂಥ ಬಿಡುಗಡೆ ಸಮಾರಂಭ ಹಾಗೂ ಸಂವಾದ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ಪರವಾಗಿ ಇರುವವರು ಮಾತ್ರ ಕೆಲಸ ಮಾಡುತ್ತಾರೆ. ಆಂಧ್ರಪ್ರದೇಶ ಬಿಟ್ಟರೆ ಕರ್ನಾಟಕದಲ್ಲಿ ಮಾತ್ರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಸಿದ್ದರಾಮಯ್ಯ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋನಿಯಾ ವಿಚಾರಣೆ ಕಾರಣ ಖರ್ಗೆ 80ನೇ ಜನ್ಮದಿನ ಆಚರಣೆ ಇಲ್ಲ

ಸಿದ್ಧಾಂತದಲ್ಲಿ ಉದಾರತೆ ಇದ್ದವರು ಸಿದ್ದರಾಮಯ್ಯ ಅವರನ್ನು ಬಿಟ್ಟು ಓಡಿ ಹೋದರು. ಈಗ ಐದು ರೂಪಾಯಿಗೆ ಹೋಗಿ ಕೈಕಟ್ಟಿನಿಂತಿರುತ್ತಾರೆ. ನಮ್ಮ ತತ್ತ$್ವ, ಸಿದ್ಧಾಂತಕ್ಕೆ ಬೆಂಬಲ ಸಿಗಲಿಲ್ಲ ಎಂಬ ಬೇಸರವಿದೆಯೇ ಹೊರತು ನಮಗೆ ಸೋಲಿನ ಬಗ್ಗೆ ಚಿಂತೆ ಇಲ್ಲ. ಬುದ್ಧಿವಂತರು, ಜನಪರ ಸಿದ್ಧಾಂತ, ಸಂವಿಧಾನ ಪರವಾಗಿ ಇರುವವರನ್ನು ಮತದಾರರು ಸೋಲಿಸಿ, ಸಿದ್ಧಾಂತದ ವಿರುದ್ಧ ಇರುವವರನ್ನು ಪ್ರೋತ್ಸಾಹಿಸಿ ರಾಜಕೀಯ ಶಕ್ತಿ ತುಂಬುತ್ತಿದ್ದಾರೆ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದ ಖರ್ಗೆ, ಸಿದ್ದರಾಮಯ್ಯ ಅವರ ಕಾಲದ ಆಡಳಿತವನ್ನು ಒಪ್ಪಿಕೊಂಡು ಬೇರೆಯವರಿಗೆ ಹೇಳದಿದ್ದರೆ ಪ್ರಯೋಜನ ಆಗುವುದಿಲ್ಲ ಎಂದು ಅವರು ತಿಳಿಸಿದರು.

450 ಪುಟಗಳ ಬೃಹತ್‌ ಕೃತಿ: ‘ಸಿದ್ದರಾಮಯ್ಯ ಆಡಳಿತ -ನೀತಿ ನಿರ್ಧಾರ’ ಸಿದ್ದರಾಮಯ್ಯ ಅವರ 75ನೇ ಜನ್ಮದಿನೋತ್ಸವ ಅಂಗವಾಗಿ ಅವರ ಆಡಳಿತ ಕುರಿತ 450 ಪುಟಗಳ ಬೃಹತ್‌ ಕೃತಿಯಾಗಿದೆ. ಸಾಹಿತಿ ಕಾ.ತ.ಚಿಕ್ಕಣ್ಣ ಹಾಗೂ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು ಸಂಪಾದಿಸಿರುವ ಈ ಕೃತಿಯಲ್ಲಿ 27 ಮಂದಿ ಖ್ಯಾತ ಲೇಖಕರು ಸಿದ್ದರಾಮಯ್ಯ ಅವರ ಆಡಳಿತ ಮತ್ತು ಪರಿಣಾಮದ ಕುರಿತು ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಕೃತಿಯಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ ರೂಪಿಸಿದ್ದ ಯೋಜನೆಗಳಲ್ಲಿ ಸಂವಿಧಾನದ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯದ ಅನುಷ್ಠಾನದ ಬಗ್ಗೆ ವಸ್ತುನಿಷ್ಠ ಮತ್ತು ವಿಮರ್ಶಾತ್ಮಕ ಲೇಖನಗಳಿವೆ.

ಆರ್‌ಎಸ್‌ಎಸ್‌ ಕಚೇರಿ ಪ್ರವೇಶಿಸಲು ಸಾಧ್ಯವಿಲ್ಲ: ಆರ್‌ಎಸ್‌ಎಸ್‌ ಕಚೇರಿಗೆ ದಲಿತರು ಪ್ರವೇಶಿಸಲು ಸಾಧ್ಯವಿಲ್ಲ. ಶೂದ್ರ ಸಮಾಜಕ್ಕೆ ಸಾವಿರಾರು ವರ್ಷಗಳಿಂದ ಸೂಕ್ತ ಸ್ಥಾನಮಾನ ಲಭಿಸಿಲ್ಲ. ಇನ್ನು ಆರ್‌ಎಸ್‌ಎಸ್‌ ಕಚೇರಿಗೆ ಮತ್ತು ವೇದಿಕೆಗೆ ಕರೆಯುವವರು ಯಾರು?, ಆದರು ಅವರ ಬೆನ್ನು ಹತ್ತಲಾಗಿದೆ. ಈಗ ಮತ್ತಷ್ಟುತುಳಿದು ಪಾತಾಳಕ್ಕೆ ತಳ್ಳುತ್ತಾರೆ. ಈ ಬಗ್ಗೆ ಜನರಲ್ಲಿ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು ಎಂದರು. ರೈಲ್ವೆ ಇಲಾಖೆಯಲ್ಲಿ 26 ಲಕ್ಷ ಹುದ್ದೆಗಳು ಖಾಲಿ ಇವೆ. ಅಧಿಕಾರವನ್ನು ಮತ್ತು ಹುದ್ದೆಗಳನ್ನು ಮೊಟಕುಗೊಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದರ ವಿರುದ್ಧ ಧ್ವನಿ ಎತ್ತುವವರಿಗೆ ಬೆಂಬಲ ನೀಡುತ್ತಿಲ್ಲ. 

ಸಿದ್ಧಾಂತದಲ್ಲಿ ಉದಾರತೆ ಇದ್ದವರು ಸಿದ್ದರಾಮಯ್ಯ ಅವರನ್ನು ಬಿಟ್ಟು ಓಡಿ ಹೋದರು. ಈಗ ಐದು ರೂಪಾಯಿಗೆ ಹೋಗಿ ಕೈಕಟ್ಟಿನಿಂತಿರುತ್ತಾರೆ. ನಮ್ಮ ತತ್ತ್ವ ಸಿದ್ಧಾಂತಕ್ಕೆ ಬೆಂಬಲ ಸಿಗಲಿಲ್ಲ ಎಂಬ ಬೇಸರವಿದೆಯೇ ಹೊರತು ಸೋಲಿನ ಬಗ್ಗೆ ಚಿಂತೆ ಇಲ್ಲ ಎಂದರು. ಸೋಲಿಸುವ ಗುರಿ ಹೊಂದಿದ್ದವರ ವಿರುದ್ಧ ಗೆಲ್ಲಿಸುವ ಗುರಿಯನ್ನು ಹೊಂದಬೇಕಿದೆ. ವಿಚಾರ, ಆಚಾರ, ಪ್ರಚಾರ ಬಹಳ ಮುಖ್ಯ. ಯಾವುದೇ ವ್ಯಕ್ತಿ ಸಮಾಜಕ್ಕೆ ಮುಖ್ಯವಾಗುತ್ತಾನೆ. ಸಿದ್ದರಾಮಯ್ಯ ಅವರ ಕಾಲದ ಆಡಳಿತವನ್ನು ಒಪ್ಪಿಕೊಂಡು ಬೇರೆಯವರಿಗೆ ಹೇಳದಿದ್ದರೆ ಪ್ರಯೋಜನ ಆಗುವುದಿಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆಯವರೇ ಅಪಾಯದ ಕತ್ತಿ ನಿಮ್ಮ‌ ತಲೆ ಮೇಲಿದೆ: ಬಿಜೆಪಿ ಏಟು

ಅನ್ನಭಾಗ್ಯ ಯೋಜನೆಗೆ ಆಕ್ಷೇಪ ಬಂದರೂ ಅದರಿಂದಾದ ಪ್ರಯೋಜನ ಗಮನಿಸಬೇಕು. ಸಿದ್ದರಾಮಯ್ಯ ಮೌಢ್ಯ ಮೀರಿ ನಡೆದುಕೊಂಡರು. ರಾಜಕೀಯ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಅವರ ಆಡಳಿತದ ಜನಪರವಾಗಿತ್ತು.
-ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

Follow Us:
Download App:
  • android
  • ios