ವಿದೇಶದಿಂದ ಕಪ್ಪು ಹಣ ತಂದು ಪ್ರಜೆಗಳ ಖಾತೆಗೆ 15 ಲಕ್ಷ ಹಾಕುವುದಾಗಲಿ, ಮಹಿಳೆಯರ ಸುರಕ್ಷತೆ ಯಾವುದೂ ಸಾಧ್ಯವಾಗಿಲ್ಲ. ಮೋದಿಜಿಯವರು ಮಾತೆತ್ತಿದರೆ ಮನ್‌ ಕಿ ಬಾತ್‌ ಎನ್ನುತ್ತಾರೆ. ತಮ್ಮ ಮನದ ಮಾತನ್ನೇ ಹೇಳುತ್ತಾ ಹೋದರೆ ವಿನಃ ಜನಸಾಮಾನ್ಯರ ಮಾತನ್ನು ಕೇಳಿಯೇ ಇಲ್ಲ ಎಂದ ಮಹಾದೇವಿ ಗೋಕಾಕ 

ವಿಜಯಪುರ(ಮೇ.07):  ವಿದೇಶದಿಂದ ಕಪ್ಪು ಹಣ ತಂದು ಬಡವರ ಖಾತೆಗೆ ಹಾಕಲಿಲ್ಲ ಪ್ರಧಾನಿ ನರೇಂದ್ರ ಮೋದಿ ಅವರು. ಬರೀ ಸುಳ್ಳು ಹೇಳಿ ಮೋಡಿ ಮಾಡುತ್ತಿದ್ದಾರೆ ಅಷ್ಟೇ ಎಂದು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷೆ ಮಹಾದೇವಿ ಗೋಕಾಕ ಟೀಕಿಸಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಅವರು ಜನರಿಗೆ ಕೊಟ್ಟ ಆಶ್ವಾಸನೆಗಳು ಒಂದೂ ಅನುಷ್ಠಾನಕ್ಕೆ ಬಂದಿಲ್ಲ. ಯುವಕರ ಉದ್ಯೋಗದ ಭರವಸೆ ಆಶ್ವಾಸನೆಯಾಗಿಯೇ ಉಳಿಯಿತು ಎಂದು ಹೇಳಿದರು.

ವಿದೇಶದಿಂದ ಕಪ್ಪು ಹಣ ತಂದು ಪ್ರಜೆಗಳ ಖಾತೆಗೆ 15 ಲಕ್ಷ ಹಾಕುವುದಾಗಲಿ, ಮಹಿಳೆಯರ ಸುರಕ್ಷತೆ ಯಾವುದೂ ಸಾಧ್ಯವಾಗಿಲ್ಲ. ಮೋದಿಜಿಯವರು ಮಾತೆತ್ತಿದರೆ ಮನ್‌ ಕಿ ಬಾತ್‌ ಎನ್ನುತ್ತಾರೆ. ತಮ್ಮ ಮನದ ಮಾತನ್ನೇ ಹೇಳುತ್ತಾ ಹೋದರೆ ವಿನಃ ಜನಸಾಮಾನ್ಯರ ಮಾತನ್ನು ಕೇಳಿಯೇ ಇಲ್ಲ ಎಂದರು.

ಬಜರಂಗದಳ ನಿಷೇಧದ ಕಾಂಗ್ರೆಸ್‌ ಪ್ರಣಾಳಿಕೆಗೆ ರಮ್ಯಾ ಆಕ್ಷೇಪ

ಬಿಜೆಪಿ ಸರ್ಕಾರದ ದುರಾಡಳಿತದಿಂದ ದೇಶದಲ್ಲಿ ಬೆಲೆ ಏರಿಕೆ, ಕೋಮು ಗಲಭೆಗಳು ಸೇರಿದಂತೆ ಅಶಾಂತಿ ಹೆಚ್ಚಾಗಿದೆ. ಆದ್ದರಿಂದ ಪರಿಸ್ಥಿತಿ ಕೈ ಮೀರಿ ಹೋಗುವುದಕ್ಕಿಂತ ಮುಂಚೆ ಜನಸಾಮಾನ್ಯರು ಎಚ್ಚೆತ್ತುಕೊಂಡು ಮೇ 10ರಂದು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಮೂಲಕ ಸುಭದ್ರ ಸರ್ಕಾರ ರಚನೆಗೆ ಅಣಿಯಾಗಬೇಕು ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮಾತನಾಡಿ, ಬೆಲೆ ಏರಿಕೆ, ಜಿಎಸ್‌ಟಿ ಹೊಡೆತ ಒಂದು ಸಣ್ಣ ವಸ್ತುವಿನ ಮೇಲೆಯೂ ಜಿಎಸ್‌ಟಿ ಹಾಕಿದ್ದಾರೆ. ಮಕ್ಕಳು ಕುಡಿಯುವ ಹಾಲಿನಿಂದ ಹಿಡಿದು ಬಂಗಾರದ ವರೆಗೂ ಜಿಎಸ್‌ಟಿ ಇದೆ. ಇದರಿಂದ ಬಡವರು ಮಕ್ಕಳಿಗೆ ಹಾಲನ್ನು ಹೇಗೆ ಕುಡಿಸಬೇಕು. ಅವರಿಗೆ ಪೌಷ್ಠಿಕಾಂಶದ ಕೊರತೆಯನ್ನು ಹೇಗೆ ನೀಗಿಸಬೇಕೆಂಬುದೇ ಪ್ರಶ್ನೆಯಾಗಿದೆ. ಶಾಲಾ ಮಕ್ಕಳ ನೋಟ್‌ಬುಕ್‌ ಹಾಗೂ ಪೆನ್ನುಗಳ ಮೇಲೆಯೂ ಜಿಎಸ್‌ಟಿ ಹಾಕಿದ್ದಾರೆ. ಪರಿಸ್ಥಿತಿ ಕೈ ಮೀರಿ ಹೋಗುವುದಕ್ಕಿಂತ ಮುಂಚೆ ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು ಎಂದರು.

ಪಂಚಮಸಾಲಿ ಸಮಾಜ ಬಿಜೆಪಿ ಬೆಂಬಲಿಸಲಿ: ಯತ್ನಾಳ

ಜಯಶ್ರೀ ಭಾರತೆ, ಭಾರತೀ ನಾವಿ, ಗಂಗೂಬಾಯಿ ಧುಮಾಳೆ, ಭಾರತಿ ಹೊಸಮನಿ, ಆಸ್ಮಾ ಕಾಲೇಬಾಗ, ಆರತಿ ಶಹಾಪುರ, ಹಮೀದಾ ಪಟೇಲ, ಹುಸೇನ ಬಾನು ಹತ್ತರಕಾಳ, ಲಕ್ಷಿತ್ರ್ಮೕ ಕ್ಷೀರಸಾಗರ, ಕಾಶೀಬಾಯಿ ಹಡಪದ, ಸಂಜನಾ ಭಜಂತ್ರಿ, ಶಮೀಮ ಅಕ್ಕಲಕೋಟ ಮುಂತಾದವರು ಇದ್ದರು.

ಬಸವಣ್ಣನವರ ಹೆಸರನ್ನು ಹೊಂದಿದ ಬಸನಗೌಡರು ಅವರ ಹೆಸರಿಗೆ ಕಳಂಕ. ನಗರದ ಅಭಿವೃದ್ಧಿ ಚಿಂತನೆ ಮಾಡದೆ ಪರರ ನಿಂದನೆಯಲ್ಲೇ ಕಾಲ ಕಳೆದರು. ಹಿರಿ-ಕಿರಿಯರನ್ನು, ಅನ್ಯ ಸಮಾಜದವರನ್ನು, ತಮ್ಮ ಸಮಾಜದವರನ್ನು ಬೈದರು. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ ಅವರನ್ನೂ ಬಿಡಲಿಲ್ಲ ವಿಷ ಕನ್ಯೆ ಎಂದರು. ಹಿಂದೂ ಸಂಸ್ಕೃತಿಯಲ್ಲಿ ಸ್ತ್ರೀಗೆ ದೇವತೆ ಸ್ಥಾನ ನೀಡಿದ್ದಾರೆ. ಹಿಂದೂ ಸಂಸ್ಕೃತಿಯಲ್ಲಿ ಜನಿಸಿ ಸ್ತ್ರೀಗೆ ನಿಂದಿಸಿರುವುದು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಅಂತ ಮಹಿಳಾ ಕಾಂಗ್ರೆಸ್‌ ನಾಯಕಿ ಮಂಜುಳಾ ಗಾಯಕವಾಡ ತಿಳಿಸಿದ್ದಾರೆ.