Asianet Suvarna News Asianet Suvarna News

ಕಾಂಗ್ರೆಸ್‌ ನಾಯಕಿ ಖುಷ್ಬೂ ಇಂದು ಬಿಜೆಪಿ ಸೇರ್ಪಡೆ?

ಕಾಂಗ್ರೆಸ್‌ ನಾಯಕಿ ಖುಷ್ಬು ಇಂದು ಬಿಜೆಪಿ ಸೇರ್ಪಡೆ?| ಕನ್ನಡ ಸೇರಿ ಬಹುಭಾಷಾ ತಾರೆ ಹಾಗೂ ಕಾಂಗ್ರೆಸ್‌ ವಕ್ತಾರೆ ಖುಷ್ಬು ಸುಂದರ್‌| ಅನುಮಾನಕ್ಕೆ ಎಡೆ ಮಾಡಿಕೊಟ್ಟ ಟ್ವೀಟ್

Congress Leader Kushboo May Join BJP pod
Author
Bangalore, First Published Oct 12, 2020, 8:44 AM IST
  • Facebook
  • Twitter
  • Whatsapp

ಚೆನ್ನೈ(ಅ.12): ಕನ್ನಡ ಸೇರಿ ಬಹುಭಾಷಾ ತಾರೆ ಹಾಗೂ ಕಾಂಗ್ರೆಸ್‌ ವಕ್ತಾರೆ ಖುಷ್ಬು ಸುಂದರ್‌ ಅವರು ಸೋಮವಾರ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಇದಕ್ಕೆ ಇಂಬು ನೀಡುವಂತೆ ತಮ್ಮ ಟ್ವೀಟರ್‌ ಖಾತೆಯಲ್ಲಿ ಹಿಂದೂ ಸಂಪ್ರದಾಯದಂತೆ ಹಣೆಗೆ ತಿಲಕವಿಟ್ಟಿದ್ದನ್ನು ಎದ್ದುಕಾಣುವಂತಿರುವ ಹೊಸ ಫೋಟೋವೊಂದನ್ನು ಟ್ವೀಟ್‌ ಮಾಡಿದ್ದು, ಹಲವರು ನನ್ನಲ್ಲಿ ಬದಲಾವಣೆಗಳನ್ನು ಗುರುತಿಸುತ್ತಿದ್ದಾರೆ. ನಾವೆಲ್ಲರೂ ಕಲಿಯುತ್ತಾ ಬೆಳೆಯುತ್ತೇವೆ. ಇಷ್ಟ-ಅನಿಷ್ಟ, ಯೋಚನೆ ಮತ್ತು ಸಿದ್ಧಾಂತಗಳು ಹೊಸ ಕನಸಿನೊಂದಿಗೆ ಹೊಸ ರೂಪ ಪಡೆಯುತ್ತಿವೆ.

ನೀವು ಇಷ್ಟ ಮತ್ತು ಪ್ರೀತಿಯ ಜೊತೆಗಿನ ವ್ಯತ್ಯಾಸ ಹಾಗೂ ತಪ್ಪು ಮತ್ತು ಸರಿಗಳ ಮಧ್ಯೆಯ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ. ಜೀವನದಲ್ಲಿ ಬದಲಾವಣೆ ಅನಿವಾರ್ಯ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ವಿರೋಧ ನಿಲುವು ಅನುಸರಿಸಿದ್ದ ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಖುಷ್ಬು ಸುಂದರ್‌ ಬಹಿರಂಗವಾಗಿಯೇ ಸಮರ್ಥಿಸಿದ್ದರು.

ಆದರೆ, ನೂತನ ಶಿಕ್ಷಣ ಕುರಿತಾಗಿ ಪ್ರಧಾನಿ ಮೋದಿಯನ್ನು ಪ್ರಶಂಸಿಸಿ, ಎನ್‌ಇಪಿ ಕುರಿತಾಗಿ ಪಕ್ಷದ ವಿರೋಧಿ ನಿಲುವು ಅನುಸರಿಸಿದ್ದಕ್ಕಾಗಿ ರಾಹುಲ್‌ ಗಾಂಧಿ ಅವರಲ್ಲಿ ಕ್ಷಮೆ ಕೋರಿದ್ದರು.

Follow Us:
Download App:
  • android
  • ios